ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಿ: ಅಣ್ಣಾನವರ

0
22
loading...

ಹಾರೂಗೇರಿ 19: ವಿದ್ಯಾರ್ಥಿಗಳು ಸತತ ಪ್ರಯತ್ನ ಕಠಿಣ ಪರಿಶ್ರಮದೊಂದಿಗೆ ವಿದ್ಯಾರ್ಜನೆ ಮಾಡುವ ಮೂಲಕ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕೆಂದು ಪ್ರಧಾನ ಗುರುಗಳಾದ ಬಿ.ಕೆ ಅಣ್ಣಾನವರ ಕರೆ ನೀಡಿದರು.
ಪಟ್ಟಣದ ಸರಕಾರಿ ಕನ್ನಡ ಗಂಡು ಮಕ್ಕಳ ಕೇಂದ್ರ ಶಾಲೆಯಲ್ಲಿ ಜರುಗಿದ ಸನ್ 2015-16ನೇ ಸಾಲಿನ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು.
ಸಹಶಿಕ್ಷಕ ಎಸ್.ಬಿ ಚಿದಾನಂದಮೂರ್ತಿ ಮಾತನಾಡಿ ಸ್ಫರ್ಧಾತ್ಮಕ ಇಂದಿನ ಯುಗದಲ್ಲಿ ವಿದ್ಯಾರ್ಥಿಗಳು ದುಶ್ಚಟಗಳ ದಾಸರಾಗದೇ ಜ್ಞಾನ ಮಂದಿರಗಳಲ್ಲಿ ಉಣಬಡಿಸುವ ಶಿಕ್ಷಣವನ್ನು ಪಡೆದು ಹೆತ್ತ ತಂದೆತಾಯಿ ಕಲಿಸಿದ ಗುರುವಿಗೆ ಕೀರ್ತಿ ತರಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಸಾಕ್ಷರ ಭಾರತ ತಾಲೂಕಾ ಸಂಯೋಜಕ ಕಾಮು ಶಿಂಗೆ ಎಸ್‍ಡಿಎಮ್‍ಸಿ ಅಧ್ಯಕ್ಷ್ಯ ಕಲ್ಲಪ್ಪ ನಾಯಿಕ, ಸದಸ್ಯರಾದ ಗೌರವ್ವ ನಡೋಣಿ, ಹಣಮಂತ ಸಣ್ಣಕ್ಕಿನವರ, ಬಸವರಾಜ ಚಿಂಚಲಿ, ನಜೀರಸಾಬ ಖಣದಾಳ, ಸಂಜೀವ ನಡೋಣಿ, ಶಿಕ್ಷಕರಾದ ಎಂ,ಎಸ್ ಶಿಂಗೆ, ಎಸ್,ಎನ್ ಹೂವಣ್ಣವರ, ಎ.ಬಿ ದೊಡ್ಡಣ್ಣವರ, ಎನ್,ಜಿ ಕರ್ಯಾಗೋಳ, ಎಸ್,ಎಚ್ ಹೂಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕೆ.ಆರ್ ಶಿಂಗೆ ಸ್ವಾಗತಿಸಿದರು, ಎಸ್.ಬಿ ಚಿದಾನಂದಮೂರ್ತಿ ನಿರೂಪಿಸಿದರು, ಎಂ,ಎಸ್ ಶಿಂಗೆ ವಂದಿಸಿದರು.

loading...

LEAVE A REPLY

Please enter your comment!
Please enter your name here