ಅಧಿಕಾರಿಗಳ ದಾಳಿ: 2.50 ಲಕ್ಷ ಮೌಲ್ಯದ ಅಕ್ರಮ ಮರಳು ವಶ

0
22
loading...

ಖಾನಾಪುರ 26: ತಾಲೂಕಿನ ಮಂಚಾಪುರ (ಕುಟಿನೋನಗರ) ಗ್ರಾಮದ ಬಳಿ ಮಂಗಳವಾರ ತಹಸೀಲ್ದಾರ್ ಎಸ್ .ಎಂ.ಕಾಂಬಳೆ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 50 ಟ್ರಿಪ್ ಗಳಷ್ಟು ಮರಳನ್ನು ವಶಪಡಿಸಿಕೊಂಡು ದೂರು ದಾಖಲಿಸಿಕೊಳ್ಳುವಲ್ಲಿ ಕಂದಾಯ, ಪೊಲೀಸ್ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ದಾಳಿ ಸಂದರ್ಭದಲ್ಲಿ ಅಂದಾಜು 2.50 ಲಕ್ಷ ಮೌಲ್ಯದ ಮರಳನ್ನು ವಶಪಡಿಸಿಕೊಂಡು ಲೋಕೋಪಯೋಗಿ ಇಲಾಖೆಯ ಸುಪರ್ದಿಗೆ ಒಪ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮರಳು ಸಂಗ್ರಹಿಸಿದ ಆರೋಪದ ಮೇಲೆ ಕುಟಿನೋನಗರದ ಐವರ ವಿರುದ್ಧ ದೂರು ದಾಖಲಿಸಲಾಗಿದೆ. ದಾಳಿಯಲ್ಲಿ ಲೋಕೋಪಯೋಗಿ ಎಇಇ ಎಂ ಬಿ ಕುಲಕರ್ಣಿ, ಕಂದಾಯ ನಿರೀಕ್ಷಕ ಮಾರುತಿ ಚೋಟಣ್ಣವರ, ಗ್ರಾಮಲೆಕ್ಕಿಗ ಎಂ.ಬಿ ಮನಗೂಳಿ ಸೇರಿದಂತೆ ಕಂದಾಯ, ಪೊಲೀಸ್ ಹಾಗೂ ಲೋಕೋಪಯೋಗಿ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.

ಪಾರಿಶ್ವಾಡ ಬಳಿ ಅಕ್ರಮ ಮರಳುಗಾರಿಕೆ: ಕ್ರಮಕ್ಕೆ ರೈತರ ಆಗ್ರಹ

ಖಾನಾಪುರ: ತಾಲೂಕಿನ ಪಾರಿಶ್ವಾಡ ಗ್ರಾಮದ ಬಳಿ ಮಲಪ್ರಭಾ ನದಿಯಲ್ಲಿ ಅಕ್ರಮವಾಗಿ ಮರಳು ಶೇಖರಿಸಲಾಗುತ್ತಿದೆ. ಹಾಡು ಹಗಲೇ ಅವ್ಯಾಹತವಾಗಿ ನಡೆದಿರುವ ಈ ದಂಧೆಯಿಂದ ನದಿ ಕಲುಷಿತಗೊಳ್ಳುತ್ತಿದೆ. ನದಿಯಿಂದ ಮರಳು ದಾಸ್ತಾನು ಮಾಡುತ್ತಿರುವವರಿಗೆ ಖಾನಾಪುರ ಹಾಗೂ ನಂದಗಡ ಠಾಣೆಗಳ ಪೊಲೀಸರು ಬೆಂಬಲ ನೀಡುತ್ತಿದ್ದು, ಕೂಡಲೇ ಸಂಬಂಧಪಟ್ಟವರು ಪಾರಿಶ್ವಾಡದಿಂದ ಚಿಕ್ಕಹಟ್ಟಿಹೊಳಿ ಗ್ರಾಮದವರೆಗೆ ನದಿಯಲ್ಲಿ ನಡೆದಿರುವ ಅಕ್ರಮ ಮರಳುಗಾರಿಕೆಯನ್ನು ತಡೆಗಟ್ಟಬೇಕು ಎಂದು ಪಾರಿಶ್ವಾಡ, ಗಾಡಿಕೊಪ್ಪ, ಹಿರೇಹಟ್ಟಿಹೊಳಿ ಮತ್ತು ಹಿರೇಮುನವಳ್ಳಿ ಗ್ರಾಮದ ರೈತರು ಆಗ್ರಹಿಸಿದ್ದಾರೆ.

loading...

LEAVE A REPLY

Please enter your comment!
Please enter your name here