ಜೀವ ಜಲವಾದ ನೀರನ್ನು ಉಳಿಸಲು ಎಲ್ಲರೂ ಮುಂದಾಗಬೇಕು:ನ್ಯಾ. ಸುಣಗಾರ

0
30
loading...


ಶಿರಸಿ : ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನ ಹಾಗೂ ಕುಡಿಯುವ ನೀರಿನ ತುಟಾಗ್ರತೆ ಎದುರಿಸುತ್ತಿರುವ ಶಿರಸಿ ತಾಲೂಕಿನಲ್ಲಿ ಮಂಗಳವಾರ ವಿಶ್ವ ನೀರಿನ ದಿನವನ್ನು ನಗರಸಭೆಯ ಸಭಾಭವನದಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು.
ತಾಲೂಕಾ ಆಡಳಿತ, ನಗರಸಭೆ, ತಾಲೂಕಾ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಇಲ್ಲಿನ ನಗರಸಭೆ ಅಟಲಜೀ ಸಭಾಭವನದಲ್ಲಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎನ್.ಸುಣಗಾರ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ದಿನ ಕಳೆದಂತೆ ನೀರಿಗೆ ಭಾರಿ ಬೇಡಿಕೆ ಹೆಚ್ಚುತ್ತಿದೆ. ಇತ್ತೀಚೆಗೆ ಹಣ ನೀಡಿ ನೀರು ಖರೀದಿಸಿ ಕುಡಿಯುವ ಸ್ಥಿತಿ ಬಂದಿದೆ. ಮನುಷ್ಯನ ಸ್ವಾರ್ಥಕ್ಕೆ ನೀರಿನ ಮಟ್ಟ ಕಡಿಮೆಯಾಗಿದ್ದು, ಜೀವ ಜಲವಾದ ನೀರನ್ನು ಉಳಿಸಲು ಎಲ್ಲರೂ ಮುಂದಾಗಬೇಕು ಎಂದರು.
ನಗರಸಭೆಯ ಪೌರಾಯುಕ್ತ ಮಹೇಂದ್ರಕುಮಾರ ನೀರಿನ ಸಮರ್ಪಕ ಬಳಕೆ ಕುರಿತು ವಿಶೇಷ ಉಪನ್ಯಾಸ ನೀಡುತ್ತ, ಹಾಲಿನ ದರಕ್ಕಿಂತ ಇಂದು ನೀರಿನ ದರ ಹೆಚ್ಚಿದೆ. ಮಲೆನಾಡಿನಲ್ಲೀ ಟ್ಯಾಂಕರ್ ಮೂಲಕ ನೀರು ಪೂರೈಸಬೇಕಾದ ಸನ್ನಿವೇಶವಿದೆ. ನೀರಿನ ನಿಜವಾದ ಬೆಲೆ ತಿಳಿಯದೆ ಬಳಸಿದ ಪರಿಣಾಮ ಇಂದು ಸಂದಿಗ್ದತೆ ಎದುರಾಗಿದೆ ಎಂದರು. ನೀರಿನ ನಿಜವಾದ ದರ ನಿಗದಿಗೊಳಿಸಬೇಕು. ಮಿತವಾಗಿ ನೀರನ್ನು ಬಳಸಿ ಮುಂದಿನ ಪೀಳಿಗೆಗೂ ಹಸ್ತಾಂತರಿಸುವ ಕಾರ್ಯ ಪ್ರತಿಯೊಬ್ಬರಿಂದ ಆಗಬೇಕು ಎಂದು ಹೇಳಿದರು.
ಈ ವೇಳೆ ನ್ಯಾಯಾಧೀಶರಾದ ಸಾವಿತ್ರಿ ಕುಜ್ಜಿ, ಪರಶುರಾಮ ದೊಡ್ಮನಿ, ಶಿರಸಿ ಉಪವಿಭಾಗಾಧಿಕಾರಿ ನಾಗೇಂದ್ರ ಹೊನ್ನಳ್ಳಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿನಾಯಕ ಹೊಸಪಟ್ಟಣ, ತಹಶೀಲ್ದಾರ ಬಸಪ್ಪ ಪೂಜಾರಿ, ಸಹಾಯಕ ಸರ್ಕಾರಿ ಅಭಿಯೋಜಕರಾದ ಎಚ್.ಎಂ.ನಧಾಪ್, ಗೀತಾ ಹೊಸಗಾಣಿಗೇರ, ವಕೀಲರ ಸಂಘದ ಸದಾನಂದ ಭಟ್ಟ, ಮಂಜುನಾಥ ಕೆ.ಎಸ್ ಉಪಸ್ಥಿತರಿದ್ದರು. ನಗರಸಭೆ ವ್ಯವಸ್ಥಾಪಕ ಎಲ್.ವಿ.ನಾಯ್ಕ ಸ್ವಾಗತಿಸಿದರು.

loading...

LEAVE A REPLY

Please enter your comment!
Please enter your name here