ನಿತ್ಯ ಜೀವನದಲ್ಲಿ ಕನ್ನಡ ಬಳಕೆಗೆ ಒತ್ತು ನೀಡಿ :ಮೆಟಗುಡ್ಡ

0
20
loading...

ಚನ್ನಮ್ಮ ಕಿತ್ತೂರ 21: ಕನ್ನಡ ನಾಡು ನುಡಿಯ ಬೆಳವಣಿಗೆಗಾಗಿ ಎಲ್ಲರೂ ನಿತ್ಯ ಜೀವನದಲ್ಲಿ ಹೆಚ್ಚು ಹೆಚ್ಚಾಗಿ ಕನ್ನಡ ಬಳಸಲು ಮುಂದಾಗಬೇಕೆಂದು ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಕರೆ ನೀಡಿದರು. ಇಲ್ಲಿಯ ರಾಜಗುರು ಸಂಸ್ಥಾನ ಕಲ್ಮಠದ ಸಭಾಭವನದಲ್ಲಿ ನಡೆದ ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ತಾಯಂದಿರಿಂದ ಹೆಚ್ಚಾಗಿ ಮಾತೃ ಭಾಷೆಯ ಬಳಕೆಯಾಗುತ್ತಿದ್ದು, ಭಾಷೆಯ ಬೆಳವಣಿಗೆಯಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಬಾಲ್ಯಾವಸ್ಥೆಯಿಂದಲೇ ಕನ್ನಡತನವನ್ನು ತುಂಬಬೇಕೆಂದು ಹೇಳಿದರು.

ಸಾನಿಧ್ಯವಹಿಸಿ ಮಾತನಾಡಿದ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಮಾನವರೆಲ್ಲರೂ ಉತ್ತಮ ಮೌಲ್ಯಗಳನ್ನು ಅಳವಡಿಕೊಂಡರೆ ನಮ್ಮಲ್ಲಿ ಶಾಂತಿ ನೆಲೆಸುತ್ತದೆ. ಸಕಲ ಜೀವಾತ್ಮದಲ್ಲಿ ಶ್ರೇಷ್ಠತೆಯನ್ನು ಕಾಣುವುದೇ ನಿಜವಾದ ಕುಲ. ವಿದ್ಯಾರ್ಥಿಗಳು ತಂದೆ ತಾಯಿಯನ್ನು ಪೂಜ್ಯಭಾವದಿಂದ ಗೌರವಿಸಬೇಕು. ಕಠಿಣ ಪರಿಶ್ರಮದಿಂದ ವಿದ್ಯಾರ್ಥಿ ಜೀವನವನ್ನು ಸದುಪಯೋಗ ಪಡಿಸಿಕೊಳಬೇಕೆಂದು ಹೇಳೀದರು.

ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ಗುರುಸಿದ್ದೇಶ್ವರ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ಎಸ್.ಎಸ್. ನರಸಣ್ಣವರ, ಬಿಎ ಬಿಕಾಂ ಪರೀಕ್ಷೆಗಳಲ್ಲಿ ರಾಣಿ ಚನ್ನಮ್ಮ ವಿ. ವಿ. ರ್ಯಾಂಕ್ ವಿಜೇತರಾದ ರಾಮದುರ್ಗದ ನೇಹಾ ನೆಲ್ಲೂರ, ಮುಗಳಖೋಡದ ಸಾವಿತ್ರಿ ಖೇತಗೌಡರ, ಕಿತ್ತೂರ ಕಾಲೇಜಿನ ಕು.ವಿನಾಯಕ ಗಣಾಚಾರಿ, ಮಹಿಳಾ ವಾಲಿ ಬಾಲ್ ತಂಡಕ್ಕೆ ಬ್ಲೂ ಆಗಿ ಆಯ್ಕೆಯಾಗಿರುವ ಕು.ಮಹಾದೇವಿ ಬೆಳಗಾವಿ, ಕಬಡ್ಡಿ ತಂಡಕ್ಕೆ ಬ್ಲೂ ಆಗಿ ಆಯ್ಕೆಯಾಗಿರುವ ಕು.ಸುಮಿತ್ರಾ ಲಿಂಗದಳ್ಳಿ ಹಾಗೂ ಕು. ಹಣಮಂತ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.

ಕಿನಾವಿವ ಸಂಘದ ಉಪಾಧ್ಯಕ್ಷ ಸಿ.ಜಿ.ದಳವಾಯಿ ಅಧ್ಯಕ್ಷತೆವಹಿಸಿದ್ದರು. ಗೌ ಕಾರ್ಯದರ್ಶಿ ಆರ್.ವೈ.ಪರವಣ್ಣವರ ಅತಿಥಿಗಳಾಗಿದ್ದರು. ಕ್ರೀಡಾ ಕಾರ್ಯದರ್ಶಿ ಕು.ಗುಗ್ಗರಿ, ಪ್ರಧಾನ ಕಾರ್ಯದರ್ಶಿಗಳಾದ ಕು.ಈರಪ್ಪ ಪಟ್ಟೇದ, ಕು.ಲಕ್ಷ್ಮೀ ಬೆಳಗಾವಿ ವೇದಿಕೆಯಲ್ಲಿದ್ದರು. ಪ್ರಾಚಾರ್ಯ ಎಸ್.ಬಿ.ದಳವಾಯಿ ಸ್ವಾಗತಿಸಿದರು. ಪ್ರೊ. ಎಸ್.ಎಸ್ ಬಿರಾದಾರಪಾಟೀಲ ವರದಿ ವಾಚಿಸಿದರು. ಪ್ರೊ. ಎಚ್.ಕೆ.ನಾಗರಾಜ ಹಾಗೂ ಪ್ರೊ.ಕೆ.ಆರ್.ಮೆಳವಂಕಿ ನಿರೂಪಿಸಿದರು. ಪ್ರೊ. ಪಿ.ಬಿ.ಹೊನ್ನಪ್ಪನವರ ವಂದಿಸಿದರು.

loading...

LEAVE A REPLY

Please enter your comment!
Please enter your name here