ಅಕಾಲಿಕ ಆನೆಕಲ್ಲು ಮಳೆ: ಅಪಾರ ಹಾನಿ

0
56
loading...

ಗೋಕಾಕ : ತಾಲ್ಲೂಕಿನ ಗೋಸಬಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೀಲಕುಂದಿ ಗ್ರಾಮದಲ್ಲಿ ಮಂಗಳವಾರ ಸಂಜೆ ಆನೆಕಲ್ಲಿನಿಂದ ಕೂಡಿದ ಅಕಾಲಿಕ ಮಳೆಸುರಿದು ಶಿಕ್ಷಣ ಸಂಸ್ಥೆಯೊಂದರ ಎಂಟು ಶಾಲಾ ಕೋಠಡಿಗಳ ಮೇಲ್ಚಾವಣಿ ಹಾರಿಹೋಗಿ ಲಕ್ಷಾಂತರ ಮೌಲ್ಯದ ಹಾನಿಯಾಗಿದೆ ಎಂದು ವರದಿಯಾಗಿದೆ.
ಗೋಕಾಕ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ನಡೆಸಲಾಗುತ್ತಿದ್ದ ಶ್ರೀ ಬಸವೇಶ್ವರ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಗೆ ಸೇರಿದ ಎಂಟು ಕೊಠಡಿಗಳಲ್ಲಿ ಅಳವಡಿಸಲಾಗಿದ್ದ ಕವಿವರ್ಯರ, ವಿಜ್ಞಾನಿಗಳ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಮಹಾನ್ ನಾಯಕರು, ರಾಜಕಾರಣಿಗಳಿಗೆ ಸೇರಿದ ಸುಮಾರು 120ಕ್ಕೂ ಅಧಿಕ ತೈಲ ವರ್ಣದ ಭಾವ ಚಿತ್ರಗಳು, ಕೊಠಡಿಗಳಲ್ಲಿ ಅಳವಡಿಸಲಾಗಿದ್ದ 9 ಸಿಸಿಟಿವಿ ಕ್ಯಾಮೆರಾಗಳು, 9 ಮೇಜುಗಳು, 9 ಖುರ್ಚಿಗಳು, 4 ಅಲ್ಮೇರಾಗಳು, ಹೀಗೆ ಇನ್ನೂ ಅನೇಕ ಸಾಮಾನುಗಳು ಸಂಪೂರ್ಣವಾಗಿ ಜಖಂ ಗೊಂಡಿವೆ ಎಂದು ಸಂಸ್ಥೆಯ ಚೇರಮನ್ ಶಿವಲಿಂಗಪ್ಪ ಬೆಳೆಗಾರ ಹಾಗೂ ಪ್ರಧಾನ ಗುರುಗಳಾದ ಪಾಂಡು ಮಹಾಲಿಂಗಪ್ಪ ನಾಯಕ್ಕರ ಕುಲಗೋಡ ಠಾಣಿಗೆ ದೂರುಸಲ್ಲಿಸಿದ್ದು, ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೂ ಅವಘಡ ಕುರಿತು ಮಾಹಿತಿ ನೀಡಿದ್ದಾಗಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here