ಶಿಕ್ಷಕನ ಹೆಜ್ಜೆಗಳು ಸೂಕ್ಷ್ಮತೆಯಿಂದಿರಲಿ : ಡಾ. ಹುಲೆಪ್ಪನವರಮಠ

0
38
loading...

ಗೋಕಾಕ 07: ಶಿಕ್ಷಕನ ಮೇಲೆ ಸುಂದರ ಸಮಾಜ ಕಟ್ಟುವ ಶಕ್ತಿ ಇದ್ದುದರಿಂದಾಗಿ ಶಿಕ್ಷಕನ ಹೆಜ್ಜೆಗಳು ಸೂಕ್ಷ್ಮತೆಯಿಂದಿರಬೇಕು ಎಂದು ಬೆಳಗಾವಿಯ ಡಾ. ಗುರದೇವಿ ಹುಲೆಪ್ಪನವರಮಠ ಹೇಳಿದರು.
ಅವರು ಶನಿವಾರ ತಾಲೂಕಿನ ಅಂಕಲಗಿ ಗ್ರಾಮದ ಕೆ.ಜೆ.ಎಸ್.ಸಂಸ್ಥೆ ಮತ್ತು ಸಂಸ್ಥೆಯ ಅಂಗ ವಿದ್ಯಾಸಂಸ್ಥೆಗಳ ಪರ ಎಸ್.ಎ.ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ ಪ್ರಾಚಾರ್ಯ ಎಸ್.ಜಿ.ವಾರೀಮನಿ ಮತ್ತು ವಿ.ಎ.ಕುಲ್ಕರ್ಣಿ ಅವರ ಸೇವಾ ನಿವೃತ್ತಿಗಾಗಿ ಜರುಗಿದ ಬೀಳ್ಕೊಡುವ ಮತ್ತು ಸನ್ಮಾನ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಸಮಾಜ ಕಟ್ಟುವ ಭಾಗವಾಗಿರುವ ಶಿಕ್ಷಕನು ಶಿಸ್ತು, ಸಂಯಮತೆ, ಸ್ವಚ್ಛತೆ, ಸೇವಾಗುಣ, ನಮೃತೆಗಳನ್ನೊಳಗೊಂಡಿರಬೇಕು. ಇವೆಲ್ಲ ಗುಣಗಳಿದ್ದಲ್ಲಿ ಪರಿಪೂರ್ಣ ಶಿಕ್ಷಕನ ಸ್ಥಾನ ತುಂಬಬಹುದಾಗಿದೆ. ಗ್ರಾಮೀಣ ಭಾಗದಲ್ಲಿರುವ ಈ ಕೆ.ಜೆ.ಎಸ್. ವಿದ್ಯಾಸಂಸ್ಥೆಯು ದೇಶಕ್ಕೆ ಶಕ್ತಿಯುತರನ್ನು ನೀಡಿದ್ದು ಇಂಥ ಸಂಸ್ಥೆಗಳ ಸಾಧನೆ ಅದ್ವಿತೀಯ ಮತ್ತು ಪ್ರಶಂಶನೀಯ. ನಮ್ಮ ಪ್ರಾಮಾಣಿಕ ಸೇವೆ ಸಮಾಜದಿಂದ ಗೌರವಿಸಲ್ಪಡುತ್ತದೆ. ಮನೆಯ ವಾತಾವರಣವು ಆ ಮನೆಯ ಸಂಸ್ಕøತಿಯನ್ನು ತಿಳಿಸುತ್ತದೆ. ದೊಡ್ಡವರು ಮಾಡುವ ಪ್ರತಿಯೊಂದನ್ನು ಮನೆಯ ಚಿಕ್ಕವರು ಗಮನಿಸುವರು. ಒಳ್ಳೆಯದನ್ನೇ ಮಾಡುವ ಗುಣಗಳು ಸುಂದರ ಸಮಾಜ ಕಟ್ಟಬಲ್ಲವು. ಇಲ್ಲಿರುವ ಎಲ್ಲರ ಮುಖದಲ್ಲೂ ಉತ್ಸಾಹವಿದೆ. ಇದಕ್ಕೆ ಈ ನಾಡಿನ ಮಣ್ಣಿನ ಗುಣ ಕಾರಣವಾಗಿರಬಹುದು ಎಂದರಲ್ಲದೆ, ಸಂಸ್ಥೆ ಕೊಟ್ಟ ಸನ್ಮಾನಕ್ಕೆ ಧನ್ಯವಾದ ಅರ್ಪಿಸಿದರು.
ಸಂಸ್ಥೆಯ ಚೇರಮನ್ ಶಿವಾನಂದ ಡೋಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ರಾಜು ತಳವಾರ ವೇದಿಕೆಯಲ್ಲಿದ್ದರಲ್ಲದೆ, ಎಲ್ಲ ಸೇವಾನಿವೃತ್ತರನ್ನು ಸನ್ಮಾನಿಸಿದರು.
ಪ್ರಾಚಾರ್ಯ ಎಸ್.ಜಿ. ವಾರೀಮನಿ ಸನ್ಮಾನಕ್ಕುತ್ತವಾಗಿ ಮಾತನಾಡಿ ನನ್ನೆಲ್ಲ ಸಾಧನೆಗೆ ಎಲ್ಲ ಸಿಬ್ಬಂದಿ ಕಾರಣ, ನನ್ನ 4 ದಶಕಗಳ ಸೇವೆಯು ನನಗೆ ತೃಪ್ತಿ ನೀಡಿದೆ. ನನ್ನ ಹಿರಿಯರ ಅನುಭವಗಳೇ ನನ್ನ ಪ್ರಮಾಣಿಕ ಸೇವೆಗೆ ಕಾರಣವಾಗಿವೆ. ಸೇವೆಯಿಂದ ನನ್ನ ನಿವೃತ್ತಿ. ಆದರೆ ಪ್ರವೃತ್ತಿಗಲ್ಲ ಎಂದರಲ್ಲದೆ, ಸಂಸ್ಥೆಯು ಕೊಟ್ಟ ಸಹಕಾರ ಸ್ಮರಿಸಿದರು. ನನ್ನ ಯಶಸ್ಸಿಗೆ ನನ್ನ ಧರ್ಮಪತ್ನಿಯ ಸಹಕಾರ ಚಿರಸ್ಮರಣೀಯ ಎಂದರು. ಜವಾನ ವಿನಾಯಕ ಕುಲ್ಕರ್ಣಿ ಅವರ ಧರ್ಮಪತ್ನಿಯ ಸನ್ಮಾನ ಜರುಗಿತು.
ಅಧ್ಯಕ್ಷೀಯ ಪರ ಭಾಷಣ ಮಾಡಿದ ನಿರ್ದೇಶಕ ಬಸಪ್ಪಾ ಉರಬಿನಹಟ್ಟಿ ಮಾತನಾಡಿ, ಸಂಸ್ಥೆಯು ಅತ್ಯಂತ ಕಡಿಮೆ ಅವಧಿಯಲ್ಲಿ ಇಷ್ಟೊಂದು ಸಾಧನೆ ಮಾಡಲು ಯುವ ಧುರೀಣರಾದ ಶಿವಾನಂದ ಡೋಣಿ, ರಾಜು ತಳವಾರ, ಭೀಮಗೌಡ ಪೊಲೀಸಗೌಡರ ಅವರ ಶಕ್ತಯೇ ಕಾರಣ. ಸಂಸ್ಥೆ ಕೊಟ್ಟ ಸವಲತ್ತುಗಳ ಸದ್ಬಳಕೆಯಾದಾಗ ಮಾತ್ರ ಸಂಸ್ಥೆ ಉನ್ನತಕ್ಕೆ ಏರಬಲ್ಲದು ಈದಿಶೆಯಲ್ಲಿ ವಾರೀಮನಿ ಅವರ ಸೇವೆ ಸಾರ್ಥಕ ಎಂದರಲ್ಲದೆ, ಕುಲ್ಕರ್ಣಿ ಅವರ ಶ್ರಮದ ಬಗ್ಗೆ ಶ್ಲ್ಯಾಘಿಸಿದರು.
ಸ್ವಾಗತ, ಪ್ರಸ್ತಾವಿಕ ಕಲಾ ಮಹಾವಿದ್ಯಾಲಯದ ಪ್ರಚಾರ್ಯ ಎಮ್.ಎನ್.ಮಾವಿನಕಟ್ಟಿ ಮಾಡಿದರು. ಆರ್.ವಾಯ್ ಸನದಿ ಮತ್ತು ಉಪಪ್ರಾಚಾರ್ಯ ಎಸ್.ಎಸ್.ಮುಳಕೂರಿ ನಿವೃತ್ತರ ಗುಣಗಾನ ಮಾಡಿದರು.
ಕುಂದರನಾಡಿನ ಹಳೆಯ ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರಾದ ಬಿವಾಯ್ ಬರಗಾಲಿ, ಎಸ್.ಬಿ.ಖತಗಲ್ಲಿ ಐ.ಬಿ.ಮಾವಿನಕಟ್ಟಿ, ಎ.ಬಿ.ದೇಗಾನಟ್ಟಿ, ಎ.ಎನ್.ದೇಸಾಯಿ. ಎ.ಎಸ್.ಪಾಟೀಲ, ಸಿ.ಬಿ.ಮೇದಾರ ಮತ್ತು ನಾಡಿನ ಶಿಕ್ಷಣ ಪ್ರೇಮಿಗಳು, ಹಿರಿಯರು ಉಪಸ್ತಿತರಿದ್ದರು. ಫ್ರೌಢಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉಪನ್ಯಾಸಕ ಎನ್.ಎಮ್.ಕಿವಡನವರ ನಿರೂಪಿಸಿದರು. ಎಸ್.ಬಿ.ಉರಬಿನಹಟ್ಟಿ ವಂದಿಸಿದರು.

loading...

LEAVE A REPLY

Please enter your comment!
Please enter your name here