ಪ್ರತಿಭಾಸಂಪನ್ನನಾದ ವಿದ್ವಾಂಸನಾಗಬೇಕು

0
22
loading...


ಧಾರವಾಡ 29: ಪೂರ್ವಜರ ತಪಶಕ್ತಿಯಿಂದ ಇಲ್ಲಿ ಸ್ಥಾಪಿಸಲ್ಪಟ್ಟ ಪಾಠಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸಮಾಜಕ್ಕೆ ಕೊಡುಗೆಯಾಗುವ ನಿಟ್ಟಿನಲ್ಲಿ ರೂಪಗೊಳ್ಳಬೇಕು ಎಂದು ಶತಾವಧಾನಿ ಡಾ. ಆರ್. ಗಣೇಶ ಹೇಳಿದರು.
ಶಂಕರಾಚಾರ್ಯ ಸಂಸ್ಕøತ ಪಾಠಶಾಲೆಯಲ್ಲಿ ಶ್ರೀ ಕೃಷ್ಣಾನಂದ ಮಹಾಸ್ವಾಮಿಗಳ 95 ನೇ ವರ್ಷದ ಸಮಾರಾಧನೆ ಮಹೋತ್ಸವದಲ್ಲಿ ಮಾತನಾಡಿ, ಸಾಮಾಜಿಕ ಅಭಿವೃದ್ಧಿ ನಿರಂತರವಾಗಿ ನಡೆಯಬೇಕು. ಪ್ರಕೃತಿ ಸಹಜವಾಗಿ ಬೆಳೆದ ಗಿಡ-ಮರಗಳು ಹೂವು, ಹಣ್ಣು, ನೆರಳು ಸೇರಿದಂತೆ ವಿವಿಧ ಸೌಕರ್ಯ ನೀಡುವಂತೆ ಪ್ರತಿಯೊಬ್ಬರು ಫಲಾಪೇಕ್ಷೆ ಇಲ್ಲದ ಕಾರ್ಮದಲ್ಲಿ ತೊಡಗಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಪಂ. ಮಧುಸೂಧನ ಶಾಸ್ತ್ರಿಗಳು ಮಾತನಾಡಿ, ಡಾ. ಆರ್. ಗಣೇಶ ಅವರು ಅದ್ಭುತ ಮೇದಾಶಕ್ತಿ, ಬುದ್ಧಿ ಕೌಶಲ್ಯ, ಕವಿತ್ವಶಕ್ತಿ, ವಾಕ್ಪಟುತ್ವ, ಚಾಕಚಕ್ಯತೆ, ಏಕಾಗ್ರತೆ ಹೊಂದಿರುವ ವ್ಯಕ್ತಿ. ಅವಧಾನ ಕಲೆ ಪ್ರದರ್ಶನಕ್ಕೆ ಇವೆಲ್ಲವೂ ಅತ್ಯವಶ್ಯ. ಬಹುಮುಖ ಪ್ರತಿಭಾಸಂಪನ್ನನಾದ ವಿದ್ವಾಂಸನು ಮಾತ್ರ ಈ ಅವಧಾನ ಕಲೆಯನ್ನು ಪ್ರದರ್ಶಿಸಲು ಸಾಧ್ಯ ಎಂದರು.
ರಾಜೇಶ್ವರ ಶಾಸ್ತ್ರಿ ನ್ಯಾಯ ಚೂಡಾಮಣಿಗಳು ಪ್ರಕಾಶ ಮುಳಗುಂದ, ನಾಗೇಶ ಶಾಸ್ತ್ರಿ, ಮಧೂಸೂದನ ಶಾಸ್ತ್ರಿ, ಆರ್.ವಿ. ಕುಲಕರ್ಣಿ ಶಂಕರ ಕುಲಕರ್ಣಿ ಉಪಸ್ಥಿತರಿದ್ದರು. ಶತಾವಧಾನಿ ಡಾ. ಆರ್. ಗಣೇಶ ಅವರಿಗೆ ದಿ. ಪಂ. ಭಾಲಚಂದ್ರಶಾಸ್ತ್ರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

loading...

LEAVE A REPLY

Please enter your comment!
Please enter your name here