ವಿದ್ಯುತ್ ದರ ಹೆಚ್ಚಳ ಖಂಡಿಸಿ ಪ್ರತಿಭಟನೆ

0
7
loading...

ಬೆಳಗಾವಿ 31: ವಿದ್ಯುತ್ ದರ ಹೆಚ್ಚಳ ಮಾಡಿರುವದನ್ನು ಖಂಡಿಸಿ ನ್ಯಾಯವಾದಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಬರಗಾಲದ ದಿನಮಾನಗಳಲ್ಲಿ ಸಾರ್ವಜನಿಕರು ಬದಕು ಹೇಗೆ ಸಾಗಿಸುವುದು ಎಂಬ ಚಿಂತೆ ಒಂದೆಡೆಯಾದರೆ ಇನ್ನೊಂದಡೆ ಹೆಸ್ಕಾಂ ಇಲಖಾಎ ಏ.1 ರಿಂದ ಪ್ರತಿ ಯುನಿಟ್‍ಗೆ 48 ರೂ. ಹೆಚ್ಚಳ ಮಾಡಲಾಗುವದು ಎಂದು ತಿಳಿಸಲಾಗಿದೆ. ಈ ದರ ಹೆಚ್ಚಳ ಸಾಮಾನ್ಯ ವರ್ಗದ ಜನರಿಗೆ ಬಿಸಿ ತುಪ್ಪವಾಗಿ ಮಾರ್ಪಟ್ಟಿದೆ. ಇಂದಿನ ಸರಕಾರ ಬಡವರ ಪರವಾಗಿ ಯೋಜನೆಗಳನ್ನು ಜಾರಿಗೆ ತರದೆ ವಿದ್ಯುತ್ ದರ ಹೆಚ್ಚಳ ಮಾಡುವ ಮೂಲಕ ಬಡ ಜನರ ಹೊಟ್ಟೆಗೆ ಬರೆ ಎಳೆಯಲಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ನ್ಯಾಯವಾದಿ ಅಣಾಸಾಹೇಬ ಘೋರ್ಪಡೆ, ಬಿ.ಪಿ.ಜೇವಣಿ, ಎಂ.ಎಸ್.ನಂದಿ, ಬಿ.ಎಸ್.ಹಿರೇಮಠ, ಆರ್.ಎಸ್.ಕಮತೆ ಸೇರಿದಂತೆ ಮೊದಲಾದವರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here