ಮಾ.6 ರಾಜ್ಯಮಟ್ಟದ ವಿಚಾರ ಸಂಕಿರಣ,ಸಂವಾದ

0
25
loading...


ಸಿದ್ದಾಪುರ : ಪ್ರಯೋಗ ಸ್ವಯಂ ಸೇವಾ ಸಂಸ್ಥೆ(ರಿ) ಸಿದ್ದಾಪುರ ವತಿಯಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆಬೆಂಗಳೂರು
ಸಹಕಾರದಲ್ಲಿ ಸಂಸ್ಕøತಿ ಸಂಪದ ಸಿದ್ದಾಪುರ ಸ್ಥಾನಿಕ ನೆರವಿನಲ್ಲಿ ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ಕಾಡು-ಕಥೆ ಸಾಹಿತ್ಯದ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮ ಮಾರ್ಚ 6ಕ್ಕೆ ಪಟ್ಟಣದ ಶಂಕರಮಠದ ಪಕ್ಕದ ಅರಣ್ಯ ಇಲಾಖೆಯ ಉದ್ಯಾನವನದಲ್ಲಿ ನಡೆಯಲಿದೆ.
ಬೆಳಿಗ್ಗೆ 10.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮನ್ನು ಶಿರಸಿ ಉಪ ವಿಭಾಗಾಧಿಕಾರಿ ನಾಗೇಂದ್ರ ಹೊನ್ನಾಳಿ ಉದ್ಘಾಟಿಸಲಿದ್ದಾರೆ,ಅಧ್ಯಕ್ಷತೆಯನ್ನು ಸಿದ್ದಾಪುರ ಶಂಕರಮಠದ ಧರ್ಮಾಧಿಕಾರಿಗಳಾದ ವಿಜಯ ಹೆಗಡೆ ದೊಡ್ಮನೆ ವಹಿಸಲಿದ್ದು ಅತಿಥಿಗಳಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ ಹೆಗಡೆ,ಗೌರವ ಉಪಸ್ಥಿತಿಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಾರವಾರದ ಸಹಾಯಕ ನಿರ್ದೇಶಕರಾದ ಹಿರೇಗೌಡರ್ ಉಪಸ್ಥಿತರಿರಲಿದ್ದಾರೆ.
ಬೆಳಿಗ್ಗೆ 11ಕ್ಕೆ ಮೊದಲ ಸಾಹಿತ್ಯಗೋಷ್ಠಿ ಪ್ರಾರಂಭವಾಗಲಿದ್ದು ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ಸಾಹಿತ್ಯದ ಕುರಿತು ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಶ್ರೀಕಂಠ ಕೂಡಿಗೆ ವಿಷಯ ಮಂಡನೆ ಮಾಡಲಿದ್ದಾರೆ.ಮಧ್ಯಾಹ್ನ 2.30 ರಿಂದ ಎರಡನೇ ಸಾಹಿತ್ಯಗೋಷ್ಠಿ ಆರಂಭಗೊಳ್ಳಲಿದ್ದು ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ಸಾಹಿತ್ಯದಲ್ಲಿ ಪರಿಸರ ವಿಷಯದ ಕುರಿತು ಪರಿಸರವಾದಿಗಳು ಹಾಗೂ ಬರಹಗಾರರಾದ ಪಾಂಡುರಂಗ ಹೆಗಡೆ ಶಿರಸಿ ವಿಷಯ ಮಂಡನೆ ಮಾಡಲಿದ್ದಾರೆ.ಗೋಷ್ಠಿಗಳ ಅಧ್ಯಕ್ಷತೆಯನ್ನು ಸಾಹಿತಿಗಳಾದ ಡಾ.ಶ್ರೀಧರ ಬಳಗಾರ ವಹಿಸಲಿದ್ದಾರೆ.
ಸಂವಾದದಲ್ಲಿ ಆರ್.ಡಿ ಹೆಗಡೆ ಶಿರಸಿ,ಅಶೋಕ ಹಾಸ್ಯಗಾರ ಶಿರಸಿ,ಪ್ರೊ ದಿನೇಶ ಸಾಗರ,ನಾಗರಾಜ ಹರಪನಹಳ್ಳಿ,ಸುಬ್ರಾಯ ಮತ್ತಿಹಳ್ಳಿ,ಪ್ರೊ ಎಂ.ಕೆ ನಾಯ್ಕ,ಜಿ.ಕೆ ಭಟ್ ಕಶಿಗೆ,ರವೀಂದ್ರ ಭಟ್ ಬಳಗುಳಿ,ಎ ರವೀಂದ್ರ ನಾಯ್ಕ,ಗಣೇಶ ಭಟ್ ಹೊಸೂರ,ನಾಗರಾಜ ಮಾಳ್ಕೋಡ, ಕನ್ನೇಶ ಕೋಲಶಿರ್ಸಿ,ಗೋಪಾಲ ನಾಯ್ಕ ಭಾಶಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ.

loading...

LEAVE A REPLY

Please enter your comment!
Please enter your name here