ನೀರಿಲ್ಲದೆ ನಿಂತಿರುವ ಕೃಷ್ಣೆ: ಕುಡಿಯುವ ನೀರಿಗೆ ತತ್ವಾರ

0
18
loading...

*ಸಿದ್ದಯ್ಯ ಹಿರೇಮಠ
ಮೋಳೆ (ತಾ:ಅಥಣಿ): ಬೇಸಿಗೆ ಆರಂಭದಲ್ಲಿಯೇ ಕೃಷ್ಣಾ ನದಿಯ ಪಾತ್ರ ಬರಿದಾಗಿದ್ದು, ಬೆಳಗಾವಿ ಜಿಲ್ಲೆಯ ಅಥಣಿ, ಚಿಕ್ಕೋಡಿ, ರಾಯಬಾಗ ಹಾಗೂ ಜಮಖಂಡಿ ತಾಲ್ಲೂಕಿನ ನೂರಾರು ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಪರದಾಟ ಉಂಟಾಗಿದ್ದು, ಬರದ ನಾಡಿನ ಜನತೆ ಬೇಸಿಗೆ ಎಂದರೆ ಹೆದರುವಂತಾಗಿದೆ.
ಈ ಬಾರಿ ತಾಲೂಕಿನಲ್ಲಿ ಅತ್ಯಲ್ಪವಾಗಿದ್ದು, ಫೇಬ್ರುವರಿ ಎರಡನೇ ವಾರದಲ್ಲಿಯೇ ಕೃಷ್ಣೆ ಬತ್ತಿರುವದರಿಂದ ಸಹಜವಾಗಿಯೇ ಜನತೆಯಲ್ಲಿ ಆತಂಕ ಉಂಟಾಗಿದೆ. ನದಿ ಸಂಪೂರ್ಣವಾಗಿ ಬತ್ತುವದಕ್ಕಿಂತ ಮುಂಚೆ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಲು ಪಕ್ಷಾತೀತವಾಗಿ ಮುಖ್ಯಮಂತ್ರಿಗಳ ಹಾಗೂ ನೀರಾವರಿ ಸಚಿವರ ಗಮನಕ್ಕೆ ತಂದು ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟೆಯಿಂದ ನೀರು ಬಿಡುಗಡೆ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಅಥಣಿ, ಕುಡಚಿ, ರಾಯಬಾಗ, ಜಮಖಂಡಿ ಪಟ್ಟಣ ಸೇರಿದಂತೆ ನೂರಾರು ಹಳ್ಳಿಗಳಿಗೆ ಕುಡಿಯುವ ನೀರಿಗೆ ಕೃಷ್ಣಾ ನದಿಯೇ ಆಧಾರ, ಈಗ ನದಿ ನೀರು ಬರಿದಾಗಿದ್ದರಿಂದ ಕುಡಿಯುವ ನೀರು ಪೂರೈಸುವ ಯೋಜನೆಗಳೆಲ್ಲ ಸಂಪೂರ್ಣ ಸ್ಥಗಿತಗೊಂಡಿವೆ.
ಸತತ ಎರಡು ವರ್ಷಗಳಿಂದ ಭೀಕರ ಬರಗಾಲ ಆವರಿಸಿರುವದರಿಂದ ಬಾವಿ ಹಾಗೂ ಕೊಳವೆ ಬಾವಿಗಳೆಲ್ಲ ನೀರಿಲ್ಲದೇ ಬತ್ತಿ ಹೋಗಿದ್ದು ತೀವ್ರ ಜಲಕ್ಷಾಮ ಮಾರ್ಚ್ ಮೊದಲ ವಾರದಲ್ಲಿಯೇ ಎದುರಾಗಿದೆ.
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಹಾರಾಷ್ಟ್ರಕ್ಕೆ ನಿಯೋಗ ತಗೆದುಕೊಂಡು ಹೋಗಿ ಅಲ್ಲಿಯ ಮುಖ್ಯಮಂತ್ರಿಯ ಜೊತೆ ಮಾತುಕತೆ ನಡೆಸಿ ಶೀಘ್ರದಲ್ಲಿಯೇ ಕೊಯ್ನಾ ಜಲಾಶಯದಿಂದ ಎರಡು ಟಿ.ಎಮ್.ಸಿ ನೀರು ಬಿಡಿಸುವ ವ್ಯವಸ್ಥೆ ಮಾಡಬೇಕೆಂದು ಈ ಭಾಗದ ಜನತೆಯ ಒತ್ತಾಯವಾಗಿದೆ.
ಬಾಕ್ಸ್:
ಸನ್ 1972 ರ ಭೀಕರ ಬರಗಾಲದ ನೆನಪಾಗುತ್ತದೆ ಎಂದು ವಯೋವೃದ್ಧ ರೈತನೋರ್ವ ತನ್ನ ಅಳಲನ್ನು ತೋಡಿಕೊಂಡಿದ್ದು ಹೀಗೆ, “ಆಗ ಬರಗಾಲ ಬಿದ್ದಾಗ ದನಕರುಗಳಿಗೆ ಜಾಲಿಮರದ ತೊಗಟೆ, ಬಸರಿಗಿಡದ ತೊಪ್ಪಲ ತಿನಿಸಿ ಜ್ವಾಪಾನ ಮಾಡಿವಿ, ಈಗೂ ಹಂಗ ಆಕೈತ್ತೋ ಏನೊ, ಆ ದೇವರಿಗೆ ಗೊತ್ತು ಎನ್ನುತ್ತಾರೆ

loading...

LEAVE A REPLY

Please enter your comment!
Please enter your name here