ಸಹಬಾಳ್ವೆಯೇ ಭಾರತದ ಧರ್ಮ: ಸುತಾರ

0
23
loading...

ಚನ್ನಮ್ಮ ಕಿತ್ತೂರ 03: ಅನೇಕತ್ವದಲ್ಲಿ ಏಕತೆಯನ್ನು ಕಾಣುವುದೇ ಭಾರತೀಯತೆ ಭಾರತದಲ್ಲಿ ಅನೇಕ ಧರ್ಮ, ಪಂತಗಳನ್ನೊಳಗೊಂಡು ಶಾಂತಿ ಸಹಬಾಳ್ವೆಯಿಂದ ಇರುವುದೇ ಭಾರತೀಯ ಧರ್ಮ ಎಂದು ಕನ್ನಡದ ಕಬೀರ, ಸೂಫಿಸಂತ ಕರ್ನಾಟಕ ರಾಜೋತ್ಸವ ಪ್ರಶಸ್ತಿ ಪುರಸ್ಕøತ ಮಹಾಲಿಂಗಪೂರದ ಇಬ್ರಾಹೀಮ ಎನ್. ಸುತಾರ ಹೇಳಿದರು.

ಕಿತ್ತೂರಿನ ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘ, ಪರಂಪರೆ ಕೂಟಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತೀಯ ಎಂದರೆ ಪ್ರಕಾಶ ಮಾನರಾಗಿ ಎಲ್ಲರೊಂದಿ ಪ್ರೀತಿ ವಿಶ್ವಾಸದಿಂದ ಇರುವವನು. ಧರ್ಮ ಪರಮಾತ್ಮವನ್ನು ಕಾಣುವ ವಿಧಾನವಾಗಿದೆ. ಎಲ್ಲ ಧರ್ಮಗಳಲ್ಲಿ ಶ್ರೇಷ್ಠವಾದ ಧರ್ಮ ಮಾನವ ಧರ್ಮ ಏಕೆಂದರೆ ಎಲ್ಲ ಧರ್ಮಗಳು ಮಾನವಿಯ ಮೌಲ್ಯಗಳ ಮೇಲೆ ನೆಲೆನಿಂತಿರುವುದು. ಮಾನವರಾದ ನಾವು ಉತ್ತಮ ಮೌಲ್ಯಗಳನ್ನು ಅಳವಡಿಕೊಂಡರೆ ನಮ್ಮಲ್ಲಿ ಶಾಂತಿ ನೆಲೆಸುತ್ತದೆ. ಸಕಲ ಜೀವಾತ್ಮದಲ್ಲಿ ಶ್ರೇಷ್ಠತೆಯನ್ನು ಕಾಣುವದೇ ನಿಜವಾದ ಕುಲ. ವಿದ್ಯಾರ್ಥಿಗಳು ತಂದೆ ತಾಯಿಯನ್ನು ಪೂಜ್ಯಭಾವದಿಂದ ಗೌರವಿಸಬೇಕು. ಇಂದು ನಮ್ಮಲ್ಲಿ ಎಷ್ಟೊಂದು ಐಶ್ವರ್ಯವಿದ್ದರು ನೆಮ್ಮದಿ, ಮನಸ್ಸಿಗೆ ಶಾಂತಿಯನ್ನುವುದು ಇಲ್ಲವೇ ಇಲ್ಲ. ವಿಜ್ಞಾನ ಬಂದು ಇಂದು ನಮ್ಮಲ್ಲಿ ಜ್ಞಾನದ ಕೊರತೆ ಉಂಟಾಗಿದೆ ಎಂದು ಹೇಳಿದರು.

ಸಾನಿಧ್ಯವಹಿಸಿ ಭದ್ರಾವತಿಯ ಪಾಂಡುರಂಗ ಆಶ್ರಮದ ನಾಮದೇವನಂದ ಭಾರತಿ ಸ್ವಾಮಿಜಿ ಮಾತನಾಡಿ ಯೋಗ, ಆಧ್ಯಾತ್ಮ ನಮ್ಮ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತವೆ ಆದ್ದರಿಂದ ನಾವು ಪ್ರತಿದಿನ ಯೋಗವನ್ನು ಮಾಡಬೇಕು. ಯೋಗದಿಂದ ನಮ್ಮ ಶರೀರ ಬಲಿಷ್ಠವಾಗುವುದಲ್ಲದೇ ನಮ್ಮ ಮನಸ್ಸು ಸಹ ಶಾಂತಿಯಿಂದ ಇರುತ್ತದೆ. ಲೌಕಿಕ ಜಗತ್ತಿನಲ್ಲಿ ವಿದ್ಯೆಗೆ ಬಹಳ ಮಹ್ವವಿದೆ ಅದರೆ ವಿದ್ಯೆಯ ಜೊತೆಗೆ ವಿನಯವು ಅತ್ಯವಶ್ಯಕ ಎಂದು ಹೇಳಿದರು.
ಉಪಪ್ರಾಚಾರ್ಯ ಡಾ. ಎಸ್.ವ್ಹಿ.ಡಂಬಳ, ಆರ್.ಎನ್.ಶೆಟ್ಟರ, ಪ್ರೊ. ಪಿ.ಬಿ.ಹೊನ್ನಪ್ಪನವರ ಉಪಸ್ಥಿತಿರಿದ್ದರು. ಪ್ರೊ. ಎಸ್.ಎಸ್.ಬಿರಾದಾರಪಾಟೀಲ ಸ್ವಾಗತಿಸಿದರು, ಡಾ. ಕೆ.ಆರ್.ಮೆಳವಂಕಿ ಪರಿಚಯಿಸಿದರು, ಕುಮಾರಿ ಅಸ್ಮಿತಾ ಕಾಲಾಳ ಪ್ರಾರ್ಥಿಸಿದರು. ಪ್ರೊ. ಎಚ್.ಕೆ.ನಾಗರಾಜ ವಂದಿಸಿದರು, ಪರಂಪರೆ ಕೂಟದ ಸಂಚಾಲಕ ಡಾ. ಕೆ.ಎನ್.ನರಹರಿ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here