ಮಾರ್ಚ 5 ರಿಂದ ಅಟೋಗಳಿಗೆ ಮೀಟರ್ ಕಡ್ಡಾಯ

0
21
loading...

ಇಲ್ಲವಾದಲ್ಲಿ ಅಟೋಗಳ ಪರಮೀಟ ರದ್ದು ಡಿಸಿ ಖಡಕ ಎಚ್ಚರಿಕೆ
ಬೆಳಗಾವಿ 03: ಅಟೋ ಮೀಟರ ಕಡ್ಡಾಯಗೊಳಿಸಲು ಜಿಲ್ಲಾಡಳಿತ ಆದೇಶ ಹೊರಡಿಸುತ್ತದೆ. ಆದರೆ ಸಂಬಂಧÀಪಟ್ಟ ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿಲ್ಲ. ಈ ಆದೇಶ ಸಾರ್ವಜನಿಕ ವಲಯಗಳಲ್ಲಿ ಹಾಸ್ಯಾಸ್ಪದವಾಗಿ ಮಾತನಾಡುತ್ತಿರುವುದು ಆಡಳಿತಕ್ಕೆ ಮುಜುಗರುಂಟಾಗುತ್ತಿದೆ. ಆದ್ದರಿಂದ ಯಾರು ಮೀಟರ ಚಾಲನೆ ಮಾಡದೇ ಹಾಗೆಯೇ ಓಡಿಸುತ್ತಿರುವ ಅಟೋಗಳನ್ನು ವಶ ಪಡಿಸಿಕೊಂಡು ಅವರ ಪರಮೀಟ ರದ್ದುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎನ್.ಜಯರಾಮ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯ ಸಭಾ ಭವನದಲ್ಲಿ ಅಟೋ ಮೀಟರ ಅಳವಡಿಕೆ ಕುರಿತು ನಡೆದ ಪೂರ್ವಭಾವಿ ಸಭೆÉಯಲ್ಲಿ ಮಾತನಾಡಿ. ನಗರದ ಅಟೋ ಚಾಲಕರ ಬಹುತೇಕ ಬೇಡಿಕೆಗಳನ್ನು ಜಿಲ್ಲಾಡಳಿತ ಈಡೇರಿಸಿದ್ದರೂ ಮೀಟರ ಅಳವಡಿಸಿ ಚಾಲನೆ ಮಾಡುತ್ತಿಲ್ಲ. ಕಾರಣ ಇದೇ 5 ರಂದು ಕಡ್ಡಾಯವಾಗಿ ಎಲ್ಲ ಅಟೋಗಳಿಗೆ ಮೀಟರ ಅಳವಡಿಸಿ ಚಾಲಾವಣೆ ಮಾಡಬೇಕು. ಇಲ್ಲವಾದಲ್ಲಿ ಅಂತಹ ಅಟೋಗಳ ಪರಮೀಟ ರದ್ದು ಪಡಿಸಲಾಗುವುದು ಎಂದು ಖಡಕ ಎಚ್ಚರಿಕೆ ನೀಡಿದರು.
ಅಟೋ ಚಾಲಕರು ಹೆಚ್ಚಿಗೆ ಹಣ ವಸೂಲಿ ಮಾಡುತ್ತಿರುವುದನ್ನು ಗಮನಕ್ಕೆ ಬಂದರೆ ಸಾರ್ವಜನಿಕರು ತಕ್ಷಣ 100ಗೆ ಕಾಲ ಮಾಡಿ ದೂರು ಸಲ್ಲಿಸಬೇಕು. ಆವಾಗ ಪೆÇಲೀಸ ಅಧಿಕಾರಿಗಳು ಅಂತಹ ಅಟೋ ಚಾಲಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತಾರೆ. ಅಟೋ ಚಾಲಕರು ಸಾರ್ವಜನಿಕರ ಹಿತ ದೃಷ್ಠಿಯಿಂದ ಮೀಟರ ಚಲಾವಣೆ ಮಾಡಬೇಕು. ಸಾರ್ವಜನಿಕರಿಗೆ ಮೋಸ ಮಾಡಬಾರದು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂಧಿಸಿ ಕಾರ್ಯನಿರ್ವಹಣೆ ಮಾಡಬೇಕು ಎಂದು ಸಲಹೆ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತ ಜಿ.ಪ್ರಭು ಮಾತನಾಡಿ, ಮಹಾನಗರ ಪಾಲಿಕೆಯ ಜಾಗದಲ್ಲಿ ಪೆÇಲೀಸರು ವಶಪಡಿಸಿಕೊಂಡ ಅಟೋಗಳನ್ನು ಇಡಲು ಎಲ್ಲ ಸಹಕಾರ ನೀಡಲಾಗುವುದು. ಬಸ ನಿಲ್ದಾಣ, ರೈಲ್ವೇ ನಿಲ್ದಾಣ, ಚನ್ನಮ್ಮ ವೃತ್ತ, ಆರಟಿಓ ವೃತ್ತ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಪಾಲಿಕೆ ವತಿಯಿಂದ ಅಟೋಮೀಟರ ಆರಂಭಿಸುವ ಕುರಿತು ಜಾಗೃತಿ ಮೂಡಿಸಲು ನಾಮಫಲಕ ಅಳವಡಿಸಲಾಗುವುದು ಎಂದರು.
ಡಿಸಿಪಿ ಅನುಪಮ ಅಗರವಾಲ ಮಾತನಾಡಿ, ಕೇವಲ ಪೆÇಲೀಸ ಇಲಾಖೆಗಳಿಂದ ಮಾತ್ರ ಈ ಕಾರ್ಯಾಚರಣೆ ಸಾಲದು. ಇದರಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಭಾಗಿಯಾಗಬೇಕು. ಈ ಕಾರ್ಯಾಚರಣೆ ಪ್ರಾರಂಭವಾದರೇ ನಿಲ್ಲಬಾರದು. ಯಾವ ಅಟೋ ಚಾಲಕರು ನಿಯಮಾನುಸಾರ ಅಟೋಮೀಟರ ಅಳವಡಿಕೆ ಮಾಡಿಕೊಳ್ಳಬೇಕು ಇಲ್ಲವಾದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದರ ಜೊತೆಗೆ ಅವರ ಅಟೋ ಪರಮಿಟ ರದ್ದು ಮಾಡಬೇಕು ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ, ಡಿಸಿಪಿ ಅಮರನಾಥ ರೆಡ್ಡಿ, ಆರಟಿಓ ಅಧಿಕಾರಿ ಬಿ.ಕೆ.ಹೇಮಾದ್ರಿ ಹಾಗೂ ಸಂಚಾರ ವಿಭಾಗದ ಪೆÇಲೀಸ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
=========ಬಾಕ್ಸ=======
ಅಟೋ ಮೀಟರ ಕುರಿತು ಜಿಲ್ಲಾಡಳಿತ ಆದೇಶ ಹೊರಡಿಸುವುದು ಅಟೋ ಮಾಲೀಕರಿಗೆ ಹಾಗೂ ಸಾರ್ವಜನಿಕರಿಗೆ ಜೋಕ ಆಗಿಬಿಟ್ಟಿದೆ. ಆದರೆ ಈ ಸಲ ಜೋಕ ಮಾಡದೇ ಮಾ.5 ರಿಂದ ನಗರದಲ್ಲಿ ಕಡ್ಡಾಯವಾಗಿ ಅಟೋಮೀಟರ ಜಾರಿಗೆ ತರಲಾಗುವುದು. ಈ ಸಲ ಶೇ.100ಕ್ಕೆ 100 ರಷ್ಟು ಕಡ್ಡಾಯವಾಗಿ ಅಟೋ ಮೀಟರ ಅನುಷ್ಠಾನಗೊಳಿಸಲಾಗುವುದು.
ಎನ್.ಜಯರಾಮ
ಜಿಲ್ಲಾಧಿಕಾರಿ

ಆರಟಿಓ ಕಚೇರಿಯಿಂದ ಅಟೋ ರಿಕ್ಷಾಗಳ ಮಾಹಿತಿ
• ನೊಂದಣಿಯಾಗಿರುವ ಅಟೋಗಳ ಸಂಖ್ಯೆ-6825
• ಕಚೇರಿಯಿಂದ ನೀಡಿರುವ ಅಟೋರಿಕ್ಷಾ ರಹದಾರಿಗಳ ಸಂಖ್ಯೆ-6273
• ರಹದಾರಿ ಮಾನ್ಯತೆ ಹೊಂದಿರುವ ಸಂಖ್ಯೆ-4516
• ರಹದಾರಿ ಮಾನ್ಯತೆ ಮುಗಿದಿರುವ ಸಂಖ್ಯೆ-998
• ಬೇರೆ ಪ್ರದೇಶಕ್ಕೆ ವಲಸೆ ಹೋಗಿರುವ ಸಂಖ್ಯೆ-759

loading...

LEAVE A REPLY

Please enter your comment!
Please enter your name here