ಉಮಾದೇವಿ ಅಧ್ಯಕ್ಷರಾಗಿ ಆಯ್ಕೆ

0
20
loading...

ಚನ್ನಮ್ಮ ಕಿತ್ತೂರ 21: ಇಲ್ಲಿಯ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇದೇ ಮೊದಲ ಬಾರಿಗೆ ಅವಿರೋಧವಾಗಿ ಮಹಿಳೆ ಆಯ್ಕೆಯಾಗಿದ್ದಾರೆ.
ಕಿ.ನಾವಿವ ಸಂಘದ ಅಧ್ಯಕ್ಷ ಜಗದೀಶ ವಸ್ತ್ರದ ಅವರ ನೇತ್ರತ್ವದಲ್ಲಿ ಉಮಾದೇವಿ ವಿಶ್ವನಾಥ ಬಿಕ್ಕಣ್ಣವರ ಅಧ್ಯಕ್ಷರಾಗಿ ಅವಿರೋದ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಉಮಾದೇವಿಯವರು ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವ ಎಲ್ಲ ನಿರ್ದೇಶಕರ ಹಾಗೂ ಹಿರಿಯರ ಭರವಸೆಗಳಿಗೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸಿ ರೈತರು ಸೇರಿದಂತೆ ಎಲ್ಲ ಸದಸ್ಯರಿಗೆ ಸಂಘದ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಭರವಸೆ ನೀಡಿದರು.

ಉಪಾಧ್ಯಕ್ಷ ಮಡಿವಾಳಪ್ಪ ದುರ್ಗಾಡಿ, ಮಾಜಿ ಅಧ್ಯಕ್ಷ ಜಗದೀಶ ಘಟನಟ್ಟಿ, ಉದಯ ಇಂಗಳೆ, ರಾಜಶೇಖರ ಇನಾಮದಾರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ವಿಶ್ವನಾಥ ಬಿಕ್ಕಣ್ಣವರ, ಶಂಕರ ಗುಂಡ್ಲೂರ, ವಿಶ್ವನಾಥ ಹಿರೇಮಠ, ಶಿವಪುತ್ರಯ್ಯ ಲದ್ದಿಮಠ, ಬಸವರಾಜ ಮಂಗಳಗಟ್ಟಿ, ಕಾಂಚನಾ ಶೆಟ್ಟರ, ಶಿವಪ್ಪ ಹಂಚಿನಮನಿ ಸೇರಿದಂತೆ ಇತರರು ಇದ್ದರು.

loading...

LEAVE A REPLY

Please enter your comment!
Please enter your name here