ಹಣಕ್ಕಾಗಿ ಸುದ್ದಿ ಪ್ರಕಟಣೆ ವಿರುದ್ಧ ಪ್ರಕರಣ: ಪ್ರಸಾದ

0
25
loading...

ಬೆಳಗಾವಿ 17: 2013 ರಲ್ಲಿ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಪರವಾಗಿ ಸುದ್ದಿ ಹಾಗೂ ಅವರ ಸಂದರ್ಶನ ಪ್ರಕಟಿಸಿದ ಆಧಾರದ ಮೇಲೆ ಎಂಸಿಎಂಸಿ ಕಮಿಟಿ ವರದಿ ಆಧರಿಸಿ ರಾಜ್ಯ ಚುನಾವಣಾ ಆಯೋಗ ವಿವಿಧ ಪತ್ರಿಕೆಗಳ ವಿರುದ್ದ 55 ಹಣಕ್ಕಾಗಿ ಸುದ್ದಿ ಪ್ರಕಟಿಸಿದ ಕುರಿತು ಪ್ರಕರಣಗಳನ್ನು ಪ್ರೇಸ ಕೌನ್ಸಿಲ ಆಫ್ ಇಂಡಿಯಾ ಕಮಿಟಿಗೆ ದಾಖಲಿಸಿತು ಎಂದು ಕಮಿಟಿಯ ಅಧÀ್ಯಕ್ಷ ಹಾಗೂ ನ್ಯಾಯಮೂರ್ತಿ ಸಿ.ಕೆ.ಪ್ರಸಾದ ಹೇಳಿದರು.
ಅವರು ಬುಧವಾರ ನಗರದ ಹಳೆ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ. ಕರ್ನಾಟಕ, ಆಂದ್ರಪ್ರದೇಶ ಹಾಗೂ ಪಾಂಡಿಚೇರಿ ರಾಜ್ಯಗಳ 76 ಪ್ರಕರಣಗಳಲ್ಲಿ 14 ಪ್ರಕರಣಗಳು ಪತ್ರಿಕೆಗಳ ವಿರುದ್ಧ, 7 ಪ್ರಕರಣಗಳು ಪತ್ರಿಕೆಗಳ ವತಿಯಿಂದ ಅಧಿಕಾರಿಗಳ ವಿರುದ್ಧ ಹಾಗೂ ಉಳಿದ 55 ಪ್ರಕರಣಗಳು ಕರ್ನಾಟಕ ಚುನಾವಣಾ ಆಯೋಗದಿಂದ ದಾಖಲಾಗಿವೆ. ಈ 55 ಪ್ರಕರಣದಲ್ಲಿ 2013ರಲ್ಲಿ ಕರ್ನಾಟಕ ವಿಧಾನ ಸಭಾ ಚುನಾವಣೆಯ ಸಮಯದಲ್ಲಿ ಹಣಕ್ಕಾಗಿ ಸುದ್ದಿ ಪ್ರಕಟಿಸಿದ ಕುರಿತು ಪ್ರಕರಣಗಳನ್ನು ಕರ್ನಾಟಕ ಚುನಾವಣಾ ಆಯೋಗದವರು ಪ್ರಕಟಿಸಲಾಗಿದೆ ಎಂದು 7 ಪ್ರಕರಣಗಳು ಪತ್ರಿಕೆಗಳ ವಿರುದ್ದ ಕಮಿಟಿ ಎದುರು ದೂರು ದಾಖಲಿಸಿದ್ದರು. ಆದರೆ ವಿಚಾರಣೆ ವೇಳೆ ದೂರು ನೀಡಿದ ಚುನಾವಣಾ ಆಯೋಗದವರು ಬರದೇ ಪ್ರಕರಣಕ್ಕೆ ಸಂಬಂಧÀಪಟ್ಟ ಪತ್ರಿಕೆಗಳ ಸಿಬ್ಬಂಧಿಗಳು ಮಾತ್ರ ವಿಚಾರಣೆಯಲ್ಲಿ ಹಾಜರಾಗಿದ್ದರು ಎಂದು ತಿಳಿಸಿದರು.
ಬೆಳಗಾವಿ ಪ್ರದೇಶದಲ್ಲಿನ ಪ್ರಕರಣಗಳು ಹೆಚ್ಚಾಗಿದ್ದರಿಂದ ಈ ವಿಚಾರಣೆಯನ್ನು ಇಲ್ಲಿಯೇ 15 ರಿಂದ 17ರ ವರೆಗೆ ಮೂರು ದಿನಗಳ ಕಾಲ ನಡೆಸಲಾಯಿತು. ತಮಿಳುನಾಡಿನಲ್ಲಿ ಪೊಲೀಸರಿಂದ ಹಲ್ಲೆಗೋಳಗಾದ ಪತ್ರಕರ್ತರಿಗೆ ಆರೋಗ್ಯ ವಿಮೆ ಸೌಲಭ್ಯ ನೀಡುವಂತೆ ಬಂದ ಪ್ರಕರಣಕ್ಕೆ ತಮಿಳುನಾಡು ಸರಕಾರಕ್ಕೆ ಕಮಿಟಿ ವತಿಯಿಂದ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.
ಪ್ರಕಾಶ ದುಭೆ, ಇಬ್ಹಾ ಭಾರ್ಗವ, ರವೀಂದ್ರ ಕುಷರ, ಎಸ.ಎನ.ಸಿನ್ಹಾ, ರಾಜೀವ ರಂಜನ ನಾಗ ಪ್ರಭಾತ ಕುಮಾರ ಸೇರಿದಂತೆ ಕಮಿಟಿಯ ಸದಸ್ಯರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here