ಬಸವಣ್ಣನನ್ನು ಬಂಡಾಯಕ್ಕೆ ಬಳಸಿಕೊಳ್ಳಿ : ಬರಗೂರ ರಾಮಚಂದ್ರಪ್ಪ

0
66
loading...

ಅಥಣಿ 07: ಅಣ್ಣ ಬಸವಣ್ಣ ಕ್ರಾಂತಿಕಾರಿ ಪುರುಷ, ಅವರನ್ನು ಹಾಡು ಭಜನೆಗಾಗಿ ಬಳಸಿಕೊಳ್ಳದೇ, ಬಂಡಾಯಕ್ಕೆ ಸಮಾಜದ ಪರಿವರ್ತನೆಗೆ ಬಳಸಿಕೊಳ್ಳಬೇಕು ಎಂದು ಖ್ಯಾತ ಬಂಡಾಯ ಸಾಹಿತಿ ಬರಗೂರ ರಾಮಚಂದ್ರಪ್ಪ ಕರೆ ನೀಡಿದರು.
ಇಲ್ಲಿಯ ಗಚ್ಚಿನಮಠದ ಶಾಲಾ ಆವಾರಣದಲ್ಲಿ ಮಹಾಶಿವರಾತ್ರಿ ಅಮಗವಾಗಿ ನಡೆಯುತ್ತಿರು ಶರಣ ಸಂಸ್ಕøತಿ ಉತ್ಸವಕ್ಕೆ ಚಿತ್ರದುರ್ಗದ ಶ್ರೀ ಮುರುಘಾ ಶರಣರ ಶರಣಶ್ರೀ ಕೃತಿ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿ ಮೇಲಿನಂತೆ ಮಾತನಾಡುತ್ತ, 12 ನೇ ಶತಮಾನದಲ್ಲಿ ಶರಣರು, ಸಾಮಾಜಿಕ,ಆರ್ಥಿಕ ಸಮಾನತೆಗಾಗಿ ಹೋರಾಡಿದರು. ಮಾದರ ಚನ್ನಯ್ಯ , ಡೋಹರ ಕಕ್ಕಯ್ಯ, ಮೊದಲಾದವರು ವಚನಗಳ ಮೂಲಕ ಕ್ರಾಂತಿಯನ್ನು ಹುಟ್ಟುಹಾಕಿದರು. ಬಸವಮಾರ್ಗದಲ್ಲಿ ನಡೆಯಬೇಕೆನ್ನುವವರು, ಬಸವಣ್ಣನವರನ್ನು ಭಜನೆಗಳಿಗೆ ಮಾತ್ರ ಬಳಸಿಕೊಳ್ಳದೇ ಬಂಡಾಯಕ್ಕಾಗಿ ಬಳಸಿಕೊಂಡಲ್ಲಿ ಸಾರ್ಥಕತೆ ಇದೆ ಎಂದರು.
ಶರಣ ಸಂಸ್ಕøತಿ ಎಂಬುದು ಸಮಾನತೆಯ ಸಂಸ್ಕøತಿ, ಎಲ್ಲರಲ್ಲಿ ಆತ್ಮಸ್ಥೈರ್ಯ ತುಂಬುವದರೊಂದಿಗೆ, ಆತ್ಮವಿಮರ್ಶೆಗೆ ಹಚ್ಚಿ, ಮೇಲು, ಕೀಳು ಎನ್ನುವ ಭಾವ ಕಳೆಯುವಲ್ಲಿ ಯಶಸ್ವಿಯಾಗಿತ್ತು. ಧಾರ್ಮಿಕ ಸ್ವಾತಂತ್ರ್ಯ ಚಳವಳಿಯನ್ನು ಪ್ರಾರಂಭಿಸಿದರು. ಸಂಸ್ಕøತಿ ಎಂಬುದು ಚಲನಶೀಲವಾಗಿರಬೇಕು. ಇಂದಿನ ಶರಣರು ಅಂದಿನಂತೆ ಸಾಮಾಜಿಕ ಅಸಮಾನತೆಯನ್ನು ವಿರೋಧಿಸಿ ಶರಣ ಸಂಸ್ಕøತಿಯ ಮೂಲಕ ಹೋರಾಟ ನಡೆಸಬೇಕು . ಇದೇ ನಿಜವಾದ ಶರಣ ಸಂಸ್ಕøತಿ ಎಂದರು. ಶಿವಮೂರ್ತಿ ಮುರುಘಾ ಶರಣರು ಕೂಡ ಇಂದು ಬಸವಣ್ಣನವರ ಮಾರ್ಗದಲ್ಲಿಯೇ ಸಾಗಿದ್ದಾರೆ. ಸಾಮಾಜಿಕ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವುದರಿಂದ ಅವರ ಕಾರ್ಯಕ್ರಮಗಳು ಆಂದೋಲನಗಳಾಗಿ ಮಾರ್ಪಟ್ಟಿವೆ ಎಂದರು.
ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಸಾನಿಧ್ಯವನ್ನು ವಹಿಸಿದ್ದರು. ನಾಲವಾರದ ಕೊರಿ ಸಿದ್ಧೇಶ್ವರ ಮಠದ ರ್ಶರೀ ತೋಟೇಂದ್ರ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮಿಗಳು, ಸಾನಿಧ್ಯ ವಹಿಸಿದ್ದರು. ನೇತೃತ್ವವನ್ನು ಶಿವಬಸವ ಸ್ವಾಮೀಜಿ ವಹಿಸಿದ್ದರು. ಶಾಸಕರಾದ ಲಕ್ಷ್ಮಣ ಸವದಿ, ಮಹಾಂತೇಶ ಕವಟಗಿಮಠ, ಪುರಸಭೆ ಅಧ್ಯಕ್ಷ ದಿಲೀಪ ಲೋನಾರಿ, ಡಾ. ವಿ.ಎಸ್. ಮಾಳಿ, ಸಾಹಿತಿ ಬೈಲಮಂಗಲ ರಾಮೇಗೌಡ, ದತ್ತಾ ವಾಸ್ಟರ ಇದ್ದರು. ಪ್ರಕಾಶ ಮಹಾಜನ ಸ್ವಾಗತಿಸಿದರು. ಶರಣಬಸಪ್ಪ ಮಿಠಾರೆ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here