ಪರವಾನಗಿ ಇಲ್ಲದೆ ಅಪಾಯಕಾರಿ ಟ್ಯಾಂಕರ್ ನಿರ್ಮಾಣ

0
21
loading...


ಕಾರವಾರ : ನಗರದ ಬಂದರು ಇಲಾಖೆಯ ಅಲಿಗದ್ದಾದಲ್ಲಿ ಅಂಗನವಾಡಿಯ ಪಕ್ಕದಲ್ಲೇ ರುಚಿ ಇನ್ಪಾಸ್ಟಕ್ಚರ್ ಲಿಮಿಟೆಡ್ ಎನ್ನುವ ಕಂಪೆನಿ ಡಾಂಬರ್ ಸ್ಟೋರೇಜ್ ಟ್ಯಾಂಕರ್ ಸ್ಥಾಪಿಸಿದೆ. ಈ ಟ್ಯಾಂಕರ್ ಅತ್ಯಂತ ಅಪಾಯಕಾರಿ ಎನ್ನುವುದು ಸಾರ್ವಜನಿಕರ ವಲಯದಲ್ಲಿ ಆತಂಕಕ್ಕೆ ಮನೆ ಮಾಡಿದೆ..
ಬಂದರು ಇಲಾಖೆಯವರು ಯಾವುದೇ ದೃಷ್ಟಿಯಿಂದ ಪರಿಶೀಲನೆ ನಡೆಸದೆ ಡಾಂಬರ್ ಸ್ಟೋರೇಜ್ ಟ್ಯಾಂಕರ್ ನಿರ್ಮಾಣಕ್ಕೆ ಅನುಮತಿ ನೀಡಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದ್ದು ಯಾವುದೇ ಅವಗಡ ಸಂಭವಿಸಿದರೆ ಇದಕ್ಕೆ ಯಾರು ಜವಾಬ್ದಾರರು ಎನ್ನುವ ಪ್ರಶ್ನೆ ಎದುರಾಗಿದೆ.
ಅಲ್ಲದೆ ಈ ಟ್ಯಾಂಕರ್ ಪಕ್ಕದಲ್ಲೆ ಅಂಗನವಾಡಿ ಇದ್ದು ಇಂತಹ ಅಪಾಯಕಾರಿ ಡಾಂಬರ್ ಟ್ಯಾಂಕರ್ ಸ್ಥಾಪಿಸುವ ಅವಕಾಶವಿಲ್ಲ. ಆದರೆ ಬಂದರು ಇಲಾಖೆಯ ಅಧಿಕಾರಿಗಳು ಇಂಥ ಕಾರ್ಯಕ್ಕೆ ಮುಂದಾಗಿದ್ದು ಈ ಬಗ್ಗೆ ಬಂದರು ಇಲಾಖೆಯ ನಿರ್ದೇಶಕ ಮೋಹನರಾಜ್ ಘಟ್ಟ ಅವರನ್ನು ಪ್ರಶ್ನಿಸಿದರೆ ಮಾತನಾಡಲು ನಿರಾಕರಿಸಿ, ನುಣಿಚಿಕೊಂಡಿದ್ದಾರೆ.
ಕಾರವಾರದ ಅಲಿಗದ್ದಾದಲ್ಲಿ ರುಚಿಗೋಲ್ಡ್ ಎನ್ನುವ ಕಂಪೆನಿ 2003ರಲಿ ಪಾಮ್ ಆಯಿಲ್ ಸ್ಟೋರೇಜ್ ಮಾಡಲು ಟ್ಯಾಂಕ್ ನಿರ್ಮಿಸಿತ್ತು. ಆದರೆ ಪಾಮ್ ಆಯಿಲ್ ಸ್ಟೋರೇಜ್ ಮಾಡಲು ಕೆಲವು ತೊಂದರೆ ಉಂಟಾಗಿದ ಹಿನ್ನೆಲೆಯಲ್ಲಿ ಅದನ್ನು ಸ್ಥಗಿತಗೊಳಿಸಲಾಗಿತ್ತು.
ಬಳಕ ಪ್ರಕೃತೀಸ್ ಇನ್ ಪ್ರಾ ಇಮ್‍ಪೆಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಈ ಟ್ಯಾಂಕ್‍ಗಳನ್ನು ಖರೀದಿ ಮಾಡಿ ರುಚಿ ಇನ್ಪಾಸ್ಟಚ್ಚರ್ ಲಿಮಿಟೆಡ್ ಎನ್ನುವ ಕಂಪೆನಿಯ ಮೂಲಕ ಡಾಂಬರ್ ಸ್ಟೋರೇಜ್ ಮಾಡಲು ಆರಂಬಿಸಿದೆ. ಅಂಗನವಾಡಿ, ಜನವಸತಿ ಪ್ರದೇಶದಲ್ಲಿ ಇಂತಹ ಅಪಾಯಕಾರಿ ಟ್ಯಾಂಕರ್ ನಿರ್ಮಿಸಲು ಇಲ್ಲ. ಆದರೆ ಬಂದರು ಹಾಗೂ ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿ ಈ ಬಗ್ಗೆ ಪರಿಶೀಲನೆ ನಡೆಸಿಲ್ಲ ಎನ್ನುವ ಆರೋಪ ಎದುರಾಗಿದೆ.
ಅನೇಕ ಮಕ್ಕಳ ಟ್ಯಾಂಕರ್ ಪಕ್ಕದ ಅಂಗನವಾಡಿಗೆ ತೆರಳುತ್ತಿದ್ದು ಇದರಿಂದ ಅನಾರೋಗ್ಯಕ್ಕೂ ಕಾರಣವಾಗಹುದು ಎನ್ನುವುದು ಜನರ ಆತಂಕವಾಗಿದೆ. ಜನರ ಸುರಕ್ಷತೆ ದೃಷ್ಟಿಯಿಂದ ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಬೇಕು ಹಾಗೂ ಇದರ ಆಗುಹೋಗುಗಳ ಬಗ್ಗೆ ಸೂಕ್ತ ರೀತಿಯಲ್ಲಿ ತಿಳಿದುಕೊಂಡು ಸೂಕ್ತ ರೀತಿಯಲ್ಲಿ ಕ್ರಮಕೈಗೊಳ್ಳಬೇಕು.
ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಗುರುದೇವ ಪ್ರಕಾಶ ಅವರ ಬಳಿ ವಿಚಾರಿಸಿದಾ ಅಂಗನವಾಡಿ ಹಾಗೂ ಜನವಸತಿ ಇರುವ ಪ್ರದೇಶವನ್ನು ಪರಿಶೀಲನೆ ನಡೆಸದೆ ಟ್ಯಾಂಕರ್ ನಿರ್ಮಾಣಕ್ಕೆ ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಸರಕಾರ ಕ್ರಮಕೈಗೊಳ್ಳಬೇಕು ಎನ್ನುತ್ತಾರೆ.

loading...

LEAVE A REPLY

Please enter your comment!
Please enter your name here