ರಾಜ್ಯ ಸರ್ಕಾರದ ತಾಲಿಬಾನೀಕರಣ ಸಂಸ್ಕøತಿ ಕಾನೂನು ಬಾಹಿರವಾಗಿದೆ: ಮುತಾಲಿಕ್

0
56
loading...


ಶಿರಸಿ : ಪ್ರವೇಶ ನಿರ್ಭಂದ ಮಾಡುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಗಲಭೆಗಳಾದರೆ ಅದಕ್ಕೆ ಅಧಿಕಾರ ದರ್ಪ ತೋರುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ನೇರ ಹೊಣೆಯಾಗಲಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಖಾರವಾಗಿ ನುಡಿದರು.
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಪ್ರವೇಶ ನಿಶೇಧ ಹೇರಿ ನೊಟೀಸ್ ನೀಡಿದ ಬೆನ್ನಲ್ಲಿ ಶಿರಸಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಹಿಂದೂ ಸಂಘಟನೆಗಳನ್ನು ವ್ಯವಸ್ಥಿತವಾಗಿ ತಡೆಯುವ ಪ್ರಯತ್ನ ಮಾಡುತ್ತಿದೆ. ಇದೇ ಕಾರಣಕ್ಕೆ ಪ್ರಚೋದನಾಕಾರಿ ಹೇಳಿಕೆ ನೀಡುತ್ತಾರೆಂದು ಪ್ರವೇಶ ನಿಶೇಧದ ಹೆಸರಿನಲ್ಲಿ ಸಂಘಟನೆಗಳ ಪ್ರಮುಖರ ಬಾಯ್ಮುಚ್ಚಿಸುವ ಕುತಂತ್ರ ನಡೆಯುತ್ತಿರುವುದು ಖಂಡನೀಯ ಎಂದರು. ನಮಗೆ ವೈಚಾರಿಕ ಸ್ವಾತಂತ್ರ್ಯವಿದೆ. ಜೊತೆಗೆ, ಸಂವಿಧಾನವು ಅಭಿವ್ಯಕ್ತಿ ಹಾಗೂ ವಾಕ್ ಸ್ವಾತಂತ್ರ್ಯ ಕೊಟ್ಟಿದೆ. ಆದರೆ ಅಧಿಕಾರದ ದರ್ಪದಿಂದ ನಮ್ಮನ್ನು ಕಟ್ಟಿಹಾಕುವ ಕಾರ್ಯವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಈಗಾಗಲೇ ಮೈಸೂರು, ಮಂಡ್ಯಗಳಿಗೆ ಪ್ರವೇಶ ನಿರ್ಭಂಧಿಸಿರುವ ಸರ್ಕಾರ ಅಭಿಪ್ರಾಯ ಸ್ವಾತಂತ್ರ್ಯಕ್ಕೂ ಕಡಿವಾಣ ಹಾಕುತ್ತಿದೆ ಎಂದರು. ಮುಸ್ಲಿಂ ತುಷ್ಠೀಕರಣಕ್ಕಾಗಿ ದಮನಕಾರಿ ಹಾಗೂ ಅಧಿಕಾರದ ದರ್ಪವನ್ನು ತೋರಿಸಿದ ಪರಿಣಾಮ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಕಸದ ತೊಟ್ಟಿಗೆ ಹೋಗಿದೆ. ಇದೀಗ ರಾಜ್ಯ ಸರ್ಕಾರವು ಅದೇ ಮಾರ್ಗದಲ್ಲಿ ಸಾಗುತ್ತಿದೆ ಎಂದ ಅವರು, ರಾಜ್ಯ ಸರ್ಕಾರದ ತಾಲಿಬಾನೀಕರಣ ಸಂಸ್ಕøತಿ ಕಾನೂನು ಬಾಹಿರವಾಗಿದೆ. ಕಾಂಗ್ರೆಸ್‍ನ ಇಂತಹ ಗೂಂಡಾಗಿರಿ ವರ್ತನೆಯನ್ನು ನಾನು ಒಪ್ಪುವುದಿಲ್ಲ. ಸರ್ಕಾರದ ಇಂತಹ ವರ್ತನೆ ಮರುಕಳಿಸುತ್ತಿದ್ದರೆ ಪ್ರವೇಶ ನಿಶೇಧ ಮಾಡಿರುವ ಪ್ರದೇಶದಲ್ಲಿ ಮುಂದಿನ ದಿನಗಳಲ್ಲಿ ಗಲಭೆಯಾದರೆ ಅದಕ್ಕೆ ಸರ್ಕಾರವು ನೇರವಾಗಿ ಕಾರಣವಾಗಲಿದೆ ಎಂದರು.
ಹಿಂದೂಗಳ ಪರವಾಗಿ ಮಾತನಾಡುವುದು, ಅನ್ಯಾಯವಾದರೆ ಪ್ರತಿಭಟಿಸುವುದನ್ನು ಕಾಂಗ್ರೆಸ್ ಸರ್ಕಾರ ಪ್ರಚೋದನೆ ಎಂದು ಬಿಂಬಿಸಲು ಹೊರಟಿದೆ ಎಂದ ಮುತಾಲಿಕ್, ಕಳೆದ 6 ತಿಂಗಳಲ್ಲಿ 7 ಜಿಲ್ಲೆಗಳಲ್ಲಿ ನನ್ನ ಪ್ರವೇಶಕ್ಕೆ ನಿಶೇಧ ಹೇರಲಾಗಿದೆ. ಈಗಾಗಲೇ 92ರಷ್ಟು ಪ್ರಕರಣ ನನ್ನ ವಿರುದ್ಧ ದಾಖಲಾಗಿ ಅದರಲ್ಲಿ ಇದೀಗ 13 ಪ್ರಕರಣಗಳು ಮಾತ್ರ ಉಳಿದಿವೆ. ಉಳಿದವು ನಿರ್ದೋಷಿ ಎಂದು ಖುಲಾಸೆಯಾಗಿದೆ. ಆದರೂ ಕೂಡ ಸರ್ಕಾರದಿಂದ ಬೋಗಸ್ ಪ್ರಕರಣ ದಾಖಲಿಸಲಾಗುತ್ತಿದೆ. ಹಳೆಯ ಪ್ರಕರಣಗಳನ್ನು ಪರಿಶೀಲಿಸಿ ಸಾಗರ ಪ್ರವೇಶ ನಿರ್ಭಂಧ ನೊಟೀಸ್ ನೀಡಲಾಗಿದೆ. ಒಂದು ವೇಳೆ ಪ್ರಕರಣ ದಾಖಲಾದ ಕಡೆಗಳಲ್ಲಿ ಪ್ರಚೋದನಾತ್ಮಕವಾಗಿ ಮಾತನಾಡಿದ್ದರೆ ಶಿಕ್ಷೆಯಾಗಬೇಕಿತ್ತಲ್ಲವೇ? ಎಂದು ಪ್ರಶ್ನಿಸಿದರು.
ಪ್ರಚೋದನೆ ಹೆಸರಿನಲ್ಲಿ ರಾಜ್ಯ ಸರ್ಕಾರವು ಬೋಗಸ್ ಪ್ರಕರಣ ದಾಖಲಿಸುತ್ತಿರುವ ಹಿನ್ನೆಲೆಯಲ್ಲಿ ನನ್ನ ಧ್ವನಿ ಹಾಗೂ ಸಂಘಟನೆಯನ್ನು ತಡೆಯುತ್ತಿರುವ ಸರ್ಕಾರಕ್ಕೆ ಎಚ್ಚರಿಕೆಯ ತಿಳುವಳಿಕೆ ನೀಡುವಂತೆ ರಾಜ್ಯಪಾಲರು ಹಾಗೂ ಕೇಂದ್ರದ ಗೃಹ ಸಚಿವರಿಗೆ ವಿನಂತಿಸುವುದಾಗಿ ಹೇಳಿದರು. ಜೊತೆಗೆ, ಸಾಂವಿಧಾನಿಕ ಹಕ್ಕಿಗೆ ಸರ್ಕಾರ ಚ್ಯುತಿ ತರುತ್ತಿರುವ ಸರ್ಕಾರದ ನೀತಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವುದಾಗಿಯೂ ತಿಳಿಸಿದರು.
ಈ ವೇಳೆ ಸಂಘಟನೆಯ ರಾಘವೇಂದ್ರ ಕಂಬ್ಳಿ, ಶಂಕರ ನಾಗರಕಟ್ಟೆ ಇದ್ದರು.
ಸಾಗರದಲ್ಲಿ ನಡೆಯಲಿದ್ದ ಕಾರ್ಯಕ್ರಮಕ್ಕೆ ಎಲ್ಲ ಇಲಾಖೆಗಳ ಪೂರ್ವಾನುಮತಿ ಪಡೆದು ಅದರಂತೆ ಕಾರ್ಯಕ್ರಮ ನಿಶ್ಚಯ ಮಾಡಿಕೊಳ್ಳಲಾಗಿತ್ತು. ಆದರೆ ಉದ್ದೇಶಿತ ಕಾರ್ಯಕ್ರಮದಲ್ಲಿ ಮುತಾಲಿಕ್ ಪಾಲ್ಗೊಳ್ಳದಂತೆ ಸಾಗರ ಪ್ರವೇಶ ನಿರ್ಬಂಧಿಸಿ ಕಾರ್ಯಕ್ರಮ ಸಂಘಟಕರಿಗೆ ನೊಟೀಸ್ ನೀಡಲಾಗಿದೆ. ಆದರೆ ನನಗೆ ಅದು ಅಧಿಕೃತವಾಗಿ ತಲುಪಿಲ್ಲ. ಕಾರ್ಯಕ್ರಮದ ಸಂಘಟಕರು ನ್ಯಾಯಲಯದ ಮೊರೆ ಹೋಗಿದ್ದಾರೆ. ಅಲ್ಲಿ ತಡೆಯಾಜ್ಞೆ ಸಿಕ್ಕರೆ ಸಾಗರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ.
-ಪ್ರಮೋದ ಮುತಾಲಿಕ್- ಶ್ರೀರಾಮ ಸೇನೆ ಸಂಸ್ಥಾಪಕ

loading...

LEAVE A REPLY

Please enter your comment!
Please enter your name here