ಜ್ಞಾನ ಸಂಗ್ರಹಣೆಗಾಗಿ ನಿರಂತರ ಅಧ್ಯಯನ ಅಗತ್ಯ : ಡಾ. ಸ್ಮಿತಾ

0
23
loading...

ಚನ್ನಮ್ಮ ಕಿತ್ತೂರು 10: ಮಹಿಳೆಯರು ಕೀಳರಿಮೆಯನ್ನು ತೊರೆದು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ರಂಗಗಳಲ್ಲಿ ತೊಡಗಿಸಿಕೊಂಡು ದೇಶದ ಅಭಿವೃದ್ಧಿಯ ಅವಿಭಾಜ್ಯ ಅಂಗವಾಗಬೇಕೆಂದು ಬೆಳಗಾವಿ ಆರ್.ಪಿ.ಡಿ. ಕಾಲೇಜಿನ ಪ್ರಾಚಾರ್ಯ ಡಾ. ಸ್ಮಿತಾ ಸುರೇಬಾನಕರ ಹೇಳಿದರು.
ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪರಂಪರೆ ಕೂಟದ ಆಶ್ರಯಯದಲ್ಲಿ ಇಲ್ಲಿಯ ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪಾರಂಪರಿಕ ಉಡುಗೆ ತೊಡುಗೆಗಳು ಅನುಕೂಲವೋ ಅನಾನುಕೂಲವೋ ಎಂಬ ವಿಷಯದ ಕುರಿತು, ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ್ದ ಅಂತರ್ ಮಹಾವಿದ್ಯಾಲಯಗಳ ಚರ್ಚಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವ್ಯಕ್ತಿತ್ವ ರೂಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ದಿಸೆಯಿಂದಲೇ ಮಾತನಾಡುವ ಕಲೆಯನ್ನು ರೂಢಿಸಿಕೊಳ್ಳಬೇಕು. ಜ್ಞಾನ ಸಂಗ್ರಹಣೆಗಾಗಿ ನಿರಂತರ ಅಧ್ಯಯನ ಅಗತ್ಯವಾಗಿದೆ ವಿದ್ಯಾರ್ಥಿಗಳಲ್ಲಿ ಚಿಂತನೆ ಮೂಡಿಸುವ ದಿಸೆಯಲ್ಲಿ ಐತಿಹಾಸಿಕ ಕಿತ್ತೂರಿನ ಕಾಲೇಜಿನಲ್ಲಿ ಆಯೋಜಿಸಿರುವ ಚರ್ಚಾ ಸ್ಪರ್ಧೆ ಅತ್ಯಂತ ಪೂರಕವಾಗಿದೆ ಎಂದು ಹೇಳಿದರು.
ಸಾನಿಧ್ಯವಹಿಸಿದ್ದ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಯುವ ಸಮಾಜ ಆಧುನಿಕತೆ ಹಾಗೂ ಪ್ರಾಪಂಚಿಕ ವಿದ್ಯಮಾನಗಳಿಂದಾಗಿ ಸಂಸ್ಕಾರ ಕಳೆದುಕೊಂಡ ದಾರಿ ತಪ್ಪುತ್ತಿರುವ ಈ ದಿನಗಳಲ್ಲಿ ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ಮತ್ತು ನೈತಿಕ ತಿಳುವಳಿಕೆಯನ್ನು ಶಿಕ್ಷಕರು ನೀಡಬೇಕೆಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಕಿನಾವಿವ ಸಂಘದ ಅಧ್ಯಕ್ಷ ಜಗದೀಶ ವಸ್ತ್ರದ, ಉನ್ನತ ಶಿಕ್ಷಣವನ್ನು ಪಡೆಯುವದರ ಜೊತೆಗೆ ದೇಶಿ ಸಂಸ್ಕøತಿಯನ್ನು ಪರಂಪರೆ ಹಾಗೂ ದೇಶಾಭಿಮಾನ ಮೈಗೂಡಿಸಿಕೊಂಡು ಗುರು ಹಿರಿಯರಿಗೆ ಗೌರವ ಕೊಡುವ ಆದರ್ಶ ವಿದ್ಯಾರ್ಥಿಗಳು ಆಗಬೇಕೆಂದು ಹೇಳಿದರು.
ಡಾ. ಸ್ಮಿತಾ ಸುರೇಬಾನಕರ ಹಾಗೂ ಅತಿಥಿಗಳಾಗಿದ್ದ ಗ್ರಾಮದೇವಿ ಮಹಿಳಾ ಮಂಡಳದ ಅಧ್ಯಕ್ಷೆ ಗಿರಿಜಾದೇವಿ ತೊರಗಲ್ಲಮಠ, ಉಪಾಧ್ಯಕ್ಷೆ ಉಮಾದೇವಿ ಬಿಕ್ಕಣ್ಣವರ ಅವರನ್ನು ಸನ್ಮಾನಿಸಲಾಯಿತು.
ಪ್ರಾಚಾರ್ಯ ಡಾ. ಶ್ರೀಕಾಂತ ದಳವಾಯಿ ಸ್ವಾಗತಿಸಿದರು. ಡಾ.ಕೆ.ಎನ್.ನರಹರಿ ಪ್ರಾಸ್ತಾವಿಕ ಮಾತನಾಡಿದರು ಸವಿತಾ ಹಂದೂರ ನಿರೂಪಿಸಿದರು ಜಿ.ಎ. ಸಾಳೂಂಕೆ ವಂದಿಸಿದರು.
ಶಿರಸಿ, ಹುಬ್ಬಳ್ಳಿ, ಹಾವೇರಿ, ಸವದತ್ತಿ, ಬೆಳಗಾವಿ, ಧಾರವಾಡ ಸೇರಿದಂತೆ ವಿವಿಧ ಮಹಾವಿದ್ಯಾಲಯಗಳಿಂದ 19 ವಿದ್ಯಾರ್ಥಿನಿಯರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಶಿರಸಿ ಎಮ್ ಇ ಎಸ್ ಕಾಲೇಜಿನ ಮೇಘಾ ಎ ಹೆಗಡೆ ಪ್ರಥಮ, ಧಾರವಾಡದ ಕೆ ಇ ಬೋರ್ಡ ಕಾಲೇಜನ ಶೃತಿ ಎಮ್ ಕಿಲ್ಲೇದಾಮಠ ದ್ವಿತೀಯ, ಧಾರವಾಡದ ಜಿ ಎಚ್ ಕಾಲೇಜಿನ ನಾಝೀಯ ಕಿಲ್ಲೇದಾರ ತೃತೀಯ, ಕಿಟಲ್ ಕಾಲೇಜಿನ ಪ್ರಿಯಾಂಕ ಬಿ ಎಲ್ ಚತುರ್ಥ ಸ್ಥಾನ ಪಡೆದುಕೊಂಡಿದ್ದಾರೆ.

loading...

LEAVE A REPLY

Please enter your comment!
Please enter your name here