ಜನಮನ ಪರಿವರ್ತಿಸಲು ಸ್ವಾತಂತ್ರ್ಯ ಸಮರ

0
27
loading...


ಕಾರವಾರ : ಸಮಾನತೆಯ ಸಲುವಾಗಿ ಜನಮನಗಳನ್ನು ಪರಿವರ್ತಿಸುವ 2ನೇ ಸ್ವಾತಂತ್ರ್ಯ ಸಮರ ಇಂದು ನಡೆಯಬೇಕಿದೆ ಎಂದು ಸುಪ್ರೀಂ ಕೋಟ್ ನ್ಯಾಯಮೂರ್ತಿ ವಿ. ಗೋಪಾಲ ಗೌಡ ಹೇಳಿದರು.
ಚಿಂತನ ರಂಗ ಅಧ್ಯಯನ ಕೇಂದ್ರದಿಂದ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ನಗರದ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಿದ್ದ ಪ್ರೀತಿಯ ಪದಗಳ ಪಯಣ ಎಂಬ ಅಸ್ಪøಶ್ಯತೆ ಆಚರಣೆ ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಭಾರತ ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಸಾಮಾಜಿಕ ನ್ಯಾಯವೇ ದೇಶದ ಅಭಿವೃದ್ಧಿಗೆ ನಾಂದಿ ಎಂಬುದು ಡಾ. ಅಂಬೇಡ್ಕರ್ ಅವರ ಅಭಿಪ್ರಾಯವಾಗಿತ್ತು. ಸಮಾನತೆಯನ್ನು ಜಾರಿಗೆ ತರದಿದ್ದರೆ ತುಳಿತಕ್ಕೊಳಗಾದವರು ಮುಂದೆ ಭಯೋತ್ಪಾದಕರಾಗಿ ದೇಶದ ಐಕ್ಯತೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದರು.
ಭಾರತದ ಸಂವುಧಾನ ಜಾರಿಗೆ ಬಂದು 66 ವರ್ಷವಾದರೂ ಅದರ ಮೂಲ ನಿರ್ದೇಶಕ ತತ್ವವಾದ ಸಮಾನತೆ ಇನ್ನೂ ಸಮರ್ಪಕವಾಗಿ ಜಾರಿಯಾಗಿಲ್ಲ ಎಂಬುದು ಬೇಸರದ ಸಂಗತಿ. ಆ ಕುರಿತು ಚಿಂತನೆ ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.
ನ್ಯಾ. ಎಚ್. ಎನ್. ನಾಗಮೋಹನದಾಸ ಅವರ ಅಸ್ಪøಶ್ಯತೆ ಮತ್ತು ಕಾನೂನು, ಹಂಪಿ ಕನ್ನಡ ವಿ.ವಿ.ಯ ಡಾ.ಚಂದ್ರ ಪೂಜಾರಿ ಅವರ ದಲಿತ ಅಭಿವೃದ್ಧಿ, ಕೆ. ಫಣೀಂದ್ರ ರಾಹು ಅನುವಾದದ ವಿಕಾಸಕ್ಕಾಗಿ ಕಾಯುವ ಜನ ಎಂಬ ಪುಸ್ತಕಗಳನ್ನು ನೈ,ಗೋಪಾಲ ಗೌಡ ಈ ವೇಳೆ ಬಿಡುಗಡೆ ಮಾಡಿದರು. ಜಿಲ್ಲಾ ನ್ಯಾಯಾಧೀಶ ಡಿ.ಆರ್. ರೇಣಕೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್, ಜಿ.ಪಂ.ಸಿಇಒ ರಾಮಪ್ರಸಾದ ಮನೋಹರ, ಸಾಹಿತಿ ವಿಷ್ಣು ನಾಯ್ಕ, ಉಪಸ್ಥಿತರಿದ್ದರು. ಮಾಧವಿ ಭಂಡಾರಿ ಪುಸ್ತಕ ಪರಿಚಯಿಸಿದರು. ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಅಲ್ಲಾ ಭಕಷ್ ಸ್ವಾಗತಿಸಿದರು. ವಿಠ್ಠಲ್ ಭಂಡಾರಿ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here