ಶುದ್ಧಿಕರಿಸಿದ ನೀರು ಕುಡಿಯಲು ಮನವಿ

0
20
loading...

ಗೋಕಾಕ 25: ಕುಡಿಯುವ ನೀರು ಪೂರೈಕೆ ಮೂಲವಾದ ಸಿಂಗಳಾಪೂರ ಬ್ಯಾರೇಜ್ ಹತ್ತಿರ ಘಟಪ್ರಭಾ ನದಿ ನೀರು ಪೂರ್ತಿ ಬತ್ತಿ ಹೋಗಿದ್ದು ನದಿಯಲ್ಲಿ ಅಲ್ಲಲ್ಲಿ ಮಡುವಿನಲ್ಲಿ ನಿಂತ ನೀರನ್ನು ಪಂಪಸೆಟ್‍ಗಳ ಮೂಕಾಂತರ ಇಂಟಿಕ್ವೆಲ್ ಹರಿಸಿ, ಶುದ್ಧಿಕರಿಸಿ ಸಾರ್ವಜನಿಕರಿಗೆ ಪೂರೈಸಲಾಗುತ್ತಿದೆ.
ಹೀಗಾಗಿ ಗೋಕಾಕ ನಗರದ ವ್ಯಾಪ್ತಿಯಲ್ಲಿಯ ಸಾರ್ವಜನಿಕರು ಈ ನಿಂತ ನೀರು ಕುಡಿಯಲು ಉಪಯೋಗವಿಲ್ಲದ ಕಾರಣ ನೀರನ್ನು ಕುಡಿಯಲು ಉಪಯೋಗಿಸದೆ ಬಳಸಲು ಮಾತ್ರ ಉಪಯೋಗಿಸಬೇಕು. ನಗರದಲ್ಲಿ ನಗರಸಭೆಯಿಂದ ಕೊರೆಸಿದ ಕೊಳವೆ ಭಾವಿಗಳ ನೀರನ್ನು ಸಂಗ್ರಹಿಸಿ ಕುದಿಸಿ ಆರಿಸಿ ಕುಡಿಯಬೇಕೆಂದು ನಗರಸಭೆ ಪೌರಾಯುಕ್ತ ವಿ ಸಿ ಚಿನ್ನಪ್ಪಗೌಡರ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here