ಶಿಕ್ಷಣ ಪದ್ದತಿಯಲ್ಲಿ ಹೆಚ್ಚು ವ್ಯಕ್ತಿತ್ವ ವಿಕಾಸಗಳಿವೆ

0
18
loading...


ಧಾರವಾಡ 18: ಯುವಜನರು ವಿದ್ಯೆಗೆ ತಕ್ಕ ಕೆಲಸಕ್ಕೆ ಕಾಯುವ ಬದಲಾಗಿ ಇತರೆ ವೃತ್ತಿ ತರಬೇತಿಗಳು, ಕೃಷಿ ಚಟುವಟಿಕೆಗಳ ಕಡೆ ಆಸಕ್ತಿ ತೋರುವುದು ಮುಖ್ಯವಾಗಿದೆ ಎಂದು ಅಣ್ಣಿಗೇರಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಪ್ರಕಾಶ ಅಂಗಡಿ ಹೇಳಿದರು.
ಭದ್ರಾಪೂರ ಗ್ರಾಮದ ಶ್ರೀ ತೋಂಟದಾರ್ಯ ಮಠದ ಸಭಾ ಭವನದಲ್ಲಿ ಏರ್ಪಡಿಸಿದ ನವಲಗುಂದ ತಾಲೂಕ ಮಟ್ಟದ ಯುವ ಮಂಡಳ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಯುವಜನತೆ ಯುವಕ/ಯುವತಿ/ ಮಹಿಳಾ ಮಂಡಳಿಗಳು ಶ್ರಮಿಸಬೇಕಿದೆ. ನಮ್ಮ ಶಿಕ್ಷಣ ಪದ್ದತಿಯಲ್ಲಿ ಹೆಚ್ಚು ವ್ಯಕ್ತಿತ್ವ ವಿಕಾಸಗಳಿದ್ದು ವಿದ್ಯಾರ್ಥಿಯು ತಮ್ಮ ಜೀವನ ಕೌಶಲ್ಯ ಅಳವಡಿಸಿಕೊಳ್ಳಬೇಕು, ಶಿಕ್ಷಣ ಅಭಿವೃದ್ದಿಯ ಸಂಕೇತ ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ಭವಿಷ್ಯದ ಯೋಜನೆ ಬಗ್ಗೆ ಗುರಿ ಹೊಂದಬೇಕು ಎಂದರು.
ನೆÉಹರು ಯುವ ಕೇಂದ್ರದ ಜಿಲ್ಲಾ ಸಮಿತಿಯ ಸದಸ್ಯ ಶರಣು ಅಂಗಡಿ ಮಾತನಾಡಿ, ಯುವ ಜನತೆ ಮೌಲ್ಯಗಳ ಬಗ್ಗೆ ತಿಳಿದುಕೊಂಡು ಉತ್ತಮ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಯುವಜನರು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಗುರಿಯನ್ನು ಹೊಂದಿ ಅದನ್ನು ಸಾಧಿಸಲು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಅನಿಲ ಪುರಾಣಿಕ ಮಾತನಾಡಿ, ಗ್ರಾಮೀಣ ಸಮುದಾಯ ಸಮಸ್ಯೆಗಳನ್ನು ಹೋಗಲಾಡಿಸಿ ಜನರಲ್ಲಿ ಗುಣಮಟ್ಟದ ಜೀವನ ಶೈಲಿ ರೂಪಿಸಲು ಯವಜನರನ್ನು ಸಜ್ಜುಗೊಳಿಸಲು ಈ ಸಮಾವೇಶವನ್ನು ಆಯೋಜಿಸಲಾಗಿದೆ. ಯುವ ಜನರಲ್ಲಿ ಹುದುಗಿರುವ ನಾಯಕತ್ವ ಗುಣಗಳನ್ನು ಬೆಳೆಸುವುದು, ಯುವ ಜನತೆ ತಮ್ಮ ಅನುಭವ ವಿಚಾರಗಳನ್ನು ಹಂಚಿಕೊಳ್ಳಲು ಅವಕಾಶವನ್ನು ಒದಗಿಸಿಕೊಟ್ಟು ಗ್ರಾಮೀಣ ಪ್ರದೇಶದಲ್ಲಿ ಯುವಕ/ಯುವತಿ ಮಂಡಳಿಗಳು ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲು ವೇದಿಕೆ ಕಲ್ಪಿಸಿದೆ ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಮತಿ ಕಮಲವ್ವ ಬಾರಕೇರ ಅಧ್ಯಕ್ಷತೆವಹಿಸಿದ್ದರು. ಪ್ರದೀಪ ಮೇಲ್ಗಡೆ ಹಾಗೂ ಶಿವಲಿಂಗ ಕರಗಣ್ಣಿ ಉಪಸ್ಥಿತರಿದ್ದರು. ರುದ್ರಪ್ಪ ಬಡಿಗೇರ ಸ್ವಾಗತಿಸಿದರು. ಮಲ್ಲಪ್ಪ ಮಗದುಮ್ ನಿರೂಪಿಸಿದರು ಶಿವಾನಂದ ಹಾವಿನ ವಂದಿಸಿದರು.

loading...

LEAVE A REPLY

Please enter your comment!
Please enter your name here