ಪರಿಸರ ರಕ್ಷಣೆಯಿಂದ ದೇಶದ ಸಮೃದ್ಧಿ : ಜಾರಕಿಹೊಳಿ

0
25
loading...

ಗೋಕಾಕ 26: ಪರಿಸರ ಸಮತೋಲನ ರಕ್ಷಣೆಯಿಂದ ದೇಶ ಸಮೃದ್ಧಿಯಾಗುತ್ತದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಆವರು, ಶನಿವಾರ ತಮ್ಮ ಕಾರ್ಯಾಲಯದಲ್ಲಿ 2015-16ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ 685 ಫಲಾನುಭವಿಗಳಿಗೆ ಎಲ್‍ಪಿಜಿ ಗ್ಯಾಸ್ ಹಾಗೂ 78 ಫಲಾನುಭವಿಗಳಿಗೆ ಸೋಲಾರ ದೀಪಗಳನ್ನು ವಿತರಿಸಿ ಮಾತನಾಡಿದರು.
ಮಾನವನ ದಿನನಿತ್ಯದ ಬದುಕಿನಲ್ಲಿ ಪರಿಸರ ಮಹತ್ವದ ಪಾತ್ರ ವಹಿಸುತ್ತವೆ. ಅರಣ್ಯವನ್ನು ಬೆಳೆಸುವುದರಿಂದ ಮಳೆಯಾಗುತ್ತದೆ. ಅರಣ್ಯ ಉಳಿಸಿ-ಬೆಳೆಸುವುದರಿಂದ ಆರೋಗ್ಯದ ರಕ್ಷಣೆ ಜೊತೆಗೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವೆಂದರಲ್ಲದೇ ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ದೊರೆಯಬೇಕು. ನೀರು ಹಾಗೂ ವಿದ್ಯುತ್ ಕ್ಷೇತ್ರಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಗೋಕಾಕ ಮತಕ್ಷೇತ್ರದ ಅರ್ಹ ಎಸ್‍ಸಿ/ಎಸ್‍ಟಿ ಎಲ್ಲ ಫಲಾನುಭವಿಗಳಿಗೆ ಅರಣ್ಯ ಇಲಾಖೆಯಿಂದ ಎಲ್‍ಪಿಜಿ ಗ್ಯಾಸ್ ಹಾಗೂ ಸೋಲಾರ ದೀಪಗಳನ್ನು ವಿತರಿಸುವ ಭರವಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತಾಲೂಕಿನ ತವಗ ಗ್ರಾಮದ ಶ್ರೀ ಲಕ್ಷ್ಮೀ ಮಹಿಳಾ ಸ್ವ-ಸಹಾಯ ಸಂಘಕ್ಕೆ ಅರಣ್ಯ ಇಲಾಖೆಯಿಂದ 35 ಸಾವಿರ ರೂಗಳ ಸಹಾಯಧನ ಚೆಕ್‍ನ್ನು ಶಾಸಕ ರಮೇಶ ಜಾರಕಿಹೊಳಿ ವಿತರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಟಿ.ಆರ್.ಕಾಗಲ, ಮಡ್ಡೆಪ್ಪ ತೋಳಿನವರ, ನಗರ ಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ, ಸದಸ್ಯ ಎಸ್.ಎ.ಕೋತವಾಲ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿ.ಆರ್.ಸಂಕ್ರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ಪಾಟೀಲ, ಗೋಕಾಕ ವಲಯ ಅರಣ್ಯಾಧಿಕಾರಿ ಎಂ.ಕೆ. ಪಾತ್ರೂಟ, ಎಸ್.ಎಸ್. ತಳವಾರ, ಸಂದೀಪ ಕುಂಬಾರ, ಜಾಫರ ಮುಜಾವರ, ಹಣಮಂತ ಇಂಗಳಗಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here