ಸೌಲಭ್ಯವನ್ನು ಕೊಡುವದು ಸಹಕಾರಿ ಸಂಘಗಳ ಮೂಲ ಉದ್ದೇಶ

0
28
loading...

ಬೆಳಗಾವಿ 26: ಮಾನವಿಯತೆ ಆಧಾರದ ಮೇಲೆ ಸ್ವಾವಲಂಭಿಗಳಾಗಿ ಸಹಕಾರ ಸಂಘಗಳು ಸ್ಥಾಪಿತವಾಗಿವೆ. ಕೇವಲ ಲಾಭಗಳಿಕೆ ಉದ್ದೇಶವಲ್ಲ ಎಲ್ಲ ನಾಗರಿಕರಿಗೂ ಸಹಾಯವನ್ನು ಒದಗಿಸುವದು ಆರ್ಥಿಕವಾಗಿ ಅವಶ್ಯಕತೆ ಇದ್ದವರಿಗೆ ಸೌಲಭ್ಯವನ್ನು ಕೊಡುವದು ಸಹಕಾರಿ ಸಂಘಗಳ ಮೂಲ ಉದ್ದೇಶವಾಗಿದೆ. ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
ಅವರು ನಗರದ ಬೆಳಗಾಂವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ಸಭಾಭವನದಲ್ಲಿ ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ಆಶ್ರಯದಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕಿನ ಶಾಖಾ ವ್ಯವಸ್ಥಾಪಕರುಗಳಿಗೆ ಏರ್ಪಡಿಸಿದ ಒಂದು ದಿನದ ರಾಜ್ಯ ಮಟ್ಟದ ಕಾರ್ಯಧ್ಯಕ್ಷತೆ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಸಹಕಾರ ಬ್ಯಾಂಕ್‍ಗಳಿಗಿರುವ ವ್ಯತ್ಯಾಸವೆಂದರೆ ಸಹಕಾರ ಬ್ಯಾಂಕುಗಳು ಹಣ ಇದ್ದವರ ಕಡೆ ಹೋಗಿ ಹಣವನ್ನು ತಂದು ಅವಶ್ಯಕತೆ ಇದ್ದವರಿಗೆ ಸಾಲದ ಮೂಲಕ ಸೌಲಭ್ಯವನ್ನು ಒದಗಿಸುತ್ತದೆ ಆದರೆ ರಾಷ್ಟ್ರೀಕೃತ ಬ್ಯಾಂಕುಗಳು ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಹಣಕಾಸಿನ ಸಹಾಯವನ್ನು ಪಡೆದು ಕಾರ್ಯನಿರ್ವಹಿಸುತ್ತವೆ ಎಂದರು.
ಸಹಕಾರ ಬ್ಯಾಂಕುಗಳಲ್ಲಿ ಸಾಲವನ್ನು ತೆಗೆದುಕೊಂಡ ಗ್ರಾಹಕರು ನಮ್ಮ ಬ್ಯಾಂಕು, ನಮ್ಮ ಸಂಸ್ಥೆ ಎಂಬ ಭಾವನೆಯನ್ನು ಹೋಂದುವುದರ ಜೋತೆಗೆ ಸ್ವಾಭಿಮಾನದಿಂದ ಸೇವೆಯನ್ನು ಪಡೆದುಕೊಳ್ಳುತ್ತಾರೆ ನಮ್ಮ ಬ್ಯಾಂಕಿನ ಎಲ್ಲ ಸಿಬ್ಬಂದಿಗಳು ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಕೆಲಸ ನಿರ್ವಹಿಸಬೇಕಾಗಿರುವದರಿಂದ ಗ್ರಾಮೀಣ ಜನರ ಬೆಡಿಕೆಗಳು ಹಾಗೂ ಬ್ಯಾಂಕಿನ ಉದ್ದೇಶಗಳನ್ನು ಸಫÀಲಗೊಳಿಸಬೇಕಾಗಿರುವುದು ಸಿಬ್ಬಂದಿಯವರ ಆದ್ಯ ಕರ್ತವ್ಯವಾಗಿದೆ ಎಂದು ರಮೇಶ ಕತ್ತಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಬಸವರಾಜ ಸುಲ್ತಾನಪುರಿ ಮಾತನಾಡಿ. ರಾಜ್ಯದಲ್ಲಿನ ಡಿಸಿಸಿ ಬ್ಯಾಂಕುಗಳಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್ ಒಂದನೇಯ ಸ್ಥಾನದಲ್ಲಿದ್ದು ನಮ್ಮ ಜಿಲ್ಲೆಯು ಸಹಕಾರ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಜಿಲ್ಲಾ ಸಹಕಾರ ಯೂನಿಯನ್ನಿನ ಅಧ್ಯಕ್ಷ ಬಸಗೌಡಾ ಪಾಟೀಲ ಉಪಾಧ್ಯಕ್ಷ ಎಚ್. ಎಮ್. ನಾಯಕ ಮಹಾಮಂಡಳದ ನಿರ್ದೇಶಕ ವಿ. ಎನ್. ಬಟ್ಟ್, ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಎಸ್. ಜಿ. ಢವಳೆಶ್ವರ ನಿರ್ದೇಶಕ ರಾಜೇಂದ್ರ ಅಂಕಲಗಿ, ಶಿವಾನಂದ ಡೋಣಿ, ನೀಲಕಂಠ ಕಪಲಗುದ್ದಿ ಮಹಾಮಂಡಳದ ಹಿರಿಯ ಅಧಿಕಾರಿಗಳಾದ ಎಚ್. ಎಸ್. ಪೂರ್ಣಿಮಾ ಮುಂತಾದವರು ಉಪಸ್ಥಿತರಿದ್ದರು.ಕೆ.ಐ.ಸಿ.ಎಮ್. ಉಪನ್ಯಾಸಕರಾದ ವಸಂತಗೀತಾ ಹಿರೇಮಠ ಸ್ವಾಗತಿಸಿದರು. ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನಿನ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್. ವ್ಹಿ. ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here