ಜಾತ್ರೆ ಪ್ರಯುಕ್ತ ಕುಸ್ತಿ ಪಂದ್ಯಾವಳಿ

0
35
loading...


ಸಿದ್ದಾಪುರ : ಕೊಂಡ್ಲಿ ಜಾತ್ರೆಯಲ್ಲಿ ನಡೆಸಿದ ಮೂರು ದಿನಗಳ ಕುಸ್ತಿ ಸ್ಪರ್ಧೆಯಲ್ಲಿ ಸುಮಾರು 250 ಸ್ಪರ್ಧಿಗಳು ಭಾಗಿಯಾಗಿದ್ದು, 35 ಕುಸ್ತಿ ಸ್ಪರ್ಧೆಗಳು ನಡೆದವು.
ಅವುಗಳಲ್ಲಿ 6 ಮಕ್ಕಳಿಂದ ನಡೆದ ಕುಸ್ತಿ ಸ್ಪರ್ಧೆಗಳಾಗಿದ್ದವು. ವಿವಿಧ ಕುಸ್ತಿ ಸ್ಪರ್ಧೆಗಳಲ್ಲಿ ಗೆದ್ದವರಿಗೆ 7 ಬೆಳ್ಳಿ ಕಡಗಗಳನ್ನು ಬಹುಮಾನವಾಗಿ ಇಡಲಾಗಿತ್ತು. ಅವುಗಳಲ್ಲಿ ಒಂದು ‘ಅಖಂಡ ಬೆಳ್ಳಿ ಕಡಗ’ವನ್ನು ಇಡಲಾಗಿದ್ದು,ದಾವಣಗೆರಿಯ ಶಿವಾನಂದ ಅಮ್ಮಣಗಿ ಅದನ್ನು ಗೆದ್ದರು.
ಸ್ಪರ್ಧೆಯ ಕೊನೆಯ ದಿನ ಇಡಲಾಗಿದ್ದ ಬಂಗಾರದ ಕಡಗಕ್ಕಾಗಿ ಕಾರ್ತಿಕ್ ಕಾಟೆ ರಾಣೆಬೆನ್ನೂರು ಎಂಬ ಕುಸ್ತಿ ಪಟು ಸವಾಲು ಹಾಕಿದರು. ಆದರೆ ಯಾರೂ ಮುಂದೆ ಬಂದಿಲ್ಲವಾದ್ದರಿಂದ, ಅವರಿಗೆ ಗೌರವ ಧನ ನೀಡಿ,ಬಂಗಾರದ ಕಡಗವನ್ನು ಸಮಿತಿಯೇ ವಹಿಸಿಕೊಂಡಿತು ಎಂದು ಕುಸ್ತಿ ಸಮಿತಿಯ ಮೂಲಗಳು ತಿಳಿಸಿವೆ.

loading...

LEAVE A REPLY

Please enter your comment!
Please enter your name here