ನೀರಿನ ಮಹತ್ವ ಕುರಿತು ತಿಳುವಳಿಕೆ ನೀಡುವ ಕಾರ್ಯವಾಗಲಿ

0
100
loading...

ಧಾರವಾಡ 30: ಭಾರತದ ಜನ ಸಂಖ್ಯೆ ಹೆಚ್ಚುತ್ತಾ ಸಾಗಿರುವುದರಿಂದ, ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆಯ ಅವಶ್ಯಕತೆ ಇದೆ. ದೇಶದಲ್ಲಿ ಬಳಕೆಯಾಗುವ ನೀರಿನಲ್ಲಿ 85.3% ನೀರಾವರಿಗೆ ಬಳಕೆಯಾದರೆ, 6.5% ಗೃಹ ಬಳಕೆಗೆ, 1.3% ಕೈಗಾರಿಕೆಗೆ, 0.3% ವಿದ್ಯುತ್‍ಗೆ ಬಳಕೆಯಾಗುತ್ತಿದೆ ಎಂದು ಕೆ.ಎಲ್.ಇ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ವಿಭಾಗದ ಮುಖ್ಯಸ್ಥ ಪ್ರೊ. ಶರದ್ ಜೋಶಿ ಹೇಳಿದರು.
ಕೆ.ಎಲ್.ಇ ಸಂಸ್ಥೆಯ ಕೆ.ಎಲ್.ಇ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಜಲ ಸಂರಕ್ಷಣೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ,
ಜಗತ್ತಿನ 2% ಭೂಮಿ. 4% ನೀರು, 17% ಜನಸಂಖ್ಯೆಯನ್ನು ಹೊಂದಿದ ಭಾರತ ದೇಶದಲ್ಲಿ ನೀರಿಗಾಗಿ ಸರಿಯಾದ ಯೋಜನೆ ಮೂಲಕ ನೀರಿನ ಸಂರಕ್ಷಣೆ ಮಾಡದೆ ಹೊದರೆ ಮುಂದಿನ ದಿನಗಳಲ್ಲಿ ದೇಶದಲ್ಲಿ ನೀರಿಗಾಗಿ ಆಹಾಕಾರ ತಲೆದೋರುತ್ತದೆ. ದೇಶದ ಎಲ್ಲ ಜನರಿಗೆ ಶುದ್ಧ ನೀರು ದೊರಕುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಪ್ರಕೃತಿಯಲ್ಲಿ 97.2% ಸಮುದ್ರ ನೀರಿದ್ದರೆ, 2.8% ಕುಡಿಯಲು ಯೋಗ್ಯ ನೀರಿದೆ. ಜೀವನಶೈಲಿ ಬದಲಾವಣೆ, ಪರಿಸರ ಮಾಲಿನ್ಯ, ಹವಾಮಾನ ವೈಪರೀತ್ಯ, ನಗರೀಕರಣ, ಬರ, ನೆರೆ ಮೊದಲಾದ ಕಾರಣಗಳಿಂದ ನೀರಿನ ಕೊರತೆ ಹೆಚ್ಚಾಗಿ ಕಾಣುತ್ತದೆ. ಬೃಹತ್ ಆಣೆಕಟ್ಟುಗಳು ಜಲಬಾಂಬ್‍ಗಳಂತಿದ್ದು ಅವುಗಳ ಮಾರಕ ಪರಿಣಾಮಗಳನ್ನು ಅರಿತುಕೊಳ್ಳಬೇಕಿದೆ. ಪ್ರಕೃತಿಗೆ ತೊಂದರೆಯಾಗದಂತೆ ಯೋಜನೆ ರೂಪಿಸಬೇಕು ಎಂದರು.
ಕೃಷಿ ತಜ್ಞ ಜಯದೇವ ಅಗಡಿ ಮಾತನಾಡಿ, ನಗರ ಪ್ರದೇಶದಲ್ಲಿ ನೀರಿನ ದುರ್ಬಳಕೆ ಹೆಚ್ಚಾಗಿದೆ ಅದಕ್ಕಾಗಿ ನಗರದ ಜನತೆಗೆ ನೀರಿನ ಮಹತ್ವ ಕುರಿತು ತಿಳುವಳಿಕೆ ನೀಡುವ ಕಾರ್ಯ ಆಗಬೇಕಾಗಿದೆ. ನೀರಿನ ಮರು ಬಳಕೆಯ ಕುರಿತು ಹೆಚ್ಚು ಹೆಚ್ಚು ಚಿಂತನ ಮಂಥನ ಕಾರ್ಯಾಗಾರ ನಡೆಯಬೇಕು ಎಂದರು.
ಪ್ರಾಚಾರ್ಯ ಡಾ. ಬಸವರಾಜ ಎಸ್. ಅನಾಮಿ ಅಧ್ಯಕ್ಷತೆವಹಿಸಿದ್ದರು. ಡಾ.ವಿ.ಬಿ.ನಿಟಾಲಿ, ಸಾಹಿತಿ ಪ್ರೊ.ಎಸ್.ವಿ. ಪಟ್ಟಣಶೆಟ್ಟಿ ಉಪಸ್ಥಿತರಿದ್ದರು. ಸುರೇಶ ಡಿ. ಹೊರಕೇರಿ ಸ್ವಾಗತಿಸಿದರು. ಪ್ರಸಾದ ಕಡೋಲಕರ ನಿರೂಪಿಸಿದರು. ರಾಜೇಶ ಪಟೇಲ್ ವಂದಿಸಿದರು.

loading...

LEAVE A REPLY

Please enter your comment!
Please enter your name here