ಇಂದು ಹೋಳಿ ಹಬ್ಬದಲ್ಲಿ ಮಹಿಳಾ ಸಂಭ್ರಮ

0
29
loading...

ಬೆಳಗಾವಿ 23: ಇಂದು ನಗರದ ಕ್ಲಬ್ ರಸ್ತೆಯಲ್ಲಿರುವ ಬೆಳಗಾಮ್ ಕ್ಲಬ್‍ನಲ್ಲಿ ಮಹಿಳೆಯರಿಗಾಗಿಯೇ ಸಾಮೂಹಿಕ ಹೋಲಿ ಆಚರಣೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವುಮೇನಿಯಾ ಹೋಲಿ ಎಂಬ ಹೆಸರಿನಲ್ಲಿ ಕೆ.ಪಿ.ಸಿ.ಸಿ ಮಹಿಳಾ ಘಟಕದ ಅಧ್ಯಕ್ಷ ಲಕ್ಷ್ಮೀ ಹೆಬ್ಬಾಳಕರ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದಾರೆ.
ಮೆಹಿಳೆಯರು ಅಡುಗೆ ಮನೆ ಬಿಟ್ಟು ಹೊರಗೆ ಬರಬೇಕು ಪುರುಷರಂತೆ ಅವರೂ ಸಾಮೂಹಿಕವಾಗಿ ಹಬ್ಬ ಆಚರಣೆ ಮಾಡಬೇಕು. ಮಹಿಳೆಯರ ಮತ್ತು ಮಕ್ಕಳ ಮನರಂಜನೆಗಾಗಿ ಏನಾದ್ರೂ ಕಾರ್ಯಕ್ರಮ ಮಾಡಲೇಬೇಕು ಎಂಬ ಮಹಾರಾಸೆಯಿಂದ ಲಕ್ಷ್ಮೀ ಹೆಬ್ಬಾಳಕರ ಈ ಬಾರಿಯ ಹೋಳಿ ಹಬ್ಬವನ್ನು ವಿಶೇಷವಾಗಿ ಆಚರಿಸಲು ನಿರ್ಧಿರಿದ್ದಾರೆ. ಬೆಲಗಾಮ್ ಕ್ಲಬ್‍ನಲ್ಲಿ ವುಮೇನಿಯಾ ಹೋಲಿ ಎಂಬ ಹೆಸರಿನಲ್ಲಿ ಮಹಿಳೆಯರಿಗಾಗಿ ಹೋಲಿ ಹಬ್ಬದ ಕಾರ್ಯಕ್ರಮ ಆಯೋಜಿಸಿದ್ದಾರೆ.
ಇಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಹೆಚ್ಚಿನ ನಿಘಾ ವಹಿಸಲಾಗಿದೆ ಮಹಿಳೆಯರಿಗಾಗಿ ಉಪಹಾರದ ವ್ಯವಸ್ಥೆ ಪ್ರಥಮ ಚಿಕಿತ್ಸೆಯ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಇಂದು ಮುಂಜಾನೆ 9 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಕಾರ್ಯಕ್ರಮದಲ್ಲಿ ಬೆಳಗಾವಿ ನಗರ ಹಾಗೂ ಜಿಲ್ಲೆಯಿಂದ ಸಾವಿರಾರು ಮಹಿಳೆಯರು ಭಾಗವಹಿಸುತ್ತಿದ್ದಾರೆ.
ಈ ಬಾರಿ ಭೀಕರ ಬರಗಾಲ ಇರುವದರಿಂದ ನೀರನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಿ ಒಣ ಬಣ್ಣ ಆಡಲು ನಿರ್ಧರಿಸಲಾಗಿದೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ ಮಹಿಳೆಯರು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿಯೇ ಪಾಸ್‍ಗಳನ್ನು ಪಡೆಯಬಹುದಾಗಿದೆ. ಕಾರ್ಯಕ್ರಮದ ಆಯೋಜಕಿ ಲಕ್ಷ್ಮೀ ಹೆಬ್ಬಾಳಕರ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.

loading...

LEAVE A REPLY

Please enter your comment!
Please enter your name here