ಶ್ರೀ ಮಾರಿಕಾಂಬದೇವಿಯ ಕುಂಭಾಭಿಷೇಕವು ಅದ್ದೂರಿಯಿಂದ ನಡೆಯಿತು

0
25
loading...


ಮುಂಡಗೋಡ : ತಾಲೂಕಿನ ಕಾತೂರ ಗ್ರಾಮದಲ್ಲಿ ಶ್ರೀ ಮಾರಿಕಾಂಬದೇವಿಯ(ದ್ಯಾಮವ್ವ) ಶುಕ್ರವಾರ ಮುಂಜಾನೆ ಕುಂಭಾಭಿಷೇಕ ಧಾರ್ಮಿಕ ಕಾರ್ಯಜರುಗಿತು.
ಶುಕ್ರವಾರ ಪ್ರಾಥಃಕಾಲ ಶ್ರೀ ಇಂದ್ರಚಾರ ಧರ್ಮದರ್ಶಿಗಳು ಶ್ರೀ ಕ್ಷೇತ್ರ ಶಿರಸಂಗಿ ಇವರಿಂದ ಶ್ರೀದೇವಿಗೆ ಹೋಮ ಹವನ ಕಾರ್ಯಕ್ರಮಗಳು ಜರುಗಿತು. ನಂತರ ಬಾಜಾ ಭಜಂತ್ರಿಯೊಂದಿಗೆ ಕುಂಭತ್ಸೋವವು ಜರುಗಿತು ದೇವಿ ದೇವಸ್ಥಾನದಿಂದ ಹೊರಟ ಕುಂಭೋತ್ಸವದಲ್ಲಿ ಸುಮಾರು 500 ಕುಂಭಗಳನ್ನು ಹೊತ್ತ ಮುತೈದಿಯರು ಹಾಗು ಯುವತಿಯರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಿ ದೇವಸ್ಥಾನ ತಲುಪಿದರು. 500 ಕುಂಭಗಳ ಜಲದಿಂದ ಶ್ರೀ ದೇವಿಗೆ ಅಭಿಷೇಕ ಪೂಜೆ ಮಾಡಲಾಯಿತು. ನಂತರ ಧಾರ್ಮಿಕ ಕಾರ್ಯಗಳು ಜರುಗಿ ಶ್ರೀ ಅಮ್ಮನವರಿಗೆ ಉಡಿತುಂಬುವ ಕಾರ್ಯ ಜರುಗಿತು. ಪೂಜಾ ಕೈಂಕರ್ಯಗಳನ್ನು ಹನಮಾಪೂರ ಕಾಳಿಕಾಮಠದ ಶ್ರೀಗಳಾದ ಸದಾನಂದ ಶಿವಾಚಾರ್ಯ ಮಹಾಸ್ವಾಮಿಗಳು ನಡೆಸಿಕೊಟ್ಟರು.
ಮಧ್ಯಾಹ್ನ ಶ್ರೀ ಮಾರಿಕಾಂಬ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಿಯ ದರ್ಶನ ಪಡೆಯಲು ಬಂದಂತಹ ಭಕ್ತರು ಅನ್ನಸಂತರ್ಪಣೆ ಯಲ್ಲಿ ಭಾಗವಹಿಸಿ ದೇವಿಯ ಪ್ರಸಾದ ಸ್ವೀಕರಿಸಿದರು
ಅಕ್ಕಪಕ್ಕದ ಗ್ರಾಮದ ನೂರಾರು ಭಕ್ತರು ಸೇರಿದಂತೆ ಮಾಜಿ ಶಾಸಕ ವ್ಹಿ.ಎಸ್.ಪಾಟೀಲ, ಕಾತೂರ ವಲಯದ ರೇಂಜರ ಶ್ರೀಧರ ತೆಗ್ಗಿನಮನಿ ದೇವಿ ದರ್ಶನ ಪಡೆದು ಪುನಿತರಾದರು
ದೇವಿಯ ಧಾರ್ಮಿಕ ಕಾರ್ಯಗಳ ಉಸ್ತುವಾರಿಯನ್ನು ದೇವಸ್ಥಾನದ ಜೀರ್ಣೋದ್ದಾರ ಕಮಿಟಿಯ ಅಧ್ಯಕ್ಷ ಅಜ್ಜಪ್ಪ ಕಡಬಗೇರಿ ಹಾಗು ಜಾತ್ರಾ ಕಮೀಟಿಯ ಅಧ್ಯಕ್ಷ ನಾಗೇಂದ್ರ ವರ್ದಿ ಜಾತ್ರಾ ಕಮೀಟಿಯ ಕಾರ್ಯದರ್ಶಿ ಈಶ್ವರ ಪಾಟೀಲ, ನಾರಾಯಣ ಕಲಾಲ, ಅಜ್ಜಪ್ಪ ಬಾಗಿಲದವರ, ಶಾಂತೇಶ ಕಡಬಗೇರಿ, ಮಂಜು ಜಾಡರ, ಮುತ್ತು ಬಾಗಿಲದವರ, ಶಿವಾಜಿ ಸಿಂಧೆ, ಶಿವಾಜಿ ಪಾಠಣಕರ, ಗಣಪತಿ ರಾಯ್ಕರ, ನಾಗರಾಜ ಬೋಳನ್ನವರ ಸೇರಿದಂತೆ ಮುಂತಾದವರು ಉಸ್ತುವಾರಿ ವಹಿಸಿದ್ದರು.
ದೇವಸ್ಥಾನದ ಜೀರ್ಣೋದ್ದಾರ ಕಮಿಟಿ ಹಾಗೂ ಜಾತ್ರಾ ಕಮೀಟಿಯಿಂದ ಹನಮಾಪೂರ ಕಾಳಿಕಾಮಠದ ಶ್ರೀಗಳಾದ ಸದಾನಂದ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಸನ್ಮಾನಿಸಲಾಯಿತು.

loading...

LEAVE A REPLY

Please enter your comment!
Please enter your name here