ಹೋಳಿ ಹಬ್ಬ: ಕಾಮಣ್ಣನ ಮೆರವಣಿಗೆ

0
42
loading...

ಬೈಲಹೊಂಗಲ 23: ಹೋಳಿ ಹಬ್ಬದ ನಿಮಿತ್ಯ ಪಟ್ಟಣದ ಯುವಕರು ಕಾಮಣ್ಣನ ಮೂರ್ತಿಯ ಮೆರವಣಿಗೆ ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು.
ಸೋಮವಾರ ಪೇಠೆಯಲ್ಲಿ ಮಡಿವಾಳರ ಚಾಳ ನಿವಾಸಿಗಳು ನಿರ್ಮಿಸಿದ ಬಿಳಿ ದೋತ್ರ, ರೇಷ್ಮೆ ಅಂಗಿ, ಕೆಂಪು ರುಮಾಲು ಹಾಗೂ ವಿವಿಧ ಅಲಂಕಾರಿಕ ವಸ್ತುಗಳಿಂದ ತಯಾರಿಸಿದ ಕಾಮಣ್ಣ ನೋಡುಗರನ್ನು ಆಕರ್ಷಿಸುವಂತಿತ್ತು. ಶಾಲಾ ವಿದ್ಯಾರ್ಥಿಗಳು, ಯುವಕರು ‘ಕಾಮಣ್ಣನ ಮಕ್ಕಳು ಕಳ್ಳ ನನ್ನ ಮಕ್ಕಳು’ಎಂದು ಹುರುಪಿನಿಂದ ಮೆರವಣಿಗೆಯಲ್ಲಿ ಭಾಗವಹಿಸಿ, ವಾಹನ ಸವಾರರಿಂದ ಅವರಿಂದ ಖುಷಿಗಾಗಿ ಹಣ ವಸೂಲಿ ಮಾಡಿ, ಬೊಬ್ಬೆ ಹಾಕುತ್ತಿರುವ ದೃಶ್ಯ ಕಾಣುತ್ತಿತ್ತು.
ಪ್ರತಿವರ್ಷ ವಿಶಿಷ್ಠವಾಗಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಮುಂಜಾನೆಯಿಂದ ಸಾಯಂಕಾಲದವರೆಗೂ ಕಾಮಣ್ಣನನ್ನು ಬಣ್ಣದ ಪೆಂಡಾಲದಲ್ಲಿ ಇರಿಸಿ ಸಾರ್ವಜನಿಕರ ವೀಕ್ಷಣೆಗೆ ಇಡಲಾಗುತ್ತದೆ. ನಂತರ ಮಧ್ಯರಾತ್ರಿ ಕಾಮದಹಣ ಮಾಡಿ ರಂಗುರಂಗೀನ ಬಣ್ಣದೋಕುಳಿಯಲ್ಲಿ ಯುವಕರು, ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸುತ್ತಾರೆ.

loading...

LEAVE A REPLY

Please enter your comment!
Please enter your name here