ಶಿಕ್ಷಣದ ಜೊತೆ ಸಂಸ್ಕಾರ ನೀಡಿ : ಮೇಕನಮರಡಿ

0
26
loading...

ಕೋಹಳ್ಳಿ 10: ವಿದ್ಯಾರ್ಥಿಗಳು ಒಳ್ಳೇಯ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ಬೆಳಸಿಕೊಳ್ಳಬೇಕು ಎಂದು ಅಥಣಿ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಡಿ.ಮೇಕನಮರಡಿ ಹೇಳಿದರು.
ಅವರು ಸಮೀಪದ ಸವದಿ ಗ್ರಾಮದ ವಿಶ್ವಚೇತನ ಶಿಕ್ಷಣ ಸಂಸ್ಥೆಯ ವಿಶ್ವಚೇತನ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಕಾನ್ವೇಂಟ್ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಉಪನ್ಯಾಸ ನೀಡಿ, ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಗೆ ಶಿಕ್ಷಕರ, ತಂದೆ, ತಾಯಿಗಳ ಪಾತ್ರ ಮುಖ್ಯವಾಗಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಅತಿ ಎತ್ತರದ ಕನಸುಗಳನ್ನು ಕಂಡು ಅದನ್ನು ಇಡೇರಿಸಲು ಶ್ರಮಿಸಬೇಕು ಎಂದು ಹೇಳಿದರು.
ಸತ್ಯಪ್ಪ ಬಾಗೇನ್ನವರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಂಸ್ಕøತಿ ನೈತೀಕತೆ, ಪ್ರಾಮಾಣಿಕತೆ, ಮಾನವೀಯ ಗುಣಗಳನ್ನು ಕಲಿಸಿ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಮಾಡಲು ಶಿಕ್ಷಕರು ಪ್ರಯತ್ನಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಸವದಿ ತಾಪಂ ಸದಸ್ಯ ಶಿವಕುಮಾರ ಪಾಟೀಲ, ಮಹೇಶ ಬಂಡರಗೋಟಿ, ಮಲನಗೌಡ ಪಾಟೀಲ, ಡಿ ಬಿ ಠಕ್ಕಣವರ, ಟಿ ಎಮ್ ಯಲಿಗೌಡರ, ಮಲ್ಲಪ್ಪ ಬಾಳಿಕಾಯಿ, ಮಲ್ಲಪ್ಪ ಸೊಂಡಿ, ಶ್ರೀಶೈಲ ಠಕ್ಕಣವರ, ಶಿವಾನಂದ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಹನಮಂತ ಶಿರಗುಪ್ಪಿ ಸ್ವಾಗತಿಸಿದರು. ಪ್ರಕಾಶ ಪಾಟೀಲ ನಿರೂಪಿಸಿ ವಂದಿಸಿದರು.

loading...

LEAVE A REPLY

Please enter your comment!
Please enter your name here