ಶಿಕ್ಷಣಕ್ಕಾಗಿ ನಿಸ್ವಾರ್ಥ ಸೇವೆ, ಪ್ರಾಧಾನ್ಯತೆ ಶ್ಲಾಘನೀಯ : ಹಿರೇಕುಂಬಿ

0
21
loading...

ಸವದತ್ತಿ 19: ಎಸ್.ಡಿ.ಎಮ್.ಸಿ. ಆಡಳಿತ ಮಂಡಳಿ ಹಾಗೂ ಗ್ರಾಮದ ಹಿರಿಯರಿಂದ ಶಿಕ್ಷಣಕ್ಕಾಗಿ ಈ ಶಾಲೆಯು ಸಾಕಷ್ಟು ಪ್ರಾಧಾನ್ಯತೆ ಹೊಂದಿದೆ. ಶಿಕ್ಷಣಕ್ಕಾಗಿ ನಿಸ್ವಾರ್ಥ ಸೇವೆ ಮಾಡುತ್ತಿರುವ ಗ್ರಾಮದ ಹಿರಿಯರ ಕಾರ್ಯ ಶ್ಲಾಘನೀಯ ಎಂದು ನೂತನವಾಗಿ ಆಯ್ಕೆಯಾದ ಜಿ.ಪಂ. ಸದಸ್ಯ ಎಮ್.ಎಸ್. ಹಿರೇಕುಂಬಿ ಹೇಳಿದರು.
ತಾಲೂಕಿನ ಮನಿಕಟ್ಟಿ ಗ್ರಾಮದ ಸ.ಹಿ.ಪ್ರಾ. ಶಾಲೆಯಲ್ಲಿ ಶುಕ್ರವಾರ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತಡನಾಡಿದರು.
ಶಾಲೆಗೆ ಅವಶ್ಯವಿರುವ 2 ಹೆಚ್ಚುವರಿ ಕೊಠಡಿಗಳು ಮತ್ತು ಕಂಪ್ಯೂಟರ ವದಗಿಸುವಲ್ಲಿ ಪೂರ್ಣಪ್ರಮಾಣದ ಪ್ರಯತ್ನ ಮಾಡುವದಾಗಿ ತಿಳಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಬಿ.ವಾಯ್. ವಾಶಪ್ಪನವರ ಮಾತನಾಡಿ ವಿದ್ಯಾರ್ಥಿಗಳು ನಿರಂತರ ವಿದ್ಯಾಭ್ಯಾಸದ ಪ್ರಯತ್ನದಿಂದ ಪ್ರಗತಿಹೊಂದಲು ಸಾಧ್ಯ. ನಿರ್ದಿಷ್ಟ ಗುರಿಯನ್ನಿಟ್ಟು ಸಾಧಿಸುವಾಗ ಇಚ್ಛಾಶಕ್ತಿ ಮುಖ್ಯವಾದದ್ದು. ಕಷ್ಟಪಟ್ಟು ಓದುವದಕ್ಕಿಂತ ಇಷ್ಟ ಪಟ್ಟು ಓದಬೇಕು. ವಿದ್ಯಾಭ್ಯಾಸದ ಸತತ ಪ್ರಯತ್ನದಿಂದ ಭವಿಷ್ಯದಲ್ಲಿ ಜೀವನ ರೂಪಿಸಿಕೊಳ್ಳಬೆಕೆಂದರು.
ಈ ವೇಳೆ ತಾ.ಪಂ. ಸದಸ್ಯ ಬಸವರಾಜ ಗುಡ್ನಾಯ್ಕರ, ಗ್ರಾ.ಪಂ. ಉಪಾಧ್ಯಕ್ಷೆ ಬಸವ್ವ ಮಾದರ, ಸದಸ್ಯರುಗಳಾದ ಭೀಮವ್ವ ಕುರಿ, ಈರಪ್ಪ ಹೊಸಮನಿ, ಮಲ್ಲಿಕಾರ್ಜುನ ಗಾಣಿಗೇರ, ಮಾಜಿ ಸದಸ್ಯ ಸುರೇಶ ಗೋವಿಂದನ್ನವರ ಹಾಗೂ ಶಿಕ್ಷಕರಾದ ಎಮ್.ಎಮ್. ಪತ್ರಾವಳಿ, ಎಮ್.ಜಿ. ಕಡೇಮನಿ, ಎಮ್.ಪಿ. ಪಾಟೀಲ ಮತ್ತು ಶಿಕ್ಷಕ ವೃಂದ, ನೌಕರರ ಸಂಘದ ಸದಸ್ಯ ಜಿ.ಎಸ್. ಬಡಿಗೇರ ಇದ್ದರು.
ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಜಿ.ಪಂ. ಸದಸ್ಯ ಮತ್ತು ತಾ.ಪಂ. ಸದಸ್ಯರು, ಎಸ್.ಡಿ.ಎಮ್.ಸಿ. ಸದಸ್ಯರು, ಗ್ರಾಮ ಪಂಚಾಯತ ಸದಸ್ಯರಿಗೆ ಸನ್ಮಾನಿಸಲಾಯಿತು.

loading...

LEAVE A REPLY

Please enter your comment!
Please enter your name here