ಹಿಂದೆ ಗುರು ಮುಂದೆ ಗುರಿ ಸಾಧನೆಗೆ ಮುಂದಾಗಿ : ಐಹೊಳೆ

0
58
loading...

ಕಾಗವಾಡ 22: ವಿದ್ಯಾರ್ಥಿಗಳು ತಮ್ಮ ಜೀವನ ಸಾರ್ಥಕಗೊಳಿಸಲು ಶಿಕ್ಷಕರು ಬೋಧಿಸುವಾಗ ಏಕಾಗ್ರತೆಯಿಂದಾ ಅಧ್ಯಯನ ಮಾಡಬೇಕು. ಏಕಕಾಲಕ್ಕೆ ಒಂದೇ ವರ್ಗದಲ್ಲಿ ಓದುವಾಗ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಅಂಕಗಳನ್ನು ಪಡೆಯುವ ಕಾರಣವೇನು? ಇದು ಪ್ರತಿಯೋಬ್ಬರು ಗಮನದಲ್ಲಿಟ್ಟುಕೊಂಡು ಬರುವ 10 ನೇ ತರಗತಿ ಪರೀಕ್ಷೆಯಲ್ಲಿ ಯಶ ಸಾಧಿಸಲು ಪ್ರಯತ್ನೀಸಿರಿ ಎಂದು ಉಗಾರ ಬಿಕೆ ಜಿಪಂ ಸದಸ್ಯ ಆಶಾ ಪ್ರಶಾಂತ ಐಹೊಳೆ ಅವರು ಹೇಳಿದರು.
ಶಿರಗುಪ್ಪಿ ಗ್ರಾಮದ ಸರ್ಕಾರಿ ಕನ್ನಡ ಮತ್ತು ಉರ್ದು ಫ್ರೌಡಶಾಲೆಯ ವಾರ್ಷಿಕೋತ್ಸವ, 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೋಡುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳಿಗೆ “ಹಿಂದೆ ಗುರು ಮುಂದೆ ಗುರಿ” ಇಟ್ಟುಕೊಂಡು ತಮ್ಮ ಸಾಧನೆ ಮಾಡಬೇಕೆಂದು ಕೀವಿಮಾತು ಹೇಳಿದರು.
ಫ್ರೌಡಶಾಲೆಯ ಮುಖ್ಯಾಧ್ಯಾಪಕರಾದ ಉಜ್ವಲಾ ಮಗದುಮ ಪ್ರಾಸ್ತವೀಕವಾಗಿ ಮಾತನಾಡುವಾಗ ಸರ್ಕಾರ ವಿದ್ಯಾರ್ಥಿಗಳಿಗಾಗಿ ಅನೇಕ ಸೌಲತ್ತುಗಳು ನೀಡಲಾಗಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ ಎಂದು ಹೇಳಿ 10 ನೇ ತರಗತಿಯ ಪ್ರವೇಶಗಾಗಿ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್, ಲ್ಯಾಪಟಾಪ್, ಎಸಿ/ಎಸ್‍ಟಿ 60% ರಷ್ಟು ಅಂಕ ಪಡೆದವರಿಗೆ 7500 ರೂ, 70% ರಷ್ಟು ಅಂಕ ಪಡೆದವರಿಗೆ 15000/- ರೂ ಪ್ರೋತ್ಸಹ ಧನ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಉಜ್ವಲಾ ಮಗದುಮ ಹೇಳಿದರು.
ವಿಶ್ವಜಲದಿನ: ಸಮಾರಂಭದಲ್ಲಿ ಜಲವಿಶ್ವದಿನ ನಿಮೀತ್ಯ ಜಿಪಂ ಸದಸ್ಯೆ ಆಶಾ ಐಹೊಳೆ, ಇವರಿಂದಾ ಸಸಿಗೆ ನೀರು ಹಾಕಿ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಅವರು ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗದರ್ಶನ ಮಾಡಿದರು.
ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ. ಗುರುರಾಜ ಹೂಗಾರ, ಕಾಂಗ್ರೇಸ್ ಪಕ್ಷದ ಮುಖಂಡ ಪ್ರಶಾಂತ ಐಹೊಳೆ, ನಿವೃತ್ತ ಅಧಿಕಾರಿ, ಎಮ್.ಎಮ್ ಸಯ್ಯದ, ಗ್ರಾಪಂ ಸದಸ್ಯ ಆತ್ಮಾರಾಮ ಶಶಿಕಾಂತ ಕಾಂಬಳೆ, ಗ್ರಾಪಂ ಅಧ್ಯಕ್ಷ ಮಹಮ್ಮದ ಗೌಂಡಿ, ಎಸ್‍ಡಿಎಮ್‍ಸಿ ಅಧ್ಯಕ್ಷ ಸದಾಶಿವ ಪೂಜಾರಿ, ಬಿ ಎಮ್ ಪಾಟೀಲ, ಎಮ್ ಆರ್ ಖಾಂಡೇಕರ, ದೀಲಾವರ ಜಮಾದರ, ವಿ.ಎನ್ ಮಗದುಮ್ ಸೇರಿದಂತೆ ಶಿಕ್ಷಕರು, ಪಾಲಕರು ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here