ಜಾತ್ರೆಗಳು ಒಗ್ಗಟ್ಟಿನ ಪ್ರತೀಕ : ಪಂಚಾಕ್ಷರಿ ಸ್ವಾಮೀಜಿ

0
25
loading...

ಚನ್ನಮ್ಮ ಕಿತ್ತೂರು 10: ಧಾರ್ಮಿಕ ಆಚಾರ ವಿಚಾರ ಹಾಗೂ ಸಂಸ್ಕøತಿ ಉಳಿಸಿಕೊಳ್ಳುವಲ್ಲಿ ಜಾತ್ರಾ ಮಹೋತ್ಸವಗಳು ಮಹತ್ವದ ಪಾತ್ರವಹಿಸುತ್ತ ಒಗ್ಗಟ್ಟಿನ ಪ್ರತೀಕವಾಗಿವೆ ಎಂದು ನಿಚ್ಚಣಕಿ ಶ್ರೀ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಹೇಳಿದರು.
ಇಲ್ಲಿಯ ಸೋಮವಾರ ಪೇಟೆಯಲ್ಲಿರುವ ಧರಿದೇವರ ಹಾಗೂ ಜಕ್ಕಮ್ಮ ದೇವಿ ಜಾತ್ರಾ ಮಹೋತ್ಸವದ ಪೂರ್ವ ಭಾವಿ ಸಭೆಯ ಸಾನಿಧ್ಯವಹಿಸಿ ಮಾತನಾಡಿದ ಅವರು, ಕಿತ್ತೂರು ನಾಡಿನಲ್ಲಿರುವ ಧರಿದೇವರ ಭಕ್ತರನ್ನು ಒಂದುಗೂಡಿಸುವ ನಿಟ್ಟಿನಲ್ಲಿ ದೇವಸ್ಥಾನ ನಿರ್ಮಿಸಿದ್ದು ಹಾಗೂ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಂಡಿರುವದು ಯೋಗ್ಯ ನಿರ್ಧಾರವಾಗಿದ್ದು, ದೇವಸ್ಥಾನ ಅಭಿವೃದ್ಧಿಗೆ ಹಾಗೂ ಜಾತ್ರಾ ಮಹೋತ್ಸವಕ್ಕೆ ಭಕ್ತರು ತನು ಮನ ಧನದ ಸಹಾಯ ಸಹಕಾರ ನೀಡಿ, ಧರಿದೇವರ ಕೃಪೆಗೆ ಪಾತ್ರರಾಗಬೇಕೆಂದು ಹೇಳಿದರು.
ಜಾತ್ರಾ ಮಹೋತ್ಸವ ಹಾಗೂ ದೇವಸ್ಥಾನ ಸಮೀತಿಯ ಉಪಾಧ್ಯಕ್ಷ ಎಸ್. ಆರ್. ಪಾಟೀಲ ಮಾತನಾಡಿ, ಎಪ್ರೀಲ್ 26 ಮತ್ತು 27 ರಂದು ಜಾತ್ರೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ರೂ. 2.4 ಲಕ್ಷ ವೆಚ್ಚದಲ್ಲಿ ಧರಿದೇವರ ಹಾಗೂ ಜಕ್ಕಮ್ಮ ದೇವಿಯ ಬೆಳ್ಳಿ ಮೂರ್ತಿಯನ್ನು ನಿರ್ಮಾಣ ಮಾಡಲಾಗುತ್ತಿದ್ದು, ಹೋಳಿ ಹುಣ್ಣಿಮೆ ಮರುದಿನದಂದು ಪ್ರತಿಷ್ಠಾಪಿಸಲಾಗುವದು, ಸವದತ್ತಿ ಭಕ್ತರಾದ ಸೋಮಪ್ಪ ತಡಕೋಡ ಅವರು, ರೂ. 36 ಸಾವಿರ ವೆಚ್ಚದ ಪಾಲಕಿಯನ್ನು ಯುಗಾದಿ ಪಾಡ್ಯದಂದು ದೇವಸ್ಥಾನಕ್ಕೆ ದೇಣಿಗೆ ನೀಡಲಿದ್ದಾರೆ. ದೇವಸ್ಥಾನ ಅಭಿವೃದ್ಧಿಗೆ ಹಾಗೂ ಜಾತ್ರಾ ಮಹೋತ್ಸವಕ್ಕೆ ಸಹಕಾರ ನೀಡಬೇಕೆಂದು ಕೋರಿದರು.
ಶಿರೂರಿನ ಚನ್ನಪ್ಪ ಶಿರಿಯಣ್ಣವರ ಅಧ್ಯಕ್ಷತೆವಹಿಸಿದ್ದರು. ಬಸವರಾಜ ಕುಪ್ಪಸಗೌಡರ ಸ್ವಾಗತಿಸಿದರು. ದೇವಸ್ಥಾನ ಸಮೀತಿ ಅಧ್ಯಕ್ಷ ಡಾ. ಬಿ.ಜಿ.ಧಾರವಾಡ, ಚಿಕ್ಕಬಾಗೇವಾಡಿಯ ಬಿ.ಸಿ.ಪಾಟೀಲ, ಚನ್ನಬಸಯ್ಯ ಹಿರೇಮಠ, ಮಾತನಾಡಿದರು. ಉಳವಪ್ಪ ಶೆಟ್ಟರ, ಈಶ್ವರ ಮಾರಿಹಾಳ, ಮಡಿವಾಳಪ್ಪ ವರಗನ್ನವರ, ಭೀಮಣ್ಣ ಅಬ್ಬಾರ, ಎಂ.ಬಿ.ತೋಟಗಿ, ರಾಚ್ಚಣ್ಣ ಸಂಗೊಳ್ಳಿ, ಮಡಿವಾಳಪ್ಪ ತರ್ಲಗಟ್ಟಿ, ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here