ಜೀವನವನ್ನು ಆನಂದಿಂದ ಕಳೆಯಬೇಕು ಸಿದ್ದೇಶ್ವರ ಶ್ರೀಗಳು

0
32
loading...

ಬೆಳಗಾವಿ 27: ಸ್ಪರ್ಷಕ್ಕೆ ಬಹಳ ಮಹತ್ವ ಇದೆ. ಮನುಷ್ಯ ಸ್ಪರ್ಷದಿಂದ ಮನಸ್ಸನ್ನು ಸುಂದರಗೊಳ್ಳುತ್ತದೆ. ಜಗತ್ತು ದೇವರ ಕಟ್ಟಿಕೊಟ್ಟ ಮನೆ. ಇದರಲ್ಲಿ ಮನುಷ್ಯನಿಗೆ ಬೇಕಾಗಿರುವುದು ಎಲ್ಲವೂ ಇದೆ. ಅದನ್ನು ಬಳಸಿಕೊಂಡು ಜೀವನವನ್ನು ಆನಂದಿಂದ ಕಳೆಯಬೇಕು. ಒಬ್ಬ ಶಿಲ್ಪಿ ಕಲ್ಲು ಬಂಡೆಯನ್ನು ಕೆತ್ತಿ ಅದನ್ನು ಒಂದು ಸುಂದರ ಮೂರ್ತಿಯನ್ನು ಮಾಡುತ್ತಾನೆ. ಆ ಸುಂದರ ಮೂರ್ತಿ ಮಾಡುವ ಶಿಲ್ಪಿಯ ಸುಂದರ ಮನಸ್ಸನ್ನು ನಾವು ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಜೀವನ ಸುಂದರವಾಗಿರಲು ಸಾಧ್ಯ ಎಂದು ಎಂದು ವಿಜಯಪೂರದ ಶ್ರೀ ಸಿದ್ಧೇಶ್ವರ ಸ್ವಾಮಿಜಿಗಳು ಹೇಳಿದರು.
ಅವರು ನಗರದ ನಾಗನೂರು ರುದ್ರಾಕ್ಷಿ ಮಠದ ಎಸ್.ಜಿ.ಬಾಳೇಕುಂದ್ರಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರವಚನದಲ್ಲಿ ಮಾತನಾಡಿದರು.
ಜಗತ್ತು ಒಂದು ಸುಂದರ ತಾಣ. ಇದನ್ನು ಅನುಭÀವಿಸುವ ಮನಸ್ಸುಗಳು ಬೇಕು. ಜಗತ್ತಿನ ಸ್ಪರ್ಷ ಮಾಡದಿದ್ದರೇ ಮನಸ್ಸು ಕತ್ತಲೆಯಲ್ಲಿ ಅಡಗಿರುತ್ತದೆ. ಇದನ್ನು ಬೆಳಕಿನಡೆಗೆ ಹೋಗಬೇಕಾದರೆ ಜಗತ್ತಿನ ವಿವಿಧÀ ತಾಣಗಳನ್ನು ನೋಡಿ ಆನಂದಿಸಬೇಕು ಹೇಳಿದರು.
ಜಗತ್ತನ್ನು ಒಬ್ಬೊಬ್ಬರಿಗೆ ಒಂದೊಂದು ತರಹ ಕಾಣುತ್ತದೆ. ರಾಜಕಾರಣಿಗೆಳಿಗೆ ಬೇರೆ, ತತ್ವಜ್ಞಾನಿಗಳಿಗೆ ಬೇರೆ, ಕಲಾವಿದರಿಗೆ ಬೇರೆ ಹೀಗೆ ನೋಡುಗರಿಗೊಬ್ಬರಿಗೆ ವಿವಿಧÀ ರೀತಿಯ ಜಗತ್ತು ಕಾಣುತ್ತದೆ. ಜಗತ್ತು ಒಳ್ಳೆಯದನ್ನು ನೋಡಿದರೇ ಒಳ್ಳೆಯದಾಗಿ ಕಾಣುತ್ತದೆ. ಕೆಟ್ಟದ್ದನ್ನು ನೋಡಿದರೇ ಕೆಟ್ಟದ್ದಾಗಿಯೇ ಕಾಣುತ್ತದೆ. ಜಗತ್ತು ಸುಂದರವಾಗಿ ಕಾಣಬೇಕಾದರೆ ನಮ್ಮ ಮನಸ್ಸು ಸುಂದರವಾಗಿರಬೇಕು ಎಂದು ಹೇಳಿದರು.
ಕೆಟ್ಟ ವ್ಯಕ್ತಿ, ವಸ್ತುಗಳು ಅವುಗಳನ್ನು ಸ್ವಚ್ಚಗೊಳಿಸಲು ಜಗತ್ತಿನ ಸಾಮಥ್ರ್ಯವೆಲ್ಲ ಸತ್ಸಂಗಕ್ಕಿದೆ. ಜಗತ್ತಿನಲ್ಲಿ ಸತ್ಸಂಗದಲ್ಲಿ ಏನೆಲ್ಲಾ ಇದೆ. ನಾವು ಒಳ್ಳೆಯ ಸಂಘ ಮಾಡುವುದನ್ನು ಬಿಟ್ಟು ಕೆಟ್ಟದ್ದನ್ನು ಮಾಡಿದರೆ ಅದನ್ನು ತಿದ್ದಿಕೊಳ್ಳಲು ಸತ್ಸಂಗಕ್ಕೆ ಮಾತ್ರ ಇದೆ. ಜಗತ್ತಿನಲ್ಲಿ ಸತ್ಯಂ ಶಿವಂ ಸುಂದರಂ ಎಂದು ನಾವು ನೋಡಿದ್ದೇವೆ ಕೇಳಿದ್ದೇವೆ. ಮನಷ್ಯನ ಜೀವನ ಬೆಳಕವಾಗಬೇಕಾದರೇ ಒಳ್ಳೆಯ ದೃಷ್ಠಿಯಿಂದ ನೆರೆಹೊರೆಯರನ್ನು ನೋಡಬೇಕು.
ಹೆಣ್ಣು ತನ್ನ ತಂದೆ ತಾಯಿಗಳನ್ನು ಬಿಟ್ಟು ಗಂಡನ ಮನೆಗೆ ಬಂದು ಗಂಡನ ತಂದೆ ತಾುಗಳನ್ನು ಪೂಜಿಸುವ ಹೆಣ್ಣ ತ್ಯಾಗಮು. ಅವರಿಗೆ ನಾವು ತಲೆ ಬಾಗಿಸಬೇಕು. ಇಂತಹ ತಾಯಿಗಳಿಗೆ ನಾವು ಕೋಟಿ ಕೋಟಿ ನಮನ ಮಾಡಿದರೂ ಸಾಲದು. ಮನೆಯಲ್ಲಿ ಸುಂದರ ವಾತಾವರಣ ನಿರ್ಮಾಣವಾಗಬೇಕಾದರೆ. ಮನೆಯಲ್ಲಿ ಒಂದು ಹೆಣ್ಣು ಬೇಕೆ ಬೇಕು. ಹಾಗೂ ಒಳ್ಳೆಯ ಮನಸ್ಸುಗಳೂ ಅಗತ್ಯವಿದೆ ಎಂದು ಹೇಳಿದರು.
ಮನುಷ್ಯ ತನ್ನ ಜೀವನವನ್ನು ಕಡೆಸಿಕೊಂಡು ಜಗತ್ತೇ ಸರಿಲ್ಲ ಎಂದು ಹೇಳಿಕೊಳ್ಳುತ್ತಾರೆ ಹಲವರು. ಇದಕ್ಕೆ ಸತ್ಸಂಗದ ಅವಶ್ಯಕತೆ ಇದೆ. ಸತ್ಸಂಗದ ನಿರಂತರವಾಗಿದ್ದರೆ ಎಲ್ಲರ ಮನೆಯೂ ಸ್ವರ್ಗವಾಗಿರುತ್ತದೆ. ಕಾರಣ ಒಳ್ಳೆಯ ಸತ್ಸಂಗ ಪ್ರಾರಂಭ ಮಾಡಬೇಕು ಎಂದು ಹೇಳಿದರು.

loading...

LEAVE A REPLY

Please enter your comment!
Please enter your name here