ಕರ್ನಾಟಕ ದರ್ಶನ ಪ್ರವಾಸ ಭಾಗ್ಯ ಮಕ್ಕಳಿಗೆ ಸಹಕಾರಿ: ದೊಡ್ಡಮನಿ

0
38
loading...


ಮುಂಡರಗಿ : ಸರ್ಕಾರ ಎಲ್ಲರಿಗೂ ಉಪಯೋಗವಾಗುವಂತೆ ಹಲವು ಭಾಗ್ಯಗಳನ್ನು ಕರುಣಿಸಿದ ತರಹ ಮಕ್ಕಳಿಗೆ ಕರ್ನಾಟಕ ದರ್ಶನ ಪ್ರವಾಸ ಭಾಗ್ಯವನ್ನು ಕಲಿಸಿರುವುದು ಮಕ್ಕಳ ಪರಿಪೂರ್ಣತೆಗೆ ಅನಕೂಲವಾಗಲಿದೆ. ಕನ್ನಡ ನಾಡಿನ ಸಂಸ್ಕøತಿ ಮತ್ತು ಕಲೆಯ ಬಗ್ಗೆ ಮಕ್ಕಳು ತಿಳಿದುಕೊಳ್ಳಲು ಈ ಪ್ರವಾಸ ಭಾಗ್ಯ ಸಹಕಾರಿಯಾಗಲಿದೆ ಎಂದು ಶಾಸಕ ಮತ್ತು ಸಂಸದೀಯ ಕಾರ್ಯದರ್ಶಿ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಜಿಲ್ಲಾ ಪಂಚಾಯಿತ ,ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಇವುಗಳ ಸಂಯುಕ್ತ ಅಶ್ರಯದಲ್ಲಿ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗಾಗಿ ಹಮ್ಮಿಕೊಂಡಿರುವ ಕರ್ನಾಟಕ ದರ್ಶನ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿದರು. ಮುಂಡರಗಿ ತಾಲೂಕಿನಿಂದ ಸತತ 3 ನೇ ಬಾರಿ ಈ ಪ್ರವಾಸ ಕೈಗೊಳ್ಳಲು ಸರ್ಕಾರ ವ್ಯವಸ್ಥೆ ಮಾಡಿದೆ. ಮಕ್ಕಳು ವ್ಯವಸ್ಥಿತವಾಗಿ ಪ್ರವಾಸ ಕೈಗೊಂಡು ಪ್ರೇಕ್ಷಣೀಯ ಸ್ಥಳಗಳ ಕುರಿತು ಮಾಹಿತಿ ಪಡೆದುಕೊಂಡು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಸರ್ಕಾರ ನೀಡುತ್ತಿರುವ ಈ ಸೌಲಭ್ಯವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಮಕ್ಕಳಿಗೆ ಅನಕೂಲವಾಗುವಂತೆ ವಿಸ್ತರಿಸಲಾಗುವುದೆ ಎಂದರು.
ತಾಲೂಕಿನ ವಿವಿಧ ಶಾಲೆಗಳ ಮಕ್ಕಳು ಒಟ್ಟಾಗಿ ಪ್ರವಾಸ ಕೈಗೊಳ್ಳುತ್ತಿರುವುದರಿಂದ ಮಕ್ಕಳಲ್ಲಿ ಪರಸ್ಪರ ಪರಿಚಯವಾಗುವುದರೊಂದಿಗೆ,ಎಲ್ಲರಲ್ಲಿ ಅವಬಿನಾಭಾವ ಸಂಬಂದ ಬೆಳೆಯಲು ಸಹಕಾರಿಯಾಗುತ್ತದೆ. ಮಕ್ಕಳು ಪ್ರವಾಸದಲ್ಲಿಯ ಅನುಭವಗಳನ್ನು ಶಾಲೆಗಳು ಪ್ರಾರಂಭವಾದಾಗ ಇತರೆ ಮಕ್ಕಳಿಗೆ ಹಮಚಿ ಅವರ ಜ್ಞಾನವನ್ನು ಹೆಚ್ಚಿಸಲು ಅನಕೂಲಮಾಡಬೇಕು ಎಂದರು.
ಜಿ.ಪಂ ಸದಸ್ಯೆ ಶೋಭಾ ಮೇಟಿ ಮಾತನಾಡಿ ಕೋಶಾ ಓದುವದಕಿಂತ ದೇಶ ಸುತ್ತುವುದು ಒಳ್ಳೆಯದು. ಪ್ರವಾಸಗಳು ಜ್ಞಾನದ ಮಟ್ಟವನ್ನು ಹೆಚ್ಚಿಸುವುದರೊಂದಿಗೆ ನಮ್ಮ ಪರಂಪರೆಯನ್ನು ತಿಳಿಸಿಕೊಡುತ್ತದೆ. ಪ್ರವಾಸದಲ್ಲಿ ಮಕ್ಕಳು ಹೊಂದಾಣಿಕೆಯಿಂದ ಭಾಗವಹಿಸಿ ಅನುಭವಿಸಬೇಕು ಎಂದು ಹೇಳಿದರು. ವೇದಿಕೆಯ ಮೇಲೆ ಶಿಕ್ಷಕ ಡೊಣ್ಣಿ,ಡಾ.ಬಿ.ಎಸ್.ಮೇಟಿ, ಆರ್.ಬಿ.ಮುಳ್ಳೊಳ್ಳಿ ,ಯುವರಾಜ ಮುಂಡರಗಿ ಮುಂತಾದವರಿದ್ದರು.
ಪ್ರಾರಂಭದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಎಂ.ಎ.ರಡ್ಡೇರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಮಕ್ಕಳ 5 ದಿನದ ಈ ಪ್ರವಾಸ ಮಕ್ಕಳಿಗೆ ಹೆಚ್ಚಿನ ಜ್ಞಾನವನ್ನು ನೀಡುತ್ತದೆ ಎಂದು ಹೇಳಿ ,ಕಾರ್ಯಕ್ರಮ ನಿರೂಪಿಸಿದರು. ನೌಕರರ ಸಂಗದ ತಾಲೂಕಾ ಅಧ್ಯಕ್ಷ ಎಂ.ಡಿ.ಭಾವಿಮನಿ ವಂದಿಸಿದರು.

loading...

LEAVE A REPLY

Please enter your comment!
Please enter your name here