ಮಾರ್ಚ 6ಕ್ಕೆ ಲಯನ್ಸ್ ಪ್ರಾದೇಶಿಕ ಸಮಾವೇಶ

0
23
loading...


ಸಿದ್ದಾಪುರ : ಲಯನ್ಸ್ ಪ್ರಾದೇಶಿಕ ಸಮಾವೇಶವು ಪಟ್ಟಣದ ಬಾಲಭವನದಲ್ಲಿ ಮಾರ್ಚ 6ಕ್ಕೆ ನಡೆಯಲಿದೆ ಎಂದು ನ್ಯಾಯವಾದಿ ಲಯನ್ ಆರ್.ಎಂ.ಹೆಗಡೆ ಬಾಳೇಸರ ತಿಳಿಸಿದ್ದಾರೆ.
ಪಟ್ಟಣದ ಬಾಲಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಲಯನ್ಸ್ ಸಂಸ್ಥೆಯ ಪ್ರಾದೇಶಿಕ ಅಧ್ಯಕ್ಷ ಎಂ.ಎಸ್ ಜೋಷಿಯವರ ನೇತೃತ್ವದಲ್ಲಿ ಸಮಾವೇಶ ನಡೆಯಲಿದ್ದು ಮುಖ್ಯ ಅಥಿತಿಗಳಾಗಿ ಸಂಕಲ್ಪ ಸೇವಾ ಟ್ರಸ್ಟ್‍ನ ಅಧ್ಯಕ್ಷ ಪ್ರಮೋದ ಹೆಗಡೆ ಯಲ್ಲಾಪುರ,ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ರವಿ ಹೆಗಡೆ ಹೂವಿನಮನೆ ಹಾಗೂ ರವಿ ನಾಡಿಗೇರ್,ಮಾಧವ ಶೆಟ್ಟಿ, ಗಣಪತಿ ನಾಯಕ ಮುಂತಾದವರು ಉಪಸ್ಥಿತರಿರಲಿದ್ದಾರೆ ಎಂದರು.
ಸಂಜೆ 6.30 ರಿಂದ ಅನಂತ ಯಕ್ಷಕಲಾ ಪ್ರತಿಷ್ಠಾನ (ರಿ) ಸಿದ್ದಾಪುರ ಇವರಿಂದ ಗಿಂಡಿಮನೆ ಮೃತ್ಯುಂಜಯ ವಿರಚಿತ ದಕ್ಷಚಂದ್ರ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ,ಶಂಕರ ಭಾಗವತ ಯಲ್ಲಾಪುರ,ಲಕ್ಮೀನಾರಾಯಣ ಸಂಪ ನಿರ್ವಹಿಸಲಿದ್ದಾರೆ. ಮುಮ್ಮೇಳದಲ್ಲಿ ಸರ್ವಶ್ರೀ ರಾಮಚಂದ್ರ ಹೆಗಡೆ ಕೊಂಡದಕುಳಿ, ಸರ್ವಶ್ರೀ ಗಣಪತಿ ಹೆಗಡೆ ತೋಟಿಮನೆ,ಮೂರೂರು ರಮೇಶ ಭಂಡಾರಿ,ಸುಬ್ರಹ್ಮಣ್ಯ ಹೆಗಡೆ ಮೂರೂರು,ಶ್ರೀಧರ ಹೆಗಡೆ ಚಪ್ಪರಮನೆ, ಮಹಾಬಲೇಶ್ವರ ಭಟ್ಟ ಇಟಗಿ,ಮಹಾಬಲೇಶ್ವರ ಗೌಡ ಹಾರೇಕೊಪ್ಪ,ಪ್ರಭಾಕರ ಹೆಗಡೆ ಹಣಜೀಬೈಲ್ ,ಅವಿನಾಶ ಕೊಪ್ಪ,ಗಣಪತಿ ಕಲ್ಮನೆ ಮುಂತಾದವರು ನಿರ್ವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಲಯನ್ಸ್ ಪ್ರಾದೇಶಿಕ ಅಧ್ಯಕ್ಷ ಎಂ.ಎಸ್ ಜೋಷಿ ,ಸಿದ್ದಾಪುರ ಲಯನ್ಸ್ ಅಧ್ಯಕ್ಷ ಸತೀಶ ಗೌಡರ್,ಸಿದ್ದಾಪುರ ಲಯನ್ಸ್ ಕಾರ್ಯದರ್ಶಿ ಜಿ.ಜಿ ಹೆಗಡೆ ಬಾಳಗೋಡ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here