ದೇಹಲಿಯಲ್ಲಿ ಅರಳಿದ ಹಳ್ಳಿ ಪ್ರತಿಭೆ, ಶೋತೃಗಳ ಮನಗೆದ್ದ ಡಿ.ಎಸ್.ಚಾಳೇಕರ

0
18
loading...

ಮೋಳೆ 31: ಅಥಣಿ ತಾಲೂಕಿನ ಮೋಳೆದಂಥ ಕುಗ್ರಾಮದಲ್ಲಿ ಜನಿಸಿ, ಅನೇಕ ಸೌಲಭ್ಯಗಳ ಕೊರತೆಯನ್ನು ಮೀರಿ ಇತ್ತೀಚಿಗೆ ದೇಹಲಿಯ ಯಮುನಾ ನದಿ ತೀರದಲ್ಲಿ ಜರುಗಿದ ವಿಶ್ವ ಶಾಂತಿ ಸಮ್ಮೇಳನದಲ್ಲಿ ಡಿ.ಎಸ್.ಚಾಳೇಕರ ಅವರು ತಮ್ಮ ಸೀತಾರ ವಾದನದ ಮೂಲಕ ರಸಿಕರ ಮನಸ್ಸನ್ನು ತನಿಸುವ ಮೂಲಕ ಹುಟ್ಟುರಿಗೆ ಹಾಗೂ ಇಡೀ ನಾಡಿಗೆ ಗೌರವ ತಂದಿದ್ದಾರೆ.
ಮಾರ್ಚ 11 ರಿಂದ ಮೂರು ದಿನಗಳವರೆಗೆ ದೇಹಲಿಯ ಯಮುನಾ ನದಿ ತೀರದಲ್ಲಿ ಜರುಗಿದ ಆರ್ಟ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ ಗುರುಜಿಯವರು ತಮ್ಮ ಸಂಸ್ಥೆಯ 35 ನೇ ವಾರ್ಷಿಕ ಸಮ್ಮೇಳನ ಸವಿ ನೆನಪಿಗಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿತಾರ ಸೇವೆಯನ್ನು ನೀಡಿ ಜನ ಮೆಚ್ಚುಗೆ ಪಡೆದಿದ್ದಾರೆ.
ವೃತ್ತಿಯಿಂದ ಶಿಕ್ಷಕರಾಗಿದ್ದು, ಪ್ರವೃತ್ತಿಯಲ್ಲಿ ಸಿತಾರ ವಾದ್ಯವನ್ನು ಕಲಿತು ದೇಶದ ಪ್ರಸಿದ್ದ ನಗರಗಳಲ್ಲಿ ತಮ್ಮ ವಾದನದ ಮೂಲಕ ರಸಿಕರ ಮನಸ್ಸನ್ನು ಸೂರೆ ಗೊಳಿಸಿದ್ದಾರೆ. ಇವರು ನಾಡಿನ ಸಾವಿರಾರು ಶಾಲಾ ಕಾಲೇಜು ಮಠ ಮಾನ್ಯಗಳಲ್ಲಿ ತಮ್ಮ ಸಿತಾರ ವಾದನದ ಮೋಡಿಯಿಂದ ಜನ ಮನ ಗೆದ್ದಿದ್ದಾರೆ. ವಿಜ್ಞಾನ ಪದವಿಧರರಾಗಿದ್ದು, ಅಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ವಿವಿಧ ರಾಗಗಳನ್ನು ಹೊರಡಿಸಿ ಶೋತೃಗಳ ಮನಸನ್ನು ತನಿಸಿದ ಶ್ರೇಯಸ್ಸು ಡಿ.ಎಸ್.ಚಾಳೇಕರ ಅವರಿಗೆ ಸಲ್ಲುತ್ತದೆ.
ದೇಹಲಿಯ ನಡೆದ 155 ರಾಷ್ಟ್ರಗಳ ಆಯ್ದ ಕಲಾವಿಧರು ಭಾಗವಹಿಸಿದ್ದರು. ಕರ್ನಾಟಕದಿಂದ ಸಿತಾರ ವಾಧಕರಾಗಿಡಿ.ಎಸ್.ಚಾಳೇಕರ,(ಮೋಳೆ) ಶ್ರೀಮತಿ ಅರುಂಧತಿ ದೇಶಪಾಂಡೆ, ಶ್ರೀಮತಿ ಸಂಗೀತಾ ನಾಯಿಕ, ಕುಮಾರಿ ರಾಜೇಶ್ವರಿ ಭಾಗವಹಿಸಿ ಸೇವೆ ಸಲ್ಲಿಸಿದ್ದಾರೆ.
ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜನಾಥಶಿಂಗ್, ಸುಷ್ಮಾ ಸ್ವರಾಜ, ದೇಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ, ಶ್ರೀ ರವಿಶಂಕರ ಗುರುಜಿ ಸೇರಿದಂತೆ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೀಡಿದ್ದು ಪ್ರಧಾನ ಮಂತ್ರಿಗಳಿಂದ ಸ್ಮಾನ ಸ್ವೀಕರಿಸಿದ್ದಾರೆ.

loading...

LEAVE A REPLY

Please enter your comment!
Please enter your name here