ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

0
16
loading...

ಗೋಕಾಕ 22: ತಾಲೂಕಿನ ಕೊಣ್ಣೂರ ಪುರಸಭೆ ಎರಡನೇ ಅವಧಿಗೆ ಅಧ್ಯಕ್ಷೆಯಾಗಿ ಮಾಲಾ ಬೂದಿಗೊಪ್ಪ ಉಪಾಧ್ಯಕ್ಷರಾಗಿ ಮಾರುತಿ ಪೂಜೇರಿ ಅವಿರೋಧ ಆಯ್ಕೆಯಾಗಿದ್ದಾರೆ.
ಪುರಸಭೆ ಸಭಾಭವನದಲ್ಲಿ ಮಂಗಳವಾರದಂದು ನಡೆದ ಚುನಾವಣೆ ಪ್ರತಿಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಾಲಾ ಬೂದಿಗೊಪ್ಪ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಾರುತಿ ಪೂಜೇರಿ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು ಎಂದು ತಹಶೀಲ್ದಾರ ಮತ್ತು ಚುನಾವಣೆ ಅಧಿಕಾರಿ ಜಿ ಎಸ್ ಮಹಾಜನ ಘೋಷಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯ ಅಧಿಕಾರಿ ಶಿವಾನಂದ ಹಿರೇಮಠ, ಸದಸ್ಯ ಪ್ರಕಾಶ ಕರನಿಂಗ, ವಿನೊದ ಕರನಿಂಗ ಸೇರಿದಂತೆ ಸರ್ವ ಸದಸ್ಯರು ಮತ್ತು ಪುರಸಭೆ ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದು ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದರು.

loading...

LEAVE A REPLY

Please enter your comment!
Please enter your name here