ಮಾರ್ಚ 4 ರಿಂದ ಭೀಮಲಿಂಗೇಶ್ವರ ಅಷ್ಟಬಂಧ ಕಾರ್ಯಕ್ರಮ

0
35
loading...


ಸಿದ್ದಾಪುರ : ತಾಲೂಕಿನ ಸಮೀಪದ ಕೋಗಾರ ಶ್ರೀ ಕ್ಷೇತ್ರ ಭೀಮೇಶ್ವರದ ಭೀಮಲಿಂಗೇಶ್ವರ ದೇವರ ಅಷ್ಟಬಂಧ ಪುನಃ ಪ್ರತಿಷ್ಠಾಪನಾ ಹಾಗೂ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಮಾರ್ಚ 4 ಶುಕ್ರವಾರದಿಂದ ಮಾರ್ಚ 10 ಗುರವಾರದ ವರೆಗೆ ನಡೆಸಲು ನಿಶ್ಚಯಿಸಲಾಗಿದೆ ಎಂದು ಭೀಮಲಿಂಗೇಶ್ವರ ಸೇವಾ ಸಮಿತಿ ಸದಸ್ಯ ಎನ್.ಎನ್ ರಮಾನಂದ ತಿಳಿಸಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕಳೆದ 14 ವರ್ಷಗಳ ಹಿಂದೆ ಅಷ್ಠಬಂಧವಾಗಿತ್ತು ಆಗಮ ಶಾಸ್ತ್ರದ ಪ್ರಕಾರ ಅಷ್ಠಬಂಧ ಕಾರ್ಯಕ್ರಮ ಮಾಡಲು ಸಂಕಲ್ಪ ಮಾಡಲಾಗಿದೆ.ಪೌರಾಣಿಕ ಹಿನ್ನೆಲೆಯುಳ್ಳ ಭೀಮಸೇನನಿಂದ ಸ್ಥಾಪಿಸಿದನೆಂಬ ಪ್ರತೀತಿಯುಳ್ಳ ಈ ದೇವಾಲಯವು ನಿಸರ್ಗದ ಮಡಿಲಲ್ಲಿದ್ದು ಪ್ರವಾಸಿ ಸ್ಥಾನವಾಗಲು ಪ್ರಶಸ್ತವಾಗಿದೆ. ಪುರಾಣದ ಪ್ರಕಾರ ಅರ್ಜುನನ ಸರಳಿನಿಂದ ಉದ್ಬವಗೊಂಡ ಸರಳೆ ಹೊಳೆಯಿಂದ ನಿರ್ಮಿತವಾದ ಭೀಮೆಶ್ವರ ಫಾಲ್ಸ್ ರಮಣೀಯವಾಗಿದೆ.ಕ್ಷೇತ್ರಕ್ಕೆ ಆಗಮಿಸುವ ಜನರು ಹೆಚ್ಚಾದಂತೆ ನೀರು ಹೆಚ್ಚಾಗುವದೆಂದು ಹೇಳಲಾಗುತ್ತದೆ.
ಈ ದೇವಾಲಯಕ್ಕೆ ಯಾವುದೇ ಆದಾಯ ಮೂಲವಿಲ್ಲ.ಭಕ್ತರ ನೆರವಿನಿಂದ ನಡೆಯುತ್ತಿರುವ ಈ ದೇವಾಲಯಕ್ಕೆ ಯಾವುದೇ ಸೀಮೆಯ ಗಡಿಭಾಗದ ನಿರ್ಭಂಧವಿಲ್ಲ .ದೇವಾಲಯಕ್ಕೆ ಯಾವುದೇ ಆಸ್ತಿಯಿಲ್ಲ ಎಲ್ಲವೂ ಭಕ್ತರಿಂದ ನಡೆಯುವಂತ್ತದ್ದಾಗಿದೆ.ಸಾಗರ ಮತ್ತು ಸಿದ್ದಾಪುರದಿಂದ 65 ಕಿ.ಮೀ ದೂರವಿರುವ ಈ ಕ್ಷೇತ್ರದಲ್ಲಿ ಭಕ್ರರಿಗೆ ಅನುಕೂಲವಾಗುವ ಸಭಾಭವನ ದೂರವಾಣಿ ಸೌಲಭ್ಯ,ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಭೀಮಲಿಂಗೇಶ್ವರ ಸೇವಾ ಸಮಿತಿ ಸದಸ್ಯ ಎಸ್.ಆರ್ ಲಕ್ಮೀನಾರಾಯಣ ,ಸತೀಶ ಹೆಗಡೆ ಕಿಲಾರ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here