ಜಿಲ್ಲಾ ಪಂಚಾಯತಿ ಪ್ರಭಾರಿ ಓಂಬಡ್ಸಮನ್ ರಾಗಿ ಡಾ: ಎ.ಜೆ. ಧುಮಾಳೆ

0
23
loading...


ಕಾರವಾರ 28: ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಪಂಚಾಯತಿಯ ಪ್ರಭಾರಿ ಓಂಬಡ್ಸಮನ್ ರಾಗಿ ಡಾ: ಎ.ಜೆ.ಧುಮಾಳೆ ಇವರನ್ನು ನೇಮಕಮಾಡಿ ಸರ್ಕಾರ ಆದೇಶ ಮಾಡಿದ್ದು, ಅವರು ಇಂದು ಅಧಿಕಾರ ಸ್ವೀಕರಿಸಿದರು.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಿಯ ಲೋಪ ದೋಷ, ಕಳಪೆ ಕಾಮಗಾರಿ, ಯಂತ್ರಗಳ ಉಪಯೋಗ ಮುಂತಾದ ವಿಷಯಗಳ ಕುರಿತು ಬರುವ ದೂರುಗಳ ವಿಚಾರಣೆ ಮಾಡಿ ತಪ್ಪಿತಸ್ಥರ ವಿರುದ್ಧ ದುರುಪಯೋಗದ ಹಣ ವಸೂಲಿ, ಸಂಬಂಧಿಸಿದರ ವಿರುದ್ಧ ಶಿಸ್ತು ಹಾಗೂ ಫೀರ್ಯಾದು ದಾಖಲಿಸುವರು, ಇತರ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರವನ್ನು ಒಂಬಡ್ಸುಮನ ರವರು ಹೊಂದಿರುತ್ತಾರೆ.
ಉದ್ಯೋಗ ಖಾತರಿ ಯೋಜನೆಯಲ್ಲಿಯ ಅವ್ಯವಹಾರ ಕುರಿತು ಲಿಖಿತ ದೂರುಗಳನ್ನು ಜಿ.ಪಂ ಕಾರ್ಯಾಯಲಯದಲ್ಲಿಯ ಒಂಬಡ್ಸಮನ್‍ರ ಕಚೇರಿಗೆ ವಿವರಗಳೊಂದಿಗೆ ಸಲ್ಲಿಸಬಹುದು. ಅಥವಾ ಕಚೇರಿ ದೂರವಾಣಿ ಸಂ : 08382-226862, ಮೊಬೈಲ್ ಸಂ : 9448125203ಕ್ಕೆ ಸಂಪರ್ಕಿಸಬಹುದಾಗಿ ಪ್ರಭಾರಿ ಓಂಬಡ್ಸಮನ್ ರವರು ಕೋರಿದ್ದಾರೆ.

loading...

LEAVE A REPLY

Please enter your comment!
Please enter your name here