ಜಿಲ್ಲಾ ಲೀಡ್ ಬ್ಯಾಂಕ್‍ನಿಂದ ಜಿಲ್ಲಾ ವಾರ್ಷಿಕ ಕ್ರಿಯಾ ಯೋಜನೆ ಬಿಡುಗಡೆ

0
26
loading...


ಕಾರವಾರ 23: ಉತ್ತರ ಕನ್ನಡ ಜಿಲ್ಲಾ ಲೀಡ್ ಬ್ಯಾಂಕು, ಸಿಂಡಿಕೇಟ್ ಬ್ಯಾಂಕು ತಯಾರಿಸಿದ 2016-17ನೇ ಸಾಲಿನ ವಾರ್ಷಿಕ ಸಾಲ ಕ್ರಿಯಾ ಯೋಜನೆಯನ್ನು ಜಿಲ್ಲಾ ಪಂಚಾಯತು ಕಾರ್ಯ ನಿರ್ವಹಣಾಧಿಕಾರಿ ಡಾ: ರಾಮಪ್ರಸಾತ ಮನೋಹರರವರು ಬ್ಯಾಂಕುಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಿಡುಗಡೆಗೊಳಿಸಿದರು.
2016-17ನೇ ಸಾಲಿನ ಜಿಲ್ಲಾ ಸಾಲ ಯೋಜನೆಯ ಗಾತ್ರವು ರೂ. 3,154.68 ಕೋಟಿಗಳಾಗಿದ್ದು, 2015-16ನೇ ಸಾಲಿಗಿಂತ ಶೇಕಡಾ 14.28% ಗುರಿ ನಿಗದಿಪಡಿಸಲಾಗಿದೆ. ಸಾಲ ಯೋಜನೆಯಲ್ಲಿ ಆದ್ಯತಾ ರಂಗಕ್ಕೆ, ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳಿಗೆ ಮಹತ್ವ ನೀಡಲಾಗಿದೆ. ಒಟ್ಟು ಗಾತ್ರದಲ್ಲಿ ರೂ. 2,818.21 ಆದ್ಯತಾ ರಂಗಕ್ಕೆ ಮೀಸಲಾಗಿದ್ದು, ಕಳೆದ ಬಾರಿಗಿಂತ ಶೇಕಡಾ 21.36% ಜಾಸ್ತಿಯಾಗಿರುತ್ತದೆ. ಅಲ್ಲದೇ ಕೃಷಿ ಕ್ಷೇತ್ರಕ್ಕೆ ರೂ. 1,345.87 ಕೋಟಿ ಮೀಸಲಾಗಿದ್ದು, ಕಳೆದ ಬಾರಿಗಿಂತ ಶೇಕಡಾ 36.29% ಹೆಚ್ಚುವರಿಯಾಗಿದೆ. ಕೈಗಾರಿಕಾ ಕ್ಷೇತ್ರಕ್ಕೆ 337.52 ಕೋಟಿ ಅಂದರೆ ಕಳೆದ ಬಾರಿಗಿಂತ ಶೇಕಡಾ 47.23% ಜಾಸ್ತಿ ಗುರಿ ನಿಗದಿಪಡಿಸಲಾಗಿದೆ. ಸಾಲ ಕ್ರಿಯಾ ಯೋಜನೆಯನ್ನು ಬಿಡುಗಡೆಗೊಳಿಸಿದ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಾಲ ಯೋಜನೆಯು ಉತ್ತಮವಾಗಿದ್ದು ಕಾರ್ಯಗತಗೊಳಿಸುವಲ್ಲಿ ಬ್ಯಾಂಕುಗಳು ಪ್ರಮಾಣಿಕವಾಗಿ ಪ್ರಯತ್ನಿಸಬೇಕೆಂದು ಸಲಹೆಯನ್ನಿತ್ತರು.

ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಬ್ಯಾಂಕಿನ ರಿಜನಲ್ ಮೆನೆಜರ್ ಡಾ: ಎಂ. ಎಸ್. ಅರುಣಕುಮಾರ್, ರಿಸರ್ವ ಬ್ಯಾಂಕಿನ ಎ.ಜಿ.ಎಂ. ಶ್ರೀ ಲಕ್ಷ್ಮೀಪತಿ, ನಬಾರ್ಡಿನ ದಿ.ದಿ.ಎಂ ಶ್ರೀ ಯೋಗೀಶ್ ಜಿಲ್ಲಾ ಪಂಚಾಯತನ ಯೋಜನಾಧಿಕಾರಿ ಶ್ರೀ ಆರ್. ಜಿ. ನಾಯ್ಕ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಲೀಡ್ ಬ್ಯಾಂಕ್ ಮೇನೇಜರ್ ಶ್ರೀ ಎಂ.ಎನ್. ನಾಯ್ಕರು ಸಾಲ ಯೋಜನೆಯ ಪ್ರಸ್ತಾವನೆಯನ್ನು ನೀಡಿ ಅನುಷ್ಠಾನದಲ್ಲಿ ಎಲ್ಲರ ಸಹಕಾರವನ್ನು ಕೋರಿದರು.

loading...

LEAVE A REPLY

Please enter your comment!
Please enter your name here