ಸಮಾಜ ಸಂಸ್ಕøತಿ ಹೆಸರಿನಲ್ಲಿ ಮಹಿಳೆಯನ್ನು ದೂರ ಇಡುತ್ತಿದೆ :ಗಾಂವಕರ್

0
17
loading...


ಸಿದ್ದಾಪುರ : ಯಾವ ಧರ್ಮ, ಜಾತಿ, ಪಂತವೂ ಮಹಿಳೆಯನ್ನು ಸಮಾನವಾಗಿ ಕಂಡಿಲ್ಲ. ಅನಾದಿಕಾಲದಿಂದಲೂ ಮಹಿಳೆ ಸಮಾನತೆ ಕಳೆದು ಹೊಗಿರುವುದರಿಂದ, ಕಸಿದುಕೊಂಡಿರುವುದರಿಂದ ಹೋರಾಟವನ್ನು ನಡೆಸುತ್ತಾ ಬಂದಿದ್ದಾಳೆ.ಸಮಾಜ ಸಂಸ್ಕøತಿಯ ಹೆಸರಿನಲ್ಲಿ ಮಹಿಳೆಯನ್ನು ದೂರ ಇಡುತ್ತಿದೆ ಎಂದು ಯುಮನಾ ಗಾಂವಕರ್ ಹೇಳಿದರು’
ಅವರು ಪಟ್ಟಣದ ಹೋಲಿ ರೋಜರಿ ಚರ್ಚ ಹಾಲಿನಲ್ಲಿ ಕೆ.ಡಿ.ಡಿ.ಸಿ ಸಂಸ್ಥೆ ಕಾರವಾರ, ನವೊದಯ ಮಹಾಸಂಘ ಸಿದ್ದಾಪುರ ಇವರ ಆಶ್ರಯದಲ್ಲಿ ಆಯೋಜಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾದ ಆಧಾರ ಸಂಸ್ಥೆಯ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ಮಾತನಾಡಿ. ಲಿಂಗ ಆದಾರಿತ ಸಮಾತೆಯನ್ನು ಕಾಣಲೂ ಮುಖ್ಯವಾಗಿ ಏಕರೂಪ ಚಟುವಟಿಕೆಗಳಲ್ಲಿ ತೋಡಗಿಕೊಳ್ಳಬೇಕು. ಸಂಘಟಿತರಾಗಿ ಸ್ವತಂತ್ರವಾದ ತಿರ್ಮಾನವನ್ನು ತಗೆದುಕೊಳ್ಳುವಂತಾಗಬೇಕು.ಸ್ವ-ಉದ್ಯೋಗದ ಮೂಲಕ ಸ್ವಾವಲಂಭಿಗಳಾಗಿ ಆರ್ಥಿಕವಾಗಿ ಸಭಲರಾಗಬೇಕು. ಮಹಿಳೆಯರಲ್ಲಿ ಶಕ್ತಿತುಂಬುವ ಕಾರ್ಯ ಸಮಾಜದಿಂದ ಆಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ತಾಲೂಕಿನ ಮಹಿಳಾ ಕಲ್ಯಾಣ ಇಲಾಖೆಯ ನಿಲಮ್ಮ ನಾಯ್ಕ ಮಾತನಾಡಿ ಮಹಿಳೆಯರು ಎಚ್ಚೆತ್ತುಕೊಂಡು ಸಮಾಜದಲ್ಲಿ ಮುಂದೆ ಬರಬೇಕು. ಸರಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಸ್ಥಳಿಯ ಚರ್ಚಿನ ಫಾದರ್ ಡಿ’ಮೆಲೋ, ವಿಜಯ ಬ್ಯಾಂಕ್ ಶಾಖಾ ವ್ಯವಸ್ಥಾಪಕಿ ಶೀಲ್ಪಾ, ನವೊದಯ ಮಹಾಸಂಘದ ಅಧ್ಯಕ್ಷೆ ಸುಶೀಲಾ ರೋಡ್ರಗಿಸ್ ಉಪಸ್ಥಿತರಿದ್ದರು.
ಸಂಘದ ಸದಸ್ಯರು ಪ್ರಾರ್ಥಿಸಿದರು.ಕೆ.ಡಿ.ಡಿ.ಸಿ ವಲಯ ಸಂಯೋಜಕ ಹರಿಶ್ಚಂದ್ರ ಹರಿಕಾಂತ ಪ್ರಾಸ್ತಾವಿಕ ಮಾತನಾಡಿದರು.ಮಂಜುಳಾ ಮುರ್ಡೆಶ್ವರ ಸ್ವಾಗತಿಸಿದರು,ಅನಿತಾ ಲೋಫಿಸ್ ಕಾರ್ಯಕ್ರಮ ನಿರ್ವಹಿಸಿದರು. ಗ್ರೇಟ್ ಫರ್ನಾಂಡಿಸ್ ವಂದಿಸಿದರು.

loading...

LEAVE A REPLY

Please enter your comment!
Please enter your name here