ಜನರಲ್ಲಿ ಜಾಗೃತಿ ಮೂಡಿಸಿದ ಗೀಗಿ ಪದ

0
26
loading...


ಧಾರವಾಡ 29: ಜಾನಪದ ಸಂಸ್ಕøತಿ ಸಂಪ್ರದಾಯಗಳ ಹಿಂದೆ ಜೀವ ಪರವಾದ ಮತ್ತು ಜನ ಪರವಾದ ಉದ್ದೇಶಗಳಿವೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ದ್ರಾಕ್ಷಾಯಣಿ ಬಸವರಾಜ ಹೇಳಿದರು.
ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಪಕ್ಕೀರವ್ವ ಗುಡಿಸಾಗರ ಜಾನಪದ ಅಭಿವೃದ್ಧಿ ಸಂಘ ಹಮ್ಮಿಕೊಂಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ನಂತರದ ಸಮಯದಲ್ಲಿ, ಗ್ರಾಮೀಣಾಭಿವೃದ್ಧಿ, ಜನಸಂಖ್ಯೆ ನಿಯಂತ್ರಣ, ದೇಶಭಕ್ತಿಯ ಕುರಿತಂತೆ ಗೀಗೀ ಪದಹಾಡುವ ಮೂಲಕ ಗ್ರಾಮೀಣ ಜನತೆಯಲ್ಲಿ ಜಾಗೃತಿ ಮೂಡಿಸುತ್ತಿದ್ದ ರಾಜ್ಯ ಪ್ರಶಸ್ತಿ ವಿಜೇತೆ ಪಕ್ಕೀರವ್ವ ಗುಡಿಸಾಗರ ನಿಜ ಅರ್ಥದಲ್ಲಿ ಜಾನಪದ ಆದಿದೇವತೆ. ಅವರ ಅಧ್ಯಯನದಿಂದ ಮನುಕುಲಕ್ಕೆ ಉಪಯುಕ್ತವೆನಿಸುವ ಹಲವು ಸಂಗತಿಗಳ ಬಗ್ಗೆ ವಿದ್ವಾಂಸರು ಅಧ್ಯಯನ ಮಾಡಬೇಕಾಗಿದೆ ಎಂದರು.
ಸಾಹಿತಿ ಮೋಹನ ನಾಗಮ್ಮನವರ ಅಧ್ಯಕ್ಷತೆವಹಿಸಿದ್ದರು. ಆಕಾಶವಾಣಿ ಅಧಿಕಾರಿ ಚೆನ್ನಪ್ಪ ಬೆಂಗೇರಿ, ಜಾನಪದ ಕಲಾವಿದೆ ಕಮಲಮ್ಮ ವಗ್ಗರ, ನಿವೃತ್ತ ಶಿಕ್ಷಕ ಬಿ.ಕೆ. ಹೊಂಗಲ ಉಪಸ್ಥಿತರಿದ್ದರು. ಚೆನ್ನಮ್ಮ ಮುತ್ತಗಿ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಯಕ್ಕೇರಪ್ಪ ನಡುವಿನಮನಿ ಶಾನವಾಡ ಮಾಸ್ತರ ಸ್ವಾಗತಿಸಿ ವಂದಿಸಿದರು.

loading...

LEAVE A REPLY

Please enter your comment!
Please enter your name here