ಅಕ್ರಮ ಮಣ್ಣು ಗಣಿಗಾರಿಕೆ ಮೇಲೆ ದಾಳಿ :2 ವಾಹನ ವಶ

0
50
loading...

ಚಿಂಚಲಿ 22: ಗ್ರಾಮದ ಕೃಷ್ಣಾ ನದಿಯ ದಡದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮಣ್ಣು ಗಣಿಗಾರಿಕೆ ಮಾಡುತ್ತಿದ್ದ ಅಡ್ಡೆಯ ಮೇಲೆ ರಾಯಬಾಗ ತಹಶೀಲ್ದಾರ ಪಿ.ಎನ್ ನಾಗರಹಳ್ಳಿ ಹಾಗೂ ಕುಡಚಿ ಪಿಎಸ್‍ಐ ದಾಳಿ ನಡೆಸಿ ಒಂದು ಜೆಸಿಬಿ ಹಾಗೂ ಒಂದು ಟ್ರ್ಯಾಕ್ಟರ್‍ನ್ನು ವಶಪಡಿಸಿಕೊಂಡಿದ್ದಾರೆ.
ಚಿಂಚಲಿ ಗ್ರಾಮದಲ್ಲಿ ಹಿಪ್ಪರಗಿ ಆಣೆಕಟ್ಟಿನ ಹಿನ್ನಿರಿನಿಂದ ಮುಳುಗಡೆ ಕ್ಷೇತ್ರದಲ್ಲಿ ಕಳೆದ ಎರಡು ತಿಂಗಳಿಂದ ಅವ್ಯತ್ಯವಾಗಿ ಅಕ್ರಮವಾಗಿ ಮಣ್ಣು ಗಣಿಗಾರಿಕೆಯನ್ನು ನಡೆಸಲಾಗುತ್ತಿತ್ತು. ಈ ಅಕ್ರಮ ಮಣ್ಣನ್ನು ಕೃಷ್ಣಾ ನದಿಯ ಪೂರ್ವ ಭಾಗದ ದಂಡೆ (ಒಡಲು)ಯನ್ನು ಕೊರೆದು ಜಮೀನು ಭಾಗದಲ್ಲಿ ಒಳನುಗ್ಗಿದ್ದರಿಂದ ಇದರಿಂದ ಪ್ರವಾಹ ಬಂದ ಸಂದರ್ಭದಲ್ಲಿ ಚಿಂಚಲಿ ಗ್ರಾಮದಲ್ಲಿ ನೀರು ನುಗ್ಗುತ್ತದೆ (ನಸಳುತ್ತದೆ). ಇದನ್ನು ಮನಗೊಂಡ ರಾಯಬಾಗ ತಹಶಿಲ್ದಾರ ಕೃಷ್ಣಾ ನದಿಯ ದಂಡೆಯಲ್ಲಿ ಅಕ್ರಮವಾಗಿ ಮಣ್ಣನ್ನು ಸಾಗಿಸುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿ ಮಣ್ಣನ್ನು ತುಂಬಲು ಉಪಯೋಗಿಸುತ್ತಿದ್ದ ಒಂದು ಜೆಸಿಬಿ ಮತ್ತು ಒಂದು ಟ್ರ್ಯಾಕ್ಟರ್‍ನ್ನು ವಶಪಡಿಸಿಕೊಂಡಿದ್ದಾರೆ. ಇದೆ ಸಂದರ್ಭದಲ್ಲಿ ಮಣ್ಣನ್ನು ಒಯ್ಯಲು ಬಂದು ಸುಮಾರು 10 ಕ್ಕೂ ಹೆಚ್ಚು ಟ್ರ್ಯಾಕ್ಟರ್‍ಗಳು ಪರಾರಿಯಾದವು.
ದಾಳಿಯಲ್ಲಿ ರಾಯಬಾಗ ಕಂದಾಯ ನೀರಿಕ್ಷಕ ಜೆ.ಆರ್ ಹಾವನ್ನವರ, ಕುಡಚಿ ಪಿಎಸ್‍ಐ ಜಿ.ಆಯ್ ಕಲ್ಯಾಣಶೇಟ್ಟಿ, ಡಿ.ಎಸ್ ಗೊಂದಳಿ, ಆಯ್.ಆರ್ ಬಡಿಗೇರ, ಎಚ್,ಎನ್ ಮೋಮೀನ, ವಾಯ್.ಎಸ್ ನಿಡಗುಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here