ಹಜರತ್ ಗೌಸ್-ಎ-ಪಾಕ್, ಮೊಹೆ – ಮುಬಾರಕ

0
28
loading...

ದಾಂಡೇಲಿ : ನಗರದ ಫೈಜಾನೆ-ಎ-ಗೌಸ-ಆಜಮ್ ಕಮೀಟಿ ಮತು ರೋಹಾನಿ ಮೊಹರಮ್ ಕಮೀಟಿ ಆಶ್ರಯದಲ್ಲಿ ಹಜರತ್ ಗೌಸ-ಎ-ಪಾಕ್, ಮೊಹೆ ಮುಬಾರಕ (ಗೇಸು) ಷಾ ಖಾನೆ ಅಬ್ದುಲ ಖಾದರ ಜಿಲಾನಿ, ಗೌಸ-ಎ-ಆಜಮ್ ರವರ ಸಂದಲ್ ಕಾರ್ಯವನ್ನು ನಗರದ ಹಳಿಯಾಳ ರಸ್ತೆಯಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಆರಂಭಕ್ಕೂ ಮುನ್ನ ಗಾಂಧಿನಗರದಿಂದ ಕಾರ್ಯಕ್ರಮ ನಡೆಯುವ ಹಳಿಯಾಳ ರಸ್ತೆಯವರೆಗೆ ಭವ್ಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ನಡೆದ ಸಮಾರಂಭದಲ್ಲಿ
ಸೈಯದ ಆದಂ ಶಾ ಖಾದ್ರಿ, ಸೈಯದ ಮೊದಿನ್ ಸಾ ಖಾದ್ರಿ ಬಾಗೇವಾಡಿ, ದಾಂಡೇಲಿಯ ಶಾಫಿ ಮಹಮ್ಮದ ಹುಸೇನ, ಮಾರೂಫಿ ಮೊದಲಾದ ಧರ್ಮಗುರುಗಳು ಧಾರ್ಮಿಕ ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ಮುಸ್ಲಿಂ ಮುಖಂಡರುಗಳಾದ ರಫೀಕ ಹುದ್ದಾರ, ಇಮ್ರಾನ್ ಮೊಕಾಶಿ, ಇಬ್ರಾಹಿಂ ನೂರಿ, ನಬೀ ಬಿಜಾಪುರ, ಅಯಜಾಜ ಶೇಖ, ಅಬ್ದುಲ ಖಾದರ ದಾನೇಬಾಗ ಶೇಖ, ಹಬೀಬ ಅಬ್ಬಾಸ, ಸುಭಾಸ ನಗರ ಮಸೀದಿಯ ಅಧ್ಯಕ್ಷ ಗೌಸ ಖತೀಬ, ಗುತ್ತಿಗೆದಾರ ಮುಸ್ತಾಕ ಮಿಶ್ರಿಕೋಟಿ, ಸಮಾಜ ಸೇವಕ ಅಬ್ದುಲ ವಹಾಬ ಬಂಸಾರಿ, ರಫೀಕ ಖಾನ, ತಾಯೇಬ್ ಜಾನ್, ಇಬ್ರಾಹಿಂ ಕೆರೂರ, ಇಕ್ಬಾಲ್ ದೇಸನೂರು ಹಾಗೂ ಗೌಸ ತಾಜೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದಲ್ಲಿ ಚಿತ್ರಕಲೆಯಲ್ಲಿ ಮೊದಲನೇ ಸ್ಥಾನ ಪಡೆದ ನಗರದ ಜೆವಿಡಿ ಪ್ರೌಢಶಾಲೆಯ ವಿದ್ಯಾರ್ಥಿ ಮನ್ಸೂರ ಮಹ್ಮದಗೌಸ ಬೇಟಗೇರಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಬೈಲಪಾರಿನ ಯುವ ಸಂಘಟನೆಯವರು ರಾತೀಬ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

loading...

LEAVE A REPLY

Please enter your comment!
Please enter your name here