ಶಿರಸಿಯಲ್ಲಿ ಐದು ದಿನಗಳ ಸಂಗೀತ ಮತ್ತು ನೃತ್ಯ ಹಬ್ಬ

0
53
loading...

ಶಿರಸಿ : ಕೇಂದ್ರ ಸಂಗೀತ ನಾಟಕ ಅಕಾಡೆಮಿ ವತಿಯಿಂದ `ಉತ್ತರಪೂರ್ವಿ ಏವಂ ದಕ್ಷಿಣಿ’ ಎಂಬ ಐದು ದಿನಗಳ ಸಂಗೀತ ಮತ್ತು ನೃತ್ಯ ಹಬ್ಬ ಶಿರಸಿಯಲ್ಲಿ ಆಯೋಜಿಸಲಾಗಿದೆ. ಈ ಮೂಲಕ ಅಕಾಡೆಮಿಯು ಗ್ರಾಮೀಣ ಭಾಗದ ಕಲಾರಸಿಕರನ್ನು ತಲುಪುವ ಕಾರ್ಯಕ್ಕೆ ಮುಂದಾಗಿದೆ.
ಅಕಾಡೆಮಿಯ ಅಧ್ಯಕ್ಷ ಜಯಪ್ರಕಾಶ ಬೆಂಗೇರಿ ನಗರದ ಚಿನ್ಮಯ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಟಿ ನಡೆಸಿ ಈ ಕುರಿತು ಮಾಹಿತಿ ನೀಡಿದರು. ಸಂಗೀತ ನಾಟಕ ಅಕಾಡೆಮಿ 63 ವರ್ಷಗಳಿಂದ ಕಲಾ ಪೋಷಣೆಗಾಗಿ ಕೆಲಸ ಮಾಡುತ್ತಿದೆ. ಇದೀಗ ಕಲೆಗಳ ಕುರಿತಾದ ಕಾರ್ಯಚಟುವಟಿಕೆಗಳನ್ನು ಗ್ರಾಮೀಣ ಪ್ರದೇಶಕ್ಕೆ ವಿಸ್ತರಿಸಲು ಕೇಂದ್ರ ಸರ್ಕರ ಸೂಚಿಸಿರುವ ಹಿನ್ನೆಲೆಯಲ್ಲಿ ಶಿರಸಿಯಲ್ಲಿ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದರು. ಉತ್ತರ ಭಾರತದ ಕಲೆಗಳು ದಕ್ಷಿಣದಲ್ಲಿ ಹೆಚ್ಚಾಗಿ ತಿಳಿದಿಲ್ಲ. ಅದೇ ರೀತಿ ಈ ಭಾಗದ ಕಲೆಗಳು ಕೂಡ ಉತ್ತರದಲ್ಲಿ ಪ್ರಚಲಿತದಲ್ಲಿಲ್ಲ. ಈ ಕಾರಣಕ್ಕಾಗಿ ಕಾರ್ಯಕ್ರಮ ಆಯೋಜನೆಯ ಮೂಲಕ ದಕ್ಷಿಣಿ ಮತ್ತು ಉತ್ತರಪೂರ್ವ ರಾಜ್ಯಗಳ ಕಲೆಗಳ ಸಂಗಮ ಮಾಡಲಾಗುತ್ತಿದೆ ಎಂದ ಅವರು, 2005ರಿಂದ ಈವರೆಗೆ ರಾಜ್ಯದಲ್ಲಿ ಅಕಾಡೆಮಿ ವತಿಯಿಂದ 6 ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರದರ್ಶನ ಮತ್ತು ಪ್ರತಿಭೆಗೆ ಈ ವೇದಿಕೆಯಲ್ಲಿ ಆದ್ಯತೆಯಿದ್ದು ಪ್ರಭಾವಕ್ಕೆ ಯಾವುದೇ ಅವಕಾಶ ನೀಡಿಲ್ಲ ಎಂದರು.
ಮಾ.15ರಿಂದ 20ರೊಳಗೆ ದೇಶದ 5 ಕಡೆಗಳಲ್ಲಿ ಅಕಾಡೆಮಿಯಿಂದ ಇಂತಹ ಕಾರ್ಯಕ್ರಮ ನಡೆಯಲಿದೆ ಎಂದ ಅವರು, ಶಿರಸಿಯ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಮಾ.16ರಂದು ಸಂಜೆ 6 ಗಂಟೆಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ರಾಮಚಂದ್ರ ಹೆಗಡೆ ಚಿಟ್ಟಾಣಿ ಕಾರ್ಯಕ್ರಮ ಉದ್ಘಾಟಿಸುವರು ಎಂದು ತಿಳಿಸಿದರು.
ಐದು ದಿನಗಳ ಕಾರ್ಯಕ್ರಮವು ಸಂಗೀತಾಸಕ್ತರಿಗೆ ರಸದೌತಣ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದ ಅವರು, ಕಾರ್ಯಕ್ರಮದ ವಿವರ ನೀಡಿದರು. ಮಾ.16ರಂದು ಜ್ಯೋತಿ ಹೆಗಡೆ ಬಿಸಲಕೊಪ್ಪ (ರುದ್ರವೀಣೆ), ಪರಂ ಕಕೋತ್ಯ ಬೋರ್ಬಯನ್ ಅಸ್ಸಾಂ (ಸಾತ್ರೀಯ ನೃತ್ಯ ಮತ್ತು ಗ್ಯಾನ್ ಬಯಾನ್), ಶರ್ಮಿಳಾ ಮುಖರ್ಜಿ ಬೆಂಗಳೂರು (ಓಡಿಸ್ಸಿ ನೃತ್ಯ), ಸಂಗೀತ ಕಲಾ ಸಂಗಮ ಮಣಿಪುರ (ಪಂಗ್, ಧೋಲ್ ಚೋಲಮ್ ಮತ್ತು ದಾಲ್) ನಡೆಯಲಿದೆ. ಮಾ.17ರಂದು ಶ್ರೀಪಾದ ಹೆಗಡೆ ಕಂಪ್ಲಿ (ಹಿಂದೂಸ್ತಾನಿ ಗಾಯನ), ತ್ಯಾಂಕಿ ಸೋಶಿಯಲ್ ಎಂಡ್ ಕಲ್ಚರಲ್ ಆರ್ಗನೈಜೇಶನ್ ಮೇಘಾಲಯ (ಮಸ್ತಿಹ್ ನೃತ್ಯ), ಸ್ನೋಲೈನ್ ಕಲ್ಚರಲ್ ಸೊಸೈಟಿ ಅರುಣಾಚಲ ಪ್ರದೇಶ (ಯಾಕ್ ಮತ್ತು ಲೈನ್ ಡಾನ್ಸ್), ಮಯೂರ ನೃತ್ಯ ವೇದಿಕೆ ಟ್ರಸ್ಟ್ ಬೆಂಗಳೂರು (ಮೋಹಿನಿ ಅಟ್ಟಂ) ಪ್ರದರ್ಶನಗೊಳ್ಳಲಿದೆ. ಮಾ.18ರಂದು ಎಂ.ಪಿ.ಹೆಗಡೆ ಶಿರಸಿ (ಹಿಂದೂಸ್ತಾನಿ ಗಾಯನ), ಥಿಂಗಸ್ಸಿರಿ ಕಲ್ಚರಲ್ ಕ್ಲಬ್ ಮಿಜೋರಾಂ (ಛೆರ್ರವ್ ಡಾನ್ಸ್), ನಟರಾಜ ನೃತ್ಯ ಶಾಲೆ ಶಿರಸಿ (ಭರತನಾಟ್ಯ), ನಾಟ್ಯ ಸ್ಟೀಂ ಡಾನ್ಸ್ ಕಂಪನಿ ಬೆಂಗಳೂರು (ಕಥಕ್ ನೃತ್ಯ) ನಡೆಯಲಿದ್ದು, ಮಾ.19ರಂದು ಶ್ರೀಪಾದ ಹೆಗಡೆ ಹಾಗೂ ಬಕುಲಾ ಹೆಗಡೆ ಶಿರಸಿ (ಹಿಂದೂಸ್ತಾನಿ ಗಾಯನ), ಸಿದ್ದಿನಾಸಾ ದಮಾಮಿ ಮಂಡಳಿ ಗುಳ್ಳಾಪುರ( ಸಿದ್ದಿ ಟ್ರೈಬಲ್ ಡಾನ್ಸ್), ಹರಿರಾಮ ಮೂರ್ತಿ ವಿಶಾಖ ಪಟ್ಟಣ (ಕೂಚಿಪುಡಿ ನೃತ್ಯ), ಭೂಪೇನ್ ಘೋಯೇನ್ ಎಂಡ್ ಗ್ರೂಫ್ ಅಸ್ಸಾಂ (ಬೀಹು ನೃತ್ಯ) ಆಯೋಜಿಸಲಾಗಿದೆ. ಮಾ.20ರಂದು ಗಣಪತಿ ಭಟ್ಟ ಹಾಸಣಗಿ (ಹಿಂದೂಸ್ತಾನಿ ಗಾಯನ), ಜವಾಹರಲಾಲ್ ನೆಹರೂ ಡಾನ್ಸ್ ಅಕಾಡೆಮಿ ಮಣಿಪುರ (ವಸಂತರಾಸ್), ಶ್ರೀನಿವಾಸ ಜೋಶಿ ಹುಬ್ಬಳ್ಳಿ (ಸಿತಾರ), ಹಲೀಂ ಖಾನ್ ಹೈದ್ರಾಬಾದ್ (ಕೂಚಿಪುಡಿ ನೃತ್ಯ) ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗಾಯಕ ಎಂ.ಪಿ.ಹೆಗಡೆ, ನೃತ್ಯಗಾರ್ತಿ ಸೀಮಾ ಭಾಗವತ, ಅಕಾಡೆಮಿಯ ಜೋಸೆಫ್ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here