ಶಾಲಾ ಮಕ್ಕಳಿಗೆ ಬಿಸಿಯೂಟದ ಬದಲಿಗೆ ತಂಗಳೂಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಡಿಸಿ

0
17
loading...

ಬೆಳಗಾವಿ:31 ಅಂಗವಾಡಿ ಹಾಗೂ ಶಾಲಾ ಮಕ್ಕಳಿಗೆ ಸರ್ಕಾರ ಬಿಸಿಯೂಟದ ಯೋಜನೆ ಜಾರಿಗೆ ತಂದಿದೆ ಆದರೆ, ಸ್ಥಳೀಯ ಅಧಿಕಾರಿ ಹಾಗೂ ಅಡುಗೆ ತಯಾರಿಕಾ ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಈ ಯೋಜನೆ ಬಿಸಿಯೂಟದ ಬದಲಾಗಿ ತಂಗಳ ಊಟವಾಗಿ ಪರಿವರ್ತನೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎನ್. ಜಯರಾಮ್ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಮಧ್ಯಾಹ್ನ ಉಪಾಹಾರ ಯೋಜನೆಯ ಚಾಲನಾ ಮತ್ತು ಪರಾಮರ್ಶ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಸರ್ಕಾರ ನಿಯಮಾವಳಿಯ ಪ್ರಕಾರ ಶಾಲೆಗಳಿರುವ ಸ್ಥಳದಿಂದ 20 ಕಿ.ಮೀ ವ್ಯಾಪ್ತಿಯೊಳಗೆ ಅಡುಗೆ ತಯಾರಿಸುವ ಕೇಂದ್ರಗಳನ್ನು ಸ್ಥಾಪಿಸಿ ಅಲ್ಲಿಂದ ಮಧ್ಯಾಹ್ನ 1 ಗಂಟೆಯೊಳಗಾಗಿ ಆಯಾ ಶಾಲೆಗಳಿಗೆ ತಲುಪಿಸಬೇಕು. ಆದರೆ, ಅಡುಗೆ ತಯಾರಿಕೆಗೆ ಗುತ್ತಿಗೆ ಪಡೆದ ಗುತ್ತಿಗೆದಾರರು ನಿಯಮಾವಳಿಯನ್ನು ಗಾಳಿಗೆ ತೂರಿ ಬೆಳಿಗ್ಗೆ 4 ಗಂಟೆಗೆ ಅಡುಗೆ ತಯಾರಿಸಿ ನಂತರ 35-40 ಕಿಮೀ. ದೂರದಲ್ಲಿರುವ ಶಾಲೆಗಳಿಗೆ ಅಡುಗೆ ಪೂರೈಸುತ್ತಿರುವುದರಿಂದ ಅಡುಗೆ ಬಿಸಿ ಇರುವುದರ ಬದಲಾಗಿ ತಂಗಳಾಗಿರುತ್ತದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ವ್ಯತಿರೀಕ್ತ ಪರಿಣಾಮ ಬಿರುವ ಸಾಧ್ಯತೆಗಳು ಉಂಟಾಗಬಹುದು. ಆದ್ದರಿಂದ ಅಡುಗೆ ತಯಾರಿಕಾ ಕೇಂದ್ರಗಳಿಂದ 20 ಕಿ.ಮೀಗಿಂತ ದೂರವಿರುವ ಶಾಲೆಗಳಿಗೆ ಸಮೀಪವಾಗುವಂತೆ ಹೆಚ್ಚುವರಿ ಅಡುಗೆ ತಯಾರಿಕಾ ಕೇಂದ್ರಗಳನ್ನು ಸ್ಥಾಪಿಸುವಂತೆ ಕ್ರಮಕೈಗೊಳ್ಳಿ ಎಂದು ಜಿಪಂ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸದರು.

20 ಕಿ.ಮೀಗಿಂತ ಹೆಚ್ಚಿಗೆ ದೂರದಿಂದ ಅಡುಗೆ ಪೂರೈಸುವ ಎನ್‍ಜಿಒಗಳಿಗೆ ಹಣ ನೀಡಬೇಡಿ ಮತ್ತು ಮುಂದಿನ ಸಾಲಿಗೆ ಪೂರೈಸದಂತೆ ನವೀಕರಣ ಮಾಡದೇ ಅವರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಸೂಚಿಸಿದರಲ್ಲದೇ, ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ ಪೂರೈಸಲಾಗುತ್ತಿರುವ ಪಡಿತರ ಹಾಗೂ ಅಡುಗೆ ಗುಣಮಟ್ಟವನ್ನು ತಾಲೂಕಿನಲ್ಲಿ ಪ್ರತಿ ವರ್ಷ 850 ಶಾಲೆ ಮತ್ತು 40 ಅಂಗನವಾಡಿ ಕೇಂದ್ರಗಳಿಗೆ ತೆರಳಿ ಪರಿಕ್ಷೀಸಿ ಆಹಾರ ಗುಣಮಟ್ಟ ಕಡಿಮೆ ಇರುವ ಬಗ್ಗೆ ಲ್ಯಾಬ್‍ಗಳ ಮೂಲಕ ಮಾಹಿತಿ ಪಡೆದು ಜಿಪಂಗೆ ನೀಡುವಂತೆ ಹೇಳಿದರು.
ಜಿಪಂ ಸಿಇಒ ಡಾ. ಬಗಾದಿ ಗೌತಮ ಮಾತನಾಡಿ, ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿರುವ ಬಿಸಿಯೂಟವನ್ನು ಸಮರ್ಪಕವಾಗಿ ಮತ್ತು ನಿಗಧಿ ಸಮಯದೊಳಗೆ ಶಾಲೆಗಳಿ ಮುಟ್ಟುವಂತೆ ನೋಡಿಕೊಳ್ಳಿ. ಕೇವಲ ಎನ್‍ಜಿಒಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಹಾಗೂ ಶಾಲಾ ಮಕ್ಕಳ ಹಿತವನ್ನು ಕಡೆಗಣಿಸಬೇಡಿ ಎಂದು ಅಧಿಕಾರಿಗೆ ಹೇಳಿದರು.
ಈ ಸಭೆಯಲ್ಲಿ ಡಿಡಿಪಿಐಗಳಾದ ಗಜಾನನ ಮಣ್ಣಿಕೇರಿ, ಎಸ್.ವೈ. ಹಳಿಂಗಳಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here