ಎನ್.ಎಸ್.ಎಸ್. ವಿಶೇಷ ಶಿಬಿರ ಸಮಾರೋಪ

0
79
loading...


ಶಿರಸಿ : ಶಿಕ್ಷಣ ಶಾಲಾ-ಕಾಲೇಜುಗಳಿಗೆ ಮಾತ್ರ ಸೀಮಿತವಾಗಿರದೇ ಗ್ರಾಮೀಣ ಬದುಕಿನ, ಸಾಮಾಜಿಕ ಬದುಕಿನ ಅರಿವನ್ನು ಪಡೆಯಬೇಕು. ಆಗ ಜೀವನ ಸಾರ್ಥಕವಾಗಲು ಸಾಧ್ಯ. ರೈತರ, ಬಡವರ, ನಿರ್ಗತಿತರ ಬದುಕನ್ನು ಅರಿಯುವ ಪ್ರಯತ್ನ ಸಮಾಜಮುಖಿ ಚಟುವಟಿಕೆಯಿಂದ ಸಾಧ್ಯವಾಗುತ್ತದೆ ಎಂದು ಉದ್ಯಮಿ ಭೀಮಣ್ಣ ನಾಯ್ಕ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್.ಘಟಕವು ಹುಸರಿ ಗ್ರಾಮದ ದಿವೇಕರ ಫಾರ್ಮ್‍ನಲ್ಲಿ ಆಯೋಜಿಸಿದ್ದ ವಿಶೇಷ ಶಿಬಿರ ಸಮಾರೋಪದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ರಾಜಕಾರಣಿಗಳ ಸ್ಥಿತಿ, ಆಡಳಿತದ ಏರುಪೇರು, ಭ್ರಷ್ಟಾಚಾರ ಇವೆಲ್ಲವುಗಳನ್ನು ನಿಯಂತ್ರಿಸಲು ವಿದ್ಯಾರ್ಥಿಗಳು, ಯುವ ಜನಾಂಗದ ಸಹಕಾರ ಅತಿ ಮುಖ್ಯ. ರಾಜಕೀಯವೇ ಭ್ರಷ್ಟಾಚಾರದ ಮೂಲ ಎನ್ನುವ ವಿಚಾರ ಯುವಜನರಲ್ಲಿ ಕಾಡತೊಡಗಿದೆ. ಅದನ್ನು ಬದಲಾಯಿಸಲು ಯುವ ಜನರು ರಾಜಕೀಯದಲ್ಲಿ ಭಾಗವಹಿಸಿ ರಾಷ್ಟ್ರದ ಭದ್ರತೆ, ಐಕ್ಯತೆಗೆ, ಅಭಿವೃದ್ಧಿಗೆ ಆ ಮಾರ್ಗವನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.
ನರೇಬೈಲ್ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಎಸ್.ಎನ್.ಹೆಗಡೆ ದೊಡ್ನಳ್ಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಶಿಬಿರಗಳಿಂದ ವಿದ್ಯಾರ್ಥಿಗಳಿಗೆ ಬದುಕಿನ ಕಷ್ಟ-ಸುಖ ಅರಿವಾಗಲು ಸಾಧ್ಯ. ದಿನಂಪ್ರತಿ ಜೀವನದ ಎಲ್ಲ ರೀತಿ ಅನುಭವ, ರಾಷ್ಟ್ರ ಸೇವೆ ಪ್ರೇರಣೆಗೊಳ್ಳಲು ಅವಕಾಶ ಲಭಿಸಿ ಸಾಮಾಜಿಕ ಸೇವಾಭಾವ, ನಾಯಕತ್ವ ಗುಣ ಪಡೆದು ಸದೃಢ ನಾಗರಿಕನಾಗಿ ಬೆಳೆಯಲು ಎನ್.ಎಸ್.ಎಸ್.ಪರಿಣಾಮಕಾರಿ ಪಾತ್ರ ನಿರ್ವಹಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಜನಾರ್ಧನ ಭಟ್ಟ ಮಾತನಾಡಿ, ದೇಶ ಅಭಿವೃದ್ಧಿ ಹೊಂದಲು ನಾಗರಿಕರ ಸಹಕಾರ ಅವಶ್ಯ. ಅಂತಹ ನಾಗರಿಕರನ್ನು ಪ್ರಾಮಾಣಿಕವಾಗಿ ರೂಪಿಸಲು ಶಿಬಿರ, ಸಂಘ, ಸಂಸ್ಥೆ, ಸಮಾಜ ಸೇವೆ ಎಲ್ಲವೂ ಮುಖ್ಯ. ಗ್ರಾಮೀಣ ಬದುಕಿನ ಮಹತ್ತ ತಿಳಿದು ನಾಯಕತ್ವದ ಜೊತೆ ನಾಗರಿಕತ್ವ ಬೆಳೆಸಿಕೊಳ್ಳಬೇಕು. ಶಿಬಿರದ ಸೇವಾ ಮನೋಭಾವ ವಿದ್ಯಾರ್ಜನೆಯಲ್ಲಿ ಬಹುಮುಖ್ಯ. ಜವಾಬ್ದಾರಿಯುತವಾಗಿ ನೈಸರ್ಗಿಕ ನೈರ್ಮಲ್ಯ ಪರಿಸರ ಜಾಗೃತಿ ಬಗ್ಗೆ ಆದರ್ಶ ಪ್ರಾಮಾಣಿಕ ಸೇವೆ ನಿರ್ವಹಿಸಿ ಎಂದು ಕರೆ ನೀಡಿದರು. ವೇದಿಕೆಯಲ್ಲಿ ದೊಡ್ನಳ್ಳಿ ಗ್ರಾ.ಪಂ. ಅಧ್ಯಕ್ಷ ರಘುಪತಿ ನಾಯ್ಕ, ಯೋಜನಾಧಿಕಾರಿ ಸತೀಶ ನಾಯ್ಕ, ಪ್ರೊ. ಡಿ.ಎಂ.ಹೆಗಡೆ, ಎನ್.ಎಸ್.ಎಸ್.ನಾಯಕರಾದ ರವಿಕುಮಾರ, ನಂದೀಶ, ರಾಕೇಶ, ನಾಯಕಿಯರಾದ ವಾಣಿ, ಪ್ರಜ್ಞಾ, ಅನುರಾಧ,
ಸಹ ಶಿಬಿರಾಧಿಕಾರಿಗಳಾದ ಕೃಷ್ಣ ಪೂಜಾರಿ, ರವಿಕುಮಾರ, ಚೇತನಾ ನಾಯ್ಕ, ಮಾಲತಿ ಗೌಡ ಉಪಸ್ಥಿತರಿದ್ದರು. ಅಶ್ವಿನಿ ನಾಯ್ಕ ಸ್ವಾಗತಿಸಿದರು. ಮಂಜುನಾಥ ಚಲವಾದಿ ನಿರೂಪಿಸಿದರು, ಯೋಜನಾಧಿಕಾರಿ ಸತೀಶ ನಾಯ್ಕ ವಂದಿಸಿದರು.

loading...

LEAVE A REPLY

Please enter your comment!
Please enter your name here