ನಮ್ಮ ಜೀವನದ ನಿರ್ಮಾತೃ ನಾವೇ: ಶ್ರೀ ವಿಜಯಾನಂದ ಸ್ವಾಮೀಜಿ

0
31
loading...

ಸಿದ್ದಾಪುರ : ವಾಣಿಜ್ಯ ಪ್ರೇರಿತ ಜಗತ್ತಿನಲ್ಲಿ ಬದುಕುವ ಯುವಜನಾಂಗ ಆಧುನಿಕ ಉಪಕರಣ ಮತ್ತು ವಸ್ತುಗಳಿಗೆ ಅತಿಯಾದ ಆಕರ್ಷಣೆಗೆ ಒಳಗಾಗದೆ, ತಮ್ಮ ಜೀವನದ ಗೊತ್ತು-ಗುರಿಗಳನ್ನು ಬಹಳ ವಿವೇಕದಿಂದ ನಿರ್ಧರಿಸಿಕೊಳ್ಳಬೇಕು, ಬದಲಾಗುತ್ತಿರುವ ಜೀವನ ಮೌಲ್ಯಗಳ ಸಂದರ್ಭದಲ್ಲಿ ವಿವೇಚನಾ ರಹಿತ ಹಾಗೂ ಜವಾಬ್ದಾರಿ ರಹಿತ ಜೀವನ ರೀತಿಯನ್ನು ಬದಲಾಯಿಸಿಕೊಳ್ಳಬೇಕು, ದೇಶದ ನಿರ್ಮಾಣದ ಬಗ್ಗೆ ಚಿಂತನೆ ಮಾಡಬೇಕು, ಈ ದಿಶೆಯಲ್ಲಿ ಸ್ವಾಮಿ ವಿವೇಕಾನಂದರ ಕುರಿತು ಓದುವುದು ಮತ್ತು ಕೇಳುವುದು ಪ್ರೇರಕ ಶಕ್ತಿ ಎಂದು ಧಾರವಾಡದ ರಾಮಕೃಷ್ಣ ವಿವೇಕಾಂದ ಆಶ್ರಮ, ಅಧ್ಯಕ್ಷರಾದ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿಯವರು ಯುವಕರಿಗೆ ಕರೆ ನೀಡಿದರು.
ಅವರು ಸ್ಥಳೀಯ ಎಂಜಿಸಿ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಸಂದೇಶ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ವ್ಯಕ್ತಿತ್ವ ವಿಕಸನ, ಯಶಸ್ಸಿನ ರಹಸ್ಯ, ಜೀವನ ಮೌಲ್ಯಗಳು ಮುಂತಾದ ಮೌಲ್ಯಯುತವಾದ ಮತ್ತು ಜೀವನ ಮಾರ್ಗದರ್ಶಕವಾಗಬಲ್ಲ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿತ್ತು.
ಅಧ್ಯಕ್ಷತೆಯನ್ನು ಪ್ರಾಚಾರ್ಯ ಪ್ರೊ. ಜಿ ವಿ ಶೆಟ್ಟಿ ವಹಿಸಿದ್ದರು.
ಶಿಕ್ಷಣ ಪ್ರಸಾರಕ ಸಮಿತಿಯ ಗೌರವ ಕಾರ್ಯದರ್ಶಿ ಸಿ ಆರ್ ಹೆಗಡೆ ಕೌಲಕೊಪ್ಪ ಉಪಸ್ಥಿತರಿದ್ದರು.ಉಪನ್ಯಾಸಕ ವಿನಾಯಕ ಎಂ ಎಸ್, ವಿದ್ಯಾರ್ಥಿಗಳಾದ ವೀಣಾ, ವಾಣಿ, ಶ್ರೀಲತಾ, ಭಾಗ್ಯಾ, ಅಭಿಷೇಕ, ಸಂತೋಷ ರಾಠೋಡ್ ಕಾರ್ಯಕ್ರಮ ನಿರ್ವಹಿಸಿದರು.

loading...

LEAVE A REPLY

Please enter your comment!
Please enter your name here