ಇಂದಿನಿಂದ ಜಿಲ್ಲೆಯಾಧ್ಯಂತ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಕಟ್ಟೆಚ್ಚರ

0
31
loading...

ಪ್ರಥಮ ಭಾರಿಗೆ ಅನ್ಯ ಇಲಾಖೆ ಸಿಬ್ಬಂದಿ, ಅಕ್ರಮ ನಡೆಯದಂತೆ ಸೂಕ್ತ ಕ್ರಮ
ಭರಮಗೌಡಾ ಪಾಟೀಲ

ಬೆಳಗಾವಿ : ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಹಿರಂಗಗೊಂಡ ನಂತರ ಎಚ್ಚೆತ್ತುಕೊಂಡಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಇಂದಿನಿಂದ ಏಪ್ರೀಲ್ 13ರ ವರೆಗೆ ನಡೆಯಲ್ಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಯಾವುದೇ ಅವಘಡ ಜರುಗದಂತೆ ಸೂಕ್ತ ಕಟ್ಟೆಚರ ವಹಿಸಿದೆ. ಚುನಾವಣೆಗಳಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಅದೇ ಮಾದರಿಯನ್ನು ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಭದ್ರತೆ ಮತ್ತು ತಪಾಸಣೆಗೂ ಅಳವಡಿಸಲಾಗಿದೆ.
ಪ್ರಥಮ ಬಾರಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಿಬ್ಬಂದಿಗಳ ಜೋತೆಗೆ ವೈದ್ಯಾಧಿಕಾರಿಗಳನ್ನು ಹೊರೆತು ಪಡಿಸಿ ಇನ್ನುಳಿದ ಇಲಾಖೆಗಳ ಸಿಬ್ಬಂದಿಗಳು ಪರೀಕ್ಷೆಯ ಮೇಲು ಉಸ್ತುವಾರಿ ವಹಿಸಲ್ಲಿದ್ದಾರೆ. ಪರೀಕ್ಷೆಯನ್ನು ಸುಗಮವಾಗಿ ನಡೆಸುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿ 20 ಲಕ್ಷ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಈ ಹಿಂದೆ ಸಂಚಾರಿ ತಪಾಸಣಾ ದಳ ಮತ್ತು ಸ್ಥಳೀಯ ತಪಾಸಣಾ ದಳದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾತ್ರ ಇರುತ್ತಿದ್ದರು. ಅಲ್ಲಲ್ಲಿ ಕೊರತೆ ಕಂಡುಬಂದರೆ ಮಾತ್ರ ಇತರೆ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿತ್ತು. ಆದರೆ ಈ ಸಲ ಎಲ್ಲ ಇಲಾಖೆ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳ ತಪಾಸಣೆಯಲ್ಲಿ ಪಾಲ್ಗೋಳ್ಳಲೇಬೇಕು.
ವೈದ್ಯಾಧಿಕಾರಿಗಳನ್ನು ಹೊರೆತುಪಡಿಸಿ ರಾಜ್ಯ ಸರಕಾರದ ಎಲ್ಲ ಇಲಾಖೆಯ ತಾಲೂಕಾ ಮಟ್ಟದ ಗೆಜೆಟೆಡ್ ಅಧಿಕಾರಿಗಳು ಸಂಚಾರಿ ತಪಾಸಣಾ ದಳಕ್ಕೆ ನೇಮಿಸಲಾಗಿದೆ. ಪ್ರತಿಯೊಂದು ಅಧಿಕಾರಿಗಳ ತಂಡಕ್ಕೆ 6ರಿಂದ 8 ಪರೀಕ್ಷಾ ಕೇಂದ್ರಗಳ ಜವಾಬ್ದಾರಿ ವಹಿಸಲಾಗುತ್ತದೆ ಎಲ್ಲ ಪರೀಕ್ಷಾ ಕೇಂದ್ರಗಳಿಗೂ ಅಧಿಕಾರಿಗಳು ಭೇಟಿ ನೀಡಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದರೆ ಅದರ ವರದಿ ನೀಡಬೇಕು. ವರದಿ ನೀಡಿದರೆ ಸಾಲದು ಅಕ್ರಮ ನಡೆಯದಂತೆ ಕ್ರಮ ಕೈಗೊಳಬೇಕು.
ಒಬ್ಬ ಅಧಿಕಾರಿಗೆ ಯಾವ ಯಾವ ಪರೀಕ್ಷಾ ಕೇಂದ್ರಗಳನನು ವಹಿಸಲಾಗಿದೆ ಎಂಬುದನ್ನು ಮುಂಚಿತವಾಗಿ ತಿಳಿಸುವುದಿಲ್ಲ. ಪರೀಕ್ಷೆಯ ದಿನ ಮುಂಜಾನೆ ಅವರಿಗೆ ಪರೀಕ್ಷಾ ಕೇಂದ್ರಗಳ ಪಟ್ಟಿ ನೀಡಲಾಗುತ್ತದೆ. ಆ ಪ್ರಕಾರ ಅಧಿಕಾರಿಗಳು ಸಂಚಾರಿ ತಪಾಸಣಾ ಕಾರ್ಯ ನಿರ್ವಹಿಸಲ್ಲಿದ್ದಾರೆ. ಪರೀಕ್ಷಾ ಸಮಯದಲ್ಲಿ ಸಂಜೆ 6ರಿಂದ ರಾತ್ರಿ 9 ಗಂಟೆ ವರೆಗೆ ವಿದ್ಯುತ್ ಕಡಿತಗೊಳಿಸದಂತೆ ಇಂದನ ಇಲಾಖೆ ಕ್ರಮ ಕೈಗೊಂಡಿದೆ.
ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 457 ಪ್ರೌಢಶಾಲೆಗಳ ಒಟ್ಟು 32303 ವಿದ್ಯಾರ್ಥಿಗಳಲ್ಲಿ 17057 ಬಾಲಕರು ಹಾಗೂ 15246 ಬಾಲಕಿಯರು ಪರೀಕ್ಷೆಯನ್ನು ಬರೆಯಲ್ಲಿದ್ದು 117 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 509 ಪ್ರೌಢಶಾಲೆಗಳ ಒಟ್ಟು 38925 ವಿದ್ಯಾರ್ಥಿಗಳಲ್ಲಿ 21494 ಬಾಲಕರು ಹಾಗೂ 17431 ಬಾಲಕಿಯರು ಪರೀಕ್ಷೆ ಎದುರಿಸಲ್ಲಿದ್ದಾರೆ. ಒಟ್ಟು 132 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಖಂಡ ಬೆಳಗಾವಿ ಜಿಲ್ಲೆಯ 966 ಪ್ರೌಢಶಾಲೆಗಳ 71228 ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಲ್ಲಿದ್ದು ಜಿಲ್ಲೆಯಾಧ್ಯಂತ 249 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪರೀಕ್ಷಾ ಸಮಯದಲ್ಲಿ ಕೇಂದ್ರಗಳ ಸುತ್ತಮುತ್ತ ಯಾವುದೇ ಅಕ್ರಮ ಚಟುವಟಿಕೆ ನಡೆಯಂದತೆ, ಸಿಸಿಟಿವಿ ಕ್ಯಾಮೆರಾ, ಪೊಲೀಸ್ ಭದ್ರತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಸೌಕರ್ಯಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

=>
ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ರಾಜ್ಯದಲ್ಲೇ ಹೆಸರು ಗಳಿಸಿಕೊಂಡಿರುವ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ತನ್ನದೇ ಆದ ವಿಶೇಷ ಸ್ಥಾನ ಹೊಂದಿದೆ.ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ,ಮಕ್ಕಳ ಕಲಿಕೆಗೆ ಹೆಚ್ಚಿನ ಆಧ್ಯತೆ ನೀಡುವ ಮೂಲಕ ಪ್ರಸಕ್ತ ವರ್ಷದ ಪರೀಕ್ಷೆ ಫಲಿತಾಂಶದಲ್ಲಿಯೂ ಕಳೆದ ವರ್ಷಗಳಿಗಿಂತ ಹೆಚ್ಚಿನ ಸಾಧನೆ ತೋರುವ ನಿಟ್ಟಿನಲ್ಲಿ ಮಕ್ಕಳನ್ನು ಸಜ್ಜುಗೊಳಿಸಲಾಗಿದೆ
ಗಜಾನನ ಮನ್ನಿಕೇರಿ
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಿಕ್ಕೋಡಿ

loading...

LEAVE A REPLY

Please enter your comment!
Please enter your name here