ಕಾಂಗ್ರೇಸ್ ಸೋಲಿಗೆ ನಾಯಕರೇ ನೇರ ಕಾರಣ ವಿ.ಎನ್ ನಾಯ್ಕ

0
22
loading...

ಸಿದ್ದಾಪುರ : ಇತ್ತಿಚೇಗೆ ನಡೆದ ತಾ.ಪಂ,ಜಿ.ಪಂ ಚುನಾವಣೆಯಲ್ಲಿ ತಾಲೂಕಿನಲ್ಲಿ ಕಾಂಗ್ರೇಸ್ ಪಕ್ಷ 11 ತಾ.ಪಂ ಮತ್ತು 2 ಜಿ.ಪಂ ಕ್ಷೇತ್ರವನ್ನು ಗೆಲ್ಲುವ ಉತ್ತಮ ವಾತಾವರಣವಿತ್ತು ಆದರೆ ತಮ್ಮ ಬಾಲಬಡುಕರಿಗೆ,ಸಾರ್ವಜನಿಕ ಕ್ಷೇತ್ರದ ಮುಖ ನೋಡದವರಿಗೆ ಟಿಕೆಟ್ ನೀಡಿ ಪಕ್ಷ ಗೆಲ್ಲುವ ಅವಕಾಶವನ್ನು ಕಾಂಗ್ರೇಸ್ ನಾಯಕರು ತಪ್ಪಿಸಿದ್ದಾರೆ.ಪಕ್ಷ ಸೋಲಲು ಕಾಂಗ್ರೇಸ್ ನಾಯಕರೇ ನೇರಕಾರಣವಾಗಿದ್ದು ಪಕ್ಷ ಅವರನ್ನು ಉಚ್ಚಾಟಿಸಬೇಕೆಂದು ಜಿ.ಪಂ ಮಾಜಿ ಸದಸ್ಯ ವಿ.ಎನ್ ನಾಯ್ಕ ಬೇಡ್ಕಣಿ ಆಗ್ರಹಿಸಿದ್ದಾರೆ.
ಅವರು ತಾಲೂಕಿನ ಕಲ್ಲೂರಿನಲ್ಲಿ ಕಾಂಗ್ರೇಸ್ ಬಂಡಾಯ ಅಭ್ಯರ್ಥಿಗಳಾಗಿ ಜಯಗಳಿಸಿದ ಅಭ್ಯರ್ಥಿಗಳು ಕಾರ್ಯಕರ್ತರಿಗಾಗಿ ಎರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಕಾಂಗ್ರೇಸ್ ನಾಯಕರು ನಮ್ಮನ್ನು ಪಕ್ಷದಿಂದ ಉಚ್ಚಾಟಿಸುವ ಮಾತನಾಡುತ್ತಾರೆ. ಆದರೆ ಹಿಂದೆ ಎಂಎಲ್‍ಎ ಚುನಾವಣೆಯಲ್ಲಿ ಟಿ.ವಿ ಚಿಹ್ನೆಯೊಂದಿಗೆ ಸ್ಪರ್ಧಿಸಿದವರು ಇಂದು ಕಾಂಗ್ರೇಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಅವರು ಯಾವಾಗ ಪಕ್ಷಕ್ಕೆ ಬಂದರು?ಯಾರಿಗೂ ಗೊತ್ತಿಲ್ಲ.ಕಾಂಗ್ರೇಸ್ ಪಕ್ಷದಲ್ಲಿ ವಲಸಿಗರು ಅಧಿಕಾರ ನಡೆಸುತ್ತಿದ್ದಾರೆ.ಕಾಂಗ್ರೇಸ್‍ನ ತಾಲೂಕಾ ಹಾಗೂ ಜಿಲ್ಲಾಧ್ಯಕ್ಷರು ತಮ್ಮ ದಂಧೆ ನಡೆಸಲು ಕಾಂಗ್ರೇಸ್ ಪಕ್ಷದ ಅಧಿಕಾರ ಇಟ್ಟುಕೊಂಡಿದ್ದಾರೆ. ನಮ್ಮನ್ನು ಬಿಟ್ಟು ಅಂದರೆ ಕಾಂಗ್ರೇಸ್ ಪಕ್ಷಕ್ಕಾಗಿ ದುಡಿದ ಮೂಲ ಕಾರ್ಯಕರ್ತರನ್ನು ಹಾಗೂ ಜನಸಾಮಾನ್ಯರನ್ನು ಬಿಟ್ಟು ತಾಲೂಕಿನಲ್ಲಿ ಕಾಂಗ್ರೇಸ್ ಪಕ್ಷವನ್ನು ಉದ್ದಾರ ಮಾಡಿದರೆ ರಾಜಕೀಯವನ್ನು ತ್ಯಾಗ ಮಾಡುತ್ತೇನೆ ಎಂದರು.
ಜನ ನೀಡಿದ ಅಧಿಕಾರದಿಂದ ಜನರನ್ನು ಹೆದರಿಸುವ ಕೆಲಸವಾಗಬಾರದು.ಆದರೆ ಪ್ರಸಕ್ತ ಚುನಾವಣೆಯಲ್ಲಿ ಕಾರ್ಯಕರ್ತರನ್ನು ಹೆದರಿಸುವದು,ನೋಟಿಸ್ ನೀಡುವದು,ಪ್ರಚಾರದ ಸಂದರ್ಭದಲ್ಲಿ ಅಧಿಕಾರಿಗಳನ್ನು ಕಳುಹಿಸುವದು ಹೀಗೆ ಅತೀ ಕೆಳಮಟ್ಟದ ರಾಜಕಾರಣವನ್ನು ಕಾಂಗ್ರೇಸ್ ನಾಯಕರು ಮಾಡಿದ್ದಾರೆ. ಪಕ್ಷದಲ್ಲಿ ಒಬ್ಬ ವ್ಯಕ್ತಿಗಾಗಿ ಆ ವ್ಯಕ್ತಿಯ ಭಾವನೆಗಾಗಿ,ಮುಂದಾಲೋಚನೆಗಾಗಿ, ತೀರ್ಮಾನ ಕೈಗೊಳ್ಳುವ ಕೆಲಸವಾಗುತ್ತಿದೆ.ಅಡ್ಡ ದಾರಿಯಲ್ಲಿ ಬಂದು ಅಧಿಕಾರ ಹಿಡಿದು ಬೇರೆಯವರಿಗೆ ಪಾಠ ಹೇಳುವದನ್ನು ಇನ್ನಾದರೂ ಬಿಡಲಿ. ಮುಂದಿನ ದಿನಗಳಲ್ಲಿ ಮೂಲ ಕಾಂಗ್ರೇಸ್ಸಿಗರು ಅಧಿಕಾರ ಹಿಡಿಯುವ ಹಾಗೂ ಹೊಸಮುಖಗಳಿಗೆ ಅವಕಾಶ ಸಿಗುವ ವಾತಾವರಣ ನಿರ್ಮಾಣವಾಗಲಿ ಎಂದರು.
ತಾ.ಪಂ ಮಾಜಿ ಸದಸ್ಯ ವಸಂತ್ ನಾಯ್ಕ ಮಾತನಾಡಿ ಕಳೆದ ತಾ.ಪಂ,ಜಿ.ಪಂ ಚುನಾವಣೆಯಲ್ಲಿ ಕಾಂಗ್ರೇಸ್ ವೈಫಲ್ಯಕ್ಕೆ ಕಾಂಗ್ರೇಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಷಣ್ಮುಖ ಗೌಡರ್ ನೇರ ಕಾರಣ. ಜನರ ಬೆಂಬಲವಿದ್ದ ಅಭ್ಯರ್ಥಿಗಳಿಗೆ ಟಿಕೆಟ್ ತಪ್ಪಿಸಿ ತಮ್ಮ ಜನರ ಮುಖವನ್ನೆ ನೋಡದ ತಮ್ಮ ಬಾಲಬಡುಕರಿಗೆ ಟಿಕೆಟ್ ಕೊಟ್ಟಿದ್ದೆ ಕಾಂಗ್ರೇಸ್ ಪಕ್ಷದ ಹೀನಾಯ ಸೋಲಿಗೆ ಕಾರಣ .ನಮಗೆ ಟಿಕೆಟ್ ನಿರಾಕರಿಸಿದರು ಮತದಾರರ ಆಶಿರ್ವಾದದಿಂದ ಗೆಲುವು ಸಾದಿಸಿದ್ದೆವೆ.ಕಾಂಗ್ರೇಸ್ ಸೋಲಿಗೆ ನೈತಿಕ ಹೊಣೆಹೊತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಷಣ್ಮುಖ ಗೌಡರ್,ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೆ.ಜಿ ನಾಗರಾಜ ರಾಜೀನಾಮೆ ನೀಡಲಿ.ಅವರ ತಪ್ಪು ನಿರ್ಣಯಕ್ಕೆ ಪ್ರತಿಯಾಗಿ ಪಕ್ಷ ಅವರನ್ನು ಉಚ್ಚಾಟಿಸಲಿ ಎಂದು ಆಗ್ರಹಿಸಿದರು.
ತಾ.ಪಂ ಪಕ್ಷೇತರ ಸದಸ್ಯ ನಾಸೀರ್ ಖಾನ್ ಮಾತನಾಡಿ ನನ್ನ ಗೆಲುವು ಬಯಸದೇ ಬಂದ ಭಾಗ್ಯ.ರಾಜಕಾರಣಕ್ಕೆ ಜಾತಿ ಮುಖ್ಯವಲ್ಲ ನೀತಿ ಮುಖ್ಯ,ಪಕ್ಷದಿಂದ ಟಿಕೆಟ್ ನೀಡುವ ಸಂದರ್ಭದಲ್ಲಿ ಜಾತಿಯ ಮತದಾರರು ಎಷ್ಟಿದ್ದಾರೆ. ಎಂದು ಕೇಳುವ ಕಾಂಗ್ರೇಸ್ ನಾಯಕರ ಮನಸ್ಥಿತಿ ಅತ್ಯಂತ ಕೆಳಮಟ್ಟದ್ದಾಗಿದೆ ಎಂದರು.
ಜಿ.ಪಂ ಪಕ್ಷೇತರ ಅಭ್ಯರ್ಥಿ ಸುಮಂಗಲಾ ವಸಂತ್ ನಾಯ್ಕ ಮಾತನಾಡಿ ಕಾರ್ಯಕರ್ತರ ಶ್ರಮದಿಂದ ನನ್ನ ಗೆಲುವಾಗಿದ್ದು ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರ ಯಾವುದೇ ಕೆಲಸ ಕಾರ್ಯ ಮೂಲಬೂತ ಸೌಕರ್ಯಗಳಿಗೆ ಹೆಚ್ಚಿನ ಸಹಕಾರ ನೀಡುತ್ತೇನೆ.ರಾಜಕಾರಣಕ್ಕೆ ಹೊಸಬಳಾಗಿರುವ ನನ್ನಿಂದ ಏನಾದರು ಲೋಪವಾದರೆ ಸಲಹೆ ನೀಡಿ ಕ್ಷೇತ್ರದ ಸರ್ವೊತ್ತಮ ಅಭಿವೃದ್ದಿಗೆ ಬೆಂಬಲಿಸಿ ಎಂದರು.
ಅಧ್ಯಕ್ಷತೆಯನ್ನು ತಾಲೂಕಾ ಮಡಿವಾಳ ಸಮಾಜದ ಅಧ್ಯಕ್ಷ ತಿಮ್ಮಪ್ಪ ಎಂ.ಕೆ ವಹಿಸಿದ್ದರು.
ವೇದಿಕೆಯಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಸಿ.ಆರ್ ನಾಯ್ಕ,ಕವಂಚೂರ ಗ್ರಾ.ಪಂ ಅಧ್ಯಕ್ಷೇ ಲಲಿತಾ ಕಟ್ಟೇಮನೆ, ಮನಮನೆ ಗ್ರಾ.ಪಂ ಅಧ್ಯಕ್ಷ ವೀರಭದ್ರ ನಾಯ್ಕ ,ಕೊರ್ಲಕೈ ಗ್ರಾ.ಪಂ ಉಪಾಧ್ಯಕ್ಷ ನಟರಾಜ ಜಿಡ್ಡಿ,ಗ್ರಾ.ಪಂ ಸದಸ್ಯರದ ಮಾರುತಿ ನಾಯ್ಕ ಸುಂಕತ್ತಿ,ರಾಧಾ ನಾಯ್ಕ ಕಾನ್ಮನೆ, ಜಿ.ಟಿ ನಾಯ್ಕ ಗೋಳಗೋಡ,ಸಂತೋಷ ನಾಯ್ಕ ಮಾವಿನಗುಂಡಿ,ಆಯ್.ಕೆ ನಾಯ್ಕ ಸುಂಗೋಳ್ಳಿಮನೆ,ಬಿ.ಕೆ ನಾಯ್ಕ ಮತ್ತಿಸಾಲ ಮುಂತಾದ ಹಲವು ಪ್ರಮುಖರು ಉಪಸ್ಥಿತರಿದ್ದರು.
ರಾಜೇಶ್ವರಿ ನಾಯ್ಕ ಪ್ರಾರ್ಥಿಸಿದರು.ಚಂದ್ರಕಾಂತ ಎಂ ನಾಯ್ಕ ಸ್ವಾಗತಿಸಿದರು,ಶ್ರೀನಿವಾಸ ಮನಮನೆ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here